ಶಿವಮೊಗ್ಗ : ಸ್ಪಂದನ (ರಿ.) ಸಾಗರ , ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ , ಕಾಲೇಜು ವಿದ್ಯಾರ್ಥಿಗಳಿಗಾಗಿ ಎಂಟು ದಿನಗಳ ರಂಗ ತರಬೇತಿ ಶಿಬಿರವನ್ನು ಹರಿವು ಹೆಸರಿನಲ್ಲಿ ಆಯೋಜಿಸಿದೆ.
ಇದು ದಿನಾಂಕ 12:03:25 ರಿಂದ 19:03:25 ರವರೆಗೆ ಸಾಗರದ ಶಿವಪ್ಪನಾಯಕ ನಗರದ ಭೂಮಿ ರಂಗಮನೆಯಲ್ಲಿ ನಡೆಯಲಿದೆ.
ನಾಳೆ ದಿನಾಂಕ 12:03 : 25 ರ
ಸಂಜೆ ನಾಲ್ಕು ಗಂಟೆಗೆ ಇದರ ಉದ್ಘಾಟನೆ ನಡೆಯಲಿದ್ದು, ಶ್ರೀ ಪರಶುರಾಮ್ ಸೂರನಗದ್ದೆ ಚಾಲನೆ ನೀಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗದ ಸಹಾಯಕ ನಿರ್ದೇಶಕರಾದ ಉಮೇಶ್ ಎಚ್. ಅಧ್ಯಕ್ಷತೆ ವಹಿಸಲಿದ್ದು ಸ್ಪಂದನದ ಕಾರ್ಯದರ್ಶಿ ಶಿವಕುಮಾರ್ ಉಳವಿ ಉಪಸ್ಥಿತರಿರುತ್ತಾರೆ.
ಆಸಕ್ತ ಸುಮಾರು 25 ಕ್ಕೂ ಹೆಚ್ಚು ವಿಧ್ಯಾರ್ಥಿ ಯುವಕರು ಭಾಗವಹಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ರಂಗಾಸಕ್ತರಿಗೆ ಆತ್ಮೀಯ ಸ್ವಾಗತವಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ