ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಕಲ್ಬುರ್ಗಿ ಜಿಲ್ಲೆಯ ಕವಲಗಾ ಬಿ. (ದಕ್ಷಿಣ ವಲಯ) ಶ್ರೀ ಸಾಧು ಸಿದ್ದಯ್ಯಪ್ಪ ಎಜ್ಯುಕೇಷನಲ್, ಸಾಂಸ್ಕೃತಿಕ ಹಾಗೂ ವೆಲ್ ಫೇರ್ ಟ್ರಸ್ಟ್( ರಿ.), ಕವಲಗಾ (ಬಿ.) ಸಂಚಾಲಿತ ಶ್ರೀ ಅವಧೂತ ನಾಗಲಿಂಗ ಶರಣರು ಶಿಶು ಸಂಸ್ಕಾರ ಕೇಂದ್ರ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಿಮಿತ್ಯವಾಗಿ ಮಾತೃಭೂಮಿ ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಕ್ಕಳಿಗೆ ಶಿಕ್ಷಣವು ಎಷ್ಟು ಮುಖ್ಯವಾಗಿರುತ್ತದೆಯೋ ಸಂಸ್ಕಾರವು ಅಷ್ಟೇ ಮುಖ್ಯವಾಗಿರುತ್ತದೆ. ಭಯ, ಸಂಕುಚಿತ ಭಾವನೆ, ಹಿಂಜರಿಕೆಯನ್ನು ಮಕ್ಕಳಲ್ಲಿ ಹೋಗಲಾಡಿಸಬೇಕು. ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿ, ಉತ್ತಮವಾದ ಜ್ಞಾನ, ಮೌಲ್ಯವನ್ನು ಬೆಳೆಸಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕಡೆಗೆ ಹೆಚ್ಚು ಒತ್ತು ಕೊಡಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ರಸಪ್ರಶ್ನೆ, ಭಾಷಣ, ಸ್ಪರ್ಧೆ, ಸಾಂಸ್ಕೃತಿಕ ಚಟುವಟಿಕೆ, ಕಲಿಕಾ ಉತ್ಸವ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಸೀಮಾ ಪಾಟೀಲ್ ಸಿ.ಆರ್.ಸಿ. ಕಲ್ಬುರ್ಗಿ (ದಕ್ಷಿಣ ವಲಯ ) ರವರು ಮಾತನಾಡಿದರು.
ಕವಲಗಾ ಬಿ. ಗ್ರಾಮದ ಶ್ರೀ ಸಾಧು ಸಿದ್ದಯ್ಯಪ್ಪನ ಮಠವು ಕಲ್ಲು, ಮುಳ್ಳಿನ ಕಂಠಿಗಳಿಂದ ಕೂಡಿರುತಿತ್ತು, ಸಾಧು ಸಿದ್ದಯ್ಯಪ್ಪ ಪೂಜ್ಯರು ಬಂದ ಮೇಲೆ ಅವರ ಅದ್ಭುತವಾದ ಶಕ್ತಿಯಿಂದ ಮಠವು ಸುಂದರವಾಗಿ ಕಾಣುತ್ತಿದೆ, ಅವರಂತೆ ಈಗಿನ ಶ್ರೀ ಅವಧೂತ ನಾಗಲಿಂಗ ಶರಣರ ದಿವ್ಯ ಶಕ್ತಿಯಿಂದ ಮಠವು ಬೆಳೆಯುತ್ತಾ ಹೋಗುತ್ತಿದೆ. ಕವಲಗಾ ಊರಿಗೆ ಶ್ರಮಿಸಿದವರು ಶ್ರೀ ಸಾಧು ಸಿದ್ದಯ್ಯಪ್ಪನವರು. ಕವಲಗಾ ಹಾಗೂ ಸುತ್ತಮುತ್ತಲಿನ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀ ಅವಧೂತ ನಾಗಲಿಂಗ ಅಪ್ಪಾಜಿ ಅವರ ಜೊತೆ ನಾವಿದ್ದೇವೆ ಎಂಬ ಮಾತನ್ನು ಶ್ರೀ ನೀಲಕಂಠ ಬಿರಾದರ್ ಕವಲಗಾ ಬಿ. ಗ್ರಾ. ಪಂ. ಅಧ್ಯಕ್ಷರು ಅವರು ಹೇಳಿದರು.
ಶ್ರೀ ಸಾಧು ಸಿದ್ದಯ್ಯಪ್ಪನವರು ಮಗುವಿನ ಮೇಲೆ ಬೀಳುವ ಕಲ್ಲನ್ನು ತಡೆಯುತ್ತಾರೆ. ಈಗಿನ ನಾಗಲಿಂಗ ಶರಣರು ಧ್ವಾರ ಬಾಗಿಲನ್ನು ಕಟ್ಟುವಾಗ ಸಂಜೆ ಹೊತ್ತು ಮಳೆ ಬರುವ ಸಂದರ್ಭ ಉಸುಕು, ಸಿಮೆಂಟ್ ಕಲಸಿ ಇಟ್ಟಿದ್ದರು. ಕಟ್ಟಡ ಕಟ್ಟುವವರು ಅಪ್ಪಾಜಿ ಮಳೆ ಬಂದರೆ ಕಲಿಸಿಟಿದ್ದ ಉಸುಕು, ಸಿಮೆಂಟು, ನೀರಲ್ಲಿ ಕೊಚ್ಚಿ ಹೋಗುತ್ತದೆ ಎಂದಾಗ ಅಪ್ಪಾಜಿಯವರು ಒಂದು ಮಾತನ್ನು ಹೇಳಿರುತ್ತಾರೆ , ಮಳೆಯು ಆ ಕಡೆಯಿಂದ ಆ ಕಡೆಗೆ ಈ ಕಡೆಯಿಂದ ಈ ಕಡೆಗೆ ಹೋಗುತ್ತದೆ ಎಂದು ಹೇಳಿದರು. ಅದಕ್ಕಾಗಿ ನಾಗಲಿಂಗ ಶರಣರ ಆಶೀರ್ವಾದದಿಂದ ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದು ಲಗಮಾ ದೇವಿ ಆರಾಧಕರು ಕವಲಗಾ ಬಿ ಬೀರಣ್ಣ ಪೂಜಾರಿ ಅವರು ಹೇಳಿದರು.
ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಅವಧೂತ ನಾಗಲಿಂಗ ಶರಣರು ಕಿ, ಪ್ರಾ,ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮುಂದಿನ ದಿನಮಾನಗಳಲ್ಲಿ ನಮ್ಮ ಭಾರತ ದೇಶದ ಪ್ರಧಾನಮಂತ್ರಿ ಆಗಬಹುದು, ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಯಾಗಿ ಶರಣರ ಆಶೀರ್ವಾದದಿಂದ ಮುಂತಾದ ಹುದ್ದೆಗಳನ್ನು ಪಡೆಯುತ್ತಾರೆ ಎಂದು ನಿವೃತ್ತ ಶಿಕ್ಷಕರು ಶಾಮರಾವ್ ಕಲಶೆಟ್ಟಿ ಅವರು ಹೇಳಿದರು.
ನಮ್ಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಸಂಸ್ಕಾರ, ಶಿಕ್ಷಣದ ಜೊತೆಗೆ ಸಂಗೀತ ಪಾಠವನ್ನೂ ಕಲಿಯುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಉತ್ತಮ ಅನುಭವಿ ಶಿಕ್ಷಕರಿಂದ ಮಕ್ಕಳಿಗೆ ಶಿಕ್ಷಣ
ಕೊಡುತ್ತಿದ್ದೇವೆ. ಸರ್ಕಾರದ ನಿಯಮದಂತೆ ಎಲ್ಲಾ ಜಾತಿ, ಧರ್ಮಗಳ ಜಯಂತಿಗಳನ್ನು ಆಚರಿಸುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ 6 ರಿಂದ 8ನೇ ತರಗತಿಯವರೆಗೆ ತರಗತಿಯನ್ನು ಪ್ರಾರಂಭಿಸುತ್ತೇವೆ ಎಂಬ ಮಾತನ್ನು ಸಂಸ್ಥೆಯ ಅಧ್ಯಕ್ಷರ ಅಭಿಲಾಷಯದಂತೆ, ಈ ಸಂಸ್ಥೆಯ ಆಡಳಿತ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವಿವೇಕಾನಂದ ಎಂ ಪೂಜಾರಿ ಅವರು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಜ್ಯೋತಿ ಬೆಳಗಿಸಿದ ಶ್ರೀ ಶ್ರೀ ಶ್ರೀ ಅವಧೂತ ನಾಗಲಿಂಗ ಶರಣರು ಅಧ್ಯಕ್ಷರು ಶ್ರೀ ಸಾಧು ಸಿದ್ದಯ್ಯಪ್ಪ ಸಾಂಸ್ಕೃತಿಕ ಟ್ರಸ್ಟ್ ಕವಲಗಾ( ಬಿ.)
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಸೀಮಾ ಪಾಟೀಲ್ ಸಿ ಆರ್ ಸಿ ಕಲಬುರಗಿ(ದ. ವ. ),
ಇವರೊಂದಿಗೆ ಮಲ್ಲಿಕಾರ್ಜುನ ಎಸ್. ಬದ್ದೋಲಿ ಮಾರ್ಗದರ್ಶಕರು ಶ್ರೀ ಅವಧೂತ ನಾಗಲಿಂಗ ಶರಣರು ಕಿ. ಪ್ರಾ. ಶಾಲೆ, ಕವಲಗಾ (ಬಿ ), ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಹಿಬೂಬ್ ಮುತ್ಯಾ ಕವಲಗಾ ಬಿ, ಮಹಮ್ಮದ್ ಮುತ್ಯಾ ಕವಲಗಾ ಬಿ, ನೀಲಕಂಠ ಬಿರಾದಾರ್ ಗ್ರಾ. ಪಂ. ಅಧ್ಯಕ್ಷರು ಕವಲಗಾ ಬಿ, ವೀರಣ್ಣ ಪೂಜಾರಿ ಶ್ರೀ ಲಗಮಾದೇವಿ ಆರಾಧಕರು ಕವಲಗಾ ಬಿ, ಹಣಮಂತ ಸುಬೇದಾರ್ ಮಾಜಿ ಗ್ರಾ ಪಂ. ಸದಸ್ಯರು ಕವಲಗಾ ಬಿ, ಶಿವಕುಮಾರ್ ಬದ್ದೋಲಿ ಗ್ರಾ. ಪಂ. ಸದಸ್ಯರು ಕವಲಗಾ ಬಿ, ಬಸಪ್ಪ ಪೂಜಾರಿ ಕಂಬಳಿ ಗ್ರಾ. ಪಂ. ಸದಸ್ಯರು ಕವಲಗಾ ಬಿ, ವಾಯಿದಸಾಬ್ ಕೋಬಾಳ ಗ್ರಾ. ಪಂ. ಸದಸ್ಯರು ಕವಲಗಾ ಬಿ, ಬಾಬು ಸುಬೇದಾರ ಗ್ರಾ. ಪಂ. ಸದಸ್ಯರು ಕವಲಗಾ ಬಿ, ಶಾಂತಾಬಾಯಿ ಬಿ. ಕಲಶೆಟ್ಟಿ ಗ್ರಾ. ಪಂ. ಸದಸ್ಯರು ಕವಲಗಾ ಬಿ, ಶಾಮರಾವ ಕಲಶೆಟ್ಟಿ ನಿವೃತ್ತ ಶಿಕ್ಷಕರು , ಪ್ರಿಯಾಂಕ ಎಸ್ ರಾಠೋಡ್ ಅಧ್ಯಕ್ಷರು ಮಾ. ಭಾ.ಸ. ಅವಧೂತ ನಾಗಲಿಂಗ ಶರಣರು ಕಿ. ಪ್ರಾ. ಶಾಲೆ ಕವಲಗಾ ಬಿ, ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಿದ್ದರಾಮ ಎಸ್. ಎಂ. ಮುಖ್ಯ ಗುರುಗಳು ಶ್ರೀ ಅವಧೂತ ನಾಗಲಿಂಗ ಶರಣರು ಶಿಶು ಸಂಸ್ಕಾರ ಕೇಂದ್ರ ಹಾಗೂ ಕಿ. ಪ್ರಾ ಶಾಲೆ. ಕವಲಗಾ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು. ಮಹೇಶ್ ಬಿ ಸಹ ಶಿಕ್ಷಕರು ಸ್ವಾಗತಿಸಿದರು. ಭೀಮಾಶಂಕರ್ ಸಹ ಶಿಕ್ಷಕರು ವಂದನಾರ್ಪಣೆ ಮಾಡಿದರು. ಮಲ್ಲಿಕಾರ್ಜುನ್ ಆರ್, ಶ್ರೀಮತಿ ಜ್ಯೋತಿ ವಿ, ಭಾಗ್ಯಶ್ರೀ ಜೆ.ಪಿ ಈರಣ್ಣ ಎಸ್, ನಾಗಮ್ಮ ಬಿ ಆರ್, ಬಂಕಿಮ್ ಚಂದ್ರ ಗುರೂಜಿ.ಈ ಕಾರ್ಯಕ್ರಮದಲ್ಲಿ ಕವಲಗಾ (ಬಿ ), ಕವಲಗಾ (ಕೆ ) ಬಸವಪಟ್ಟಣ, ಬಸನಾಳ, ಮತ್ತು ಬಿದನೂರು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿಣ್ಣರ ಚಿಲಿಪಿಲಿ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ವರದಿ : ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ