ವಿಜಯಪುರ/ ಇಂದು ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದಲ್ಲಿ ದಿ. 12-03-2025 ರಂದು ಮಧ್ಯಾಹ್ನ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೆಯ ತರಗತಿಯ ವಿಧ್ಯಾರ್ಥಿಗಳಿಗೆ ಶುಭ ಕೋರುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನಿದ್ಯವನ್ನು ಡಾ. ಎಂ. ಜಿ. ಹಿರೇಮಠ, ವಹಿಸಿ ಸರಸ್ವತಿ ಪೋಟೋ ಪೂಜೆಯನ್ನು ನೆರೆವೇರಿಸಿದತು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC, ಅಧ್ಯಕ್ಷರಾದ ಚನ್ನಪ್ಪಗೌಡ ಎಸ್. ಬಿರಾದಾರ ವಹಿಸಿ ಮಾತನಾಡಿದರು.
ನಮ್ಮ ಕೆ.ಜಿ.ಎಸ್. ಹಂದಿಗನೂರ ಶಾಲೆಯಲ್ಲಿ ಸಾಕಷ್ಟು ಸಮಸ್ಯಗಳು ಇದ್ದು ಅದರಲ್ಲಿ ಸರಿಯಾಗಿ ಕೋಣೆಗಳು ಇರುವುದಿಲ್ಲ ಮತ್ತು ಕುಡಿಯುವ ನೀರಿನ ಸರಬರಾಜು ಇರುವುದಿಲ್ಲ ಮತ್ತು ಶಾಲೆಗೆ ಸರಿಯಾಗಿ ಕಂಪೌಂಡ ಇರುವುದಿಲ್ಲ ಸರಕಾರದಿಂದ ವಿವಿಧ ಯೋಜನೆಗಳ ಮೂಲಕ ಲಕ್ಷ ಲಕ್ಷ ಹಣ ಬಂದರೂ ಕೂಡಾ ಅದು ಪ್ರಯೋಜನವಾಗಿಲ್ಲ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡಾ ಇದುವರೆಗೂ ಸ್ಪಂದಿಸಿರುವುದಿಲ್ಲ ಆದ ಕಾರಣ ನಮ್ಮ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಶಾಲೆಗೆ ಬೀಗ ಹಾಕಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಹಾಗೂ ಉಪಾಧ್ಯಕ್ಷರಾದ ಮಡಿವಾಳಪ್ಪ ಗುಬ್ಬೇವಾಡ ಹಾಗೂ ಸದಸ್ಯರುಗಳಾದ ಸಿದ್ದನಗೌಡ ಬಿರಾದಾರ, ರುದ್ರಗೌಡ ಚನಗೊಂಡ, ಚಂದ್ರಶೇಖರ ಗೌಡಗೇರಿ, ಹಾಗೂ ಮುಖ್ಯ ಅತಿಥಿಗಳಾಗಿ ಮಡಿವಾಳಪ್ಪ ದ್ವಾಯಾ, (ಮಾಜಿ ಗ್ರಾ.ಪಂ.ಅಧ್ಯಕ್ಷರು) ಸಿ.ಆಯ್.ಬಿಂಗೇರಿ, ಗ್ರಾಮದ ಮುಖಂಡರು, ಅಶೋಕ ಅಂಚೆಗಾವಿ, (ಬಸವದಳ ಅಧ್ಯಕ್ಷರು) ರಮೇಶ ಪಾಟೀಲ, (ಮಾಜಿ ಗ್ರಾ.ಪಂ,ಸದಸ್ಯರು) ಶಿವಾನಂದ ವಾಲಿ, (ಭೂ ದಾನಿಗಳು) ಭೀಮರಾಯ ಬಿಂಗೋಳ್ಳಿ ( ಗ್ರಾ.ಪಂ.ಸದಸ್ಯರು) ಸಚಿನಗೌಡ ಪಾಟೀಲ, (ಗ್ರಾ.ಪಂ.ಸದಸ್ಯರು) ರಾಚನಗೌಡ ಚನಗೊಂಡ, ರಮೇಶ ರಾಠೋಡ, ಸೋಮನಗೌಡ ಬಿರಾದಾರ, ಹಾಗೂ ಶಾಲೆಯ ಮುಖ್ಯ ಗುರುಗಳಾದ ವ್ಹಿ, ಆರ್, ಕುಲಕರ್ಣಿ, ಅಶೋಕ ಜಂಬೆನಾಳ, (ಎಮ್,ಪಿ,ಎಸ್) ಮುಖ್ಯ ಗುರುಗಳು, ಎಸ್, ಎಸ್, ಬಿರಾದಾರ, ಹಿರಿಯ ಶಿಕ್ಷಕರು, ಸಿ.ಜಿ.ಬಿರಾದಾರ, (ಶಾಂತೇಶ್ವರ ಶಾಲೆಯ ಶಿಕ್ಷಕರು) ಹಾಗೂ ಶಾಲೆಯ ಸಹ ಶಿಕ್ಷಕರು, ಶ್ರೀಮತಿ ಮಂಜುಳಾ ಬಿರಾದಾರ, ಎಸ್, ಡಿ,ಪತ್ತಾರ, ಹಾಗೂ ಕಾರ್ಯಕ್ರಮವನ್ನು ವಿಜಯಕುಮಾರ ಚಿಂಚೊಳ್ಳಿ ಸ್ವಾಗತಿಸಿದರು.
ಎಸ್. ಡಿ. ನನಶೆಟ್ಟಿ ನಿರೂಪಿಸಿದರು.
ಶ್ರೀಕಾಂತ ಹಿರೇಮಠ ವಂದಿಸಿದರು.
ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿ : ಹಣಮಂತ ಚ. ಕಟಬರ್