ವಿಜಯನಗರ: ಕರ್ನಾಟಕದಲ್ಲಿ ಗ್ರಾಮದೇವತೆಗಳ ಆರಾಧನೆ ದಟ್ಟವಾಗಿದೆ. ನಮ್ಮಲ್ಲಿ ಪಂಚಗಣಾಧೀಶರ ಉತ್ಸವಗಳು, ಸಾಂಸ್ಕೃತಿಕ ವೀರರ ಜಾತ್ರಾ ಮಹೋತ್ಸವಗಳು, ಹಟ್ಟಿ ಪರಿಷೆಗಳು ವಿಶೇಷ. ದ್ರಾವಿಡರ ನಾಡಿನಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶ್ರೀ ಗಾಣಗಟ್ಟೆ ಮಾಯಮ್ಮ ದೇವತೆಯ ಜಾತ್ರಾ ಮಹೋತ್ಸವವು ದಿ. 12- 03-2025 ರಂದು ವಿಜೃಂಭಣೆಯಿಂದ ಜರುಗಿತು. ಗಾಣಗಟ್ಟೆ ಮಾಯಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ, ಜಗಳೂರು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ದೇವೇಂದ್ರಪ್ಪ, ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ. ರಘುಮೂರ್ತಿ, ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಬಸವಂತಪ್ಪ, ಕರ್ನಾಟಕ ದ್ರಾಕ್ಷಾ ರಸ ನಿಗಮ ಮಂಡಳಿಯ ಅಧ್ಯಕ್ಷರಾದ ಮಾನ್ಯ ಡಾ. ಯೋಗೇಶ ಬಾಬು, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಎನ್. ಟಿ. ತಮ್ಮಣ್ಣನವರು ಅಧಿವೇಶನ ಮಧ್ಯೆ ತನ್ನ ಮಣ್ಣಿನ ಭಾವನೆಗಳನ್ನು ಗೌರವಿಸಲು, ತಮ್ಮ ಕ್ಷೇತ್ರ ಮತ್ತು ನಾಡಿನ ಒಳಿತಿಗಾಗಿ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಪೂಜೆ ಸಲ್ಲಿಸಿದರು. ಜನರು ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಬಾಳುವಂತೆ ಪ್ರಾರ್ಥಿಸಿದರು. ಜನರ ಯೋಗ ಕ್ಷೇಮ ಹಾಗೂ ಕೆಲವು ಹಳ್ಳಿಗಳಲ್ಲಿ ಬೇಸಿಗೆ ಆರಂಭವಾದ ದಿನದಿಂದಲೂ ಕುಡಿಯುವ ನೀರಿಗೆ ಕೆಲವೊಂದು ಕಡೆ ಅಡೆತಡೆ ಉಂಟಾಗಬಹುದು ಅಂತ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಹಾಗೂ ಯಾವುದೇ ಹಳ್ಳಿಯಲ್ಲಿ ನೀರಿನ ಕೊರತೆ ಕಂಡುಬಂದಲೇ ಗ್ರಾಮ ಪಂಚಾಯಿತಿ ಅಧಿಕಾರಿ ತಿಳಿಸಿ ಎಂದರು.
ಕೆಲವೊಂದು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದೆ ಹಳ್ಳಿಗೆ ಕೂಡಲೇ ನಮ್ಮ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿ ಬಂದಿದ್ದಾರೆ ಹಾಗೂ ಮುಂದೆ ಯಾವುದೇ ಸಮಸ್ಯೆ ಬರದ ಹಾಗೆ ನೋಡಿಕೊಳ್ಳಬೇಕು ಅದು ನಮ್ಮ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಯುವಕರು ಹಾಗೂ ಹಿರಿಯ ನಾಗರಿಕರು, ಮಹಿಳೆಯರು ಸುತ್ತಮುತ್ತಲಿನ ಹಳ್ಳಿಗಳು ಸಾರ್ವಜನಿಕರು ಹಾಗೂ ಗಾನಗಟ್ಟೆ ಗ್ರಾಮದ ದೈವಸ್ಥರು ಹಾಗೂ ಗ್ರಾಮಸ್ಥರು ಇನ್ನೂ ಮುಂತಾದವರು ಸೇರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ