ಬಳ್ಳಾರಿ / ಕಂಪ್ಲಿ : ಎಮ್ಮಿಗನೂರ ಗ್ರಾಮದ ಗ್ರಾಮ ಪಂಚಾಯತಿ ಸುಭಾಂಗಣದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು
ಈ ವೇಳೆ ಪಿಡಿಒ ಲಕ್ಷ್ಮಣ್ ತಾರ ನಾಯಕ್ ಮಾತನಾಡಿ ಪ್ರತಿಯೊಬ್ಬರು ದಾರ್ಶನಿಕರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದ್ದರು.
ನಂತರ ಶಿಕ್ಷಕ ಎಸ್ ರಾಮಪ್ಪ ಮಾತನಾಡಿ ಮೊದಲಿನಿಂದಲೂ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಸಮ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದ ಚಿಂತಕ ಎಂದರೆ ತಪ್ಪಾಗಲಾರದು. ಮಾನವ ಕುಲಕ್ಕೆ ಒಳಿತಾಗಬೇಕು ಎಂಬ ಉದ್ದೇಶದಿಂದ ಎಲ್ಲಾ ಸಮುದಾಯದಲ್ಲೂ ಶಿವ ಜ್ಞಾನವನ್ನು ಬಿತ್ತಲು ಪ್ರಯತ್ನ ಪಟ್ಟ ರೇಣುಕಾಚಾರ್ಯರು, ವಿಶ್ವಮಾನವ ಶಾಂತಿಗೆ ಸದಾ ಶ್ರಮಿಸಿದವರು’ ಎಂದರು.
ಈ ಸಂದರ್ಭದಲ್ಲಿ ಬಿ. ಸದಾಶಿವಪ್ಪ ಹೂಗಾರ್ ಉಮೇಶ್ ವೀರೇಶ್ ಬಜಾರ್ ಬಸುರಾಜ್ ಚನ್ನಪಟ್ಟಣ ಬಸವನಗೌಡ ಎಸ್ ರಾಮು ಎಂ ಜೆಡಿಎಸ್ ವೀರೇಶ್ ಲಕ್ಷ್ಮಕಾಂತ ಜಡೆ ಮೂರ್ತಿ ಇತರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ