ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಕೆಇಬಿ ಮಾರ್ಗವಾಗಿ ಆಲ್ದಾಳಕ್ಕೆ ಹಾದು ಹೋಗಿರುವ ಈ ವಿದ್ಯುತ್ ಆಲ್ದಾಳ ಗ್ರಾಮದಲ್ಲಿ ರಾತ್ರಿ-ಹಗಲು ವಿದ್ಯುತ್ ಇಲ್ಲದೆ ಇಲ್ಲಿನ ಜನರು ಪರದಾಡುತ್ತಿದ್ದು ಕೂಡಲೇ ಈ ಗ್ರಾಮಕ್ಕೆ ನಿರಂತರ ವಿದ್ಯುತ್ ಅನ್ನು ಒದಗಿಸಿಕೊಡುವ ಕುರಿತು ಕ.ವಿ.ಪ್ರ.ಸ.ನಿ.ನಿ ಜೆಸ್ಕಾಂ ಶಾಖೆ ಶಹಾಪುರದ ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರು ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಗ್ರಾಮದಲ್ಲಿ ಅನೇಕ ರೈತರು ತಮ್ಮ ತಮ್ಮ ನೀರಾವರಿ ಜಮೀನುಗಳಲ್ಲಿ ಪಂಪಸೆಟ್ ಅಳವಡಿಸಿಕೊಂಡು ಆ ಪಂಪ್ ಸೆಟ್ ಗಳ ಮೂಲಕವೇ ನೀರು ಹರಿಬಿಡುತ್ತಿದ್ದು ಈ ಗ್ರಾಮದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನಿಂದ ಮೋಟಾರ ಚಲಾವಣೆಯಾಗದೇ ಸುಟ್ಟು ಹೋಗುತ್ತಿದ್ದು ಕಾರಣ ಕೂಡಲೇ ಈ ಗ್ರಾಮಕ್ಕೆ ನಿರಂತರ ವಿದ್ಯುತ್‌ನ್ನು ಒದಗಿಸಿ ಗ್ರಾಮದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು. ಒಂದು ವೇಳೆ ನಮ್ಮ ಮನವಿ ಪತ್ರಕ್ಕೆ ತಾವುಗಳು ನಿರ್ಲಕ್ಷಿಸಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ರೈತ ಸಂಘದ ವತಿಯಿಂದ ತಮ್ಮ ಕಛೇರಿಯ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವಾಸುದೇವ ಮೇಟಿ ಬಣ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಅಗರಟಗಿ ಹಾಗೂ ಶಹಾಪುರ ತಾಲೂಕು ಅಧ್ಯಕ್ಷರಾದ ದೇವೇಂದ್ರಪ್ಪ ಕೋಲ್ಕರ್ ಶಿರವಾಳ್, ತಾಲೂಕು ಉಪಾಧ್ಯಕ್ಷರಾದ ರಾಜು, ತಾಲೂಕು ಸಂಚಾಲಕ ಭೀಮರಾಯ ಇಟ್ಟಗಿ, ಆಲ್ದಾಳ ಹೋಬಳಿ ಅಧ್ಯಕ್ಷ ಚಂದ್ರಕಾಂತ್ ಅಣಬಿ, ಗೌರವಾಧ್ಯಕ್ಷ ಬಾಬು ಆಲ್ದಾಳ, ಗ್ರಾಮ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು ,ಪದಾಧಿಕಾರಿಗಳು
ಸದಸ್ಯರು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.
- ಕರುನಾಡ ಕಂದ