ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ತ್ರೀ ಅಬಲೆ ಅಲ್ಲ, ಅವಳು ಸಬಲೆ : ನವ್ಯಾ ಎಂ. ನೆಲಾಗಣಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಶ್ರೀ ಶರಣಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆ ಒಂದು ಕಾಲ ಇತ್ತು ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ, ಮನುವಿನ ಕಾಲದಲ್ಲಿ ಸ್ತ್ರೀ ಎಂದಿಗೂ ಸ್ವಾತಂತ್ರಕ್ಕೆ ಅರ್ಹಳಲ್ಲ, ಆದರೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಪುರುಷರಷ್ಟೇ ಸರಿ ಸಮಾನವಾಗಿ ದುಡಿಯುತ್ತಿದ್ದಾಳೆ, ಗಗನದೆತ್ತರಕ್ಕೆ ಹಾರಿದ್ದಾಳೆ, ಇದಕ್ಕೆಲ್ಲಾ ಕಾರಣ ನಮ್ಮ ಸರಕಾರಗಳು ಹೆಣ್ಣು ಮಕ್ಜಳಿಗೆ ಹತ್ತು ಹಲವಾರು ಯೋಜನೆ ರೂಪಿಸಿ ಜಾರಿಗೊಳಿಸಿದ್ದು, ಉದಾ : ಸುಕನ್ಯಾ ಸಮೃದ್ಧಿ ಯೋಜನೆ, ಬಾ ಬಾಲೆ ಶಾಲೆಗೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಶಕ್ತಿಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಮನಸ್ವಿನಿ , ಹೀಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಇಂದು ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು ಕಡಿಮೆಯಾಗಿವೆ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಓರ್ವ ಸ್ತ್ರೀ ಇರುತ್ತಾಳೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಎಂದರು. ಧೈರ್ಯO ಸರ್ವತ್ರ ಸಾಧನO, , ಉದ್ಯೋಗO ಸ್ತ್ರೀ ಪುರುಷರ ಲಕ್ಷಣO ಎನ್ನುವಂತಾಗಿದೆ, ಮುಖ್ಯ ಅತಿಥಿಯಾಗಿ ಶ್ರೀ ಮತಿ ಸೌಮ್ಯಾ ದೇಸಾಯಿ ಮಾತನಾಡಿ ಒಬ್ಬ ಆದರ್ಶ ತಾಯಿ ನೂರು ಜನ ಶಾಲಾ ಶಿಕ್ಷಕರಿಗೆ ಸಮಾನಳು ಹಾಗಾಗಿ ಮನೆಯಲ್ಲಿ ತಾಯಂದಿರ ಪಾತ್ರ ಬಹಳ ದೊಡ್ಡದು, ಸ್ತ್ರೀ ಸಹನಾಮಯಿ, ತ್ಯಾಗಮಯಿ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದೇ ವಿನಃ ಕೆಟ್ಟ ತಂದೆ ತಾಯಂದಿರು ಇರಲಾರರು ಎಂದರು. ಶಾಲಾ ಶಿಕ್ಷಕಿ ಈರಮ್ಮ ಕೆ. ಮೂಲಿಮನಿ ಮಾತನಾಡಿ ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎನ್ನುವುದಕ್ಕೆ, ಶ್ರೀ ಮತಿ ಇಂದಿರಾಗಾಂಧಿ, ಸುಷ್ಮಾ ಸ್ವರಾಜ್, ಜಯಲಲಿತಾ, ಕಿತ್ತೂರು ರಾಣಿಚೆನ್ನಮ್ಮ, ಜಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಲ್ಪನಾ ಚಾವ್ಲಾ, ಮದರ್ ತೆರೇಸಾ, ಸುಧಾಮೂರ್ತಿ, ಸಾಲುಮರದ ತಿಮ್ಮಕ್ಕ, ಸಾನಿಯಾ ಮಿರ್ಜಾ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಹೆಸರಿಸಬಹುದು ಎಂದರು‌.
ಇನ್ನೋರ್ವ ಶಿಕ್ಷಕಿ ಕು. ರತ್ನಾ ಬಿ. ಹೊಸಳ್ಳಿ ಮಾತನಾಡುತ್ತಾ ಪ್ರತಿಯೊಬ್ಬರೂ ಹೆಣ್ಣುಮಕ್ಕಳಿಗೆ ಗೌರವ ಕೊಡಬೇಕು ಎಂದರು. ಚಿಕ್ಕ ಮಕ್ಕಳು ಆದ ನೀವು ಇಂದು ಕೇಕ್ ತಂದು ನಮಗೆಲ್ಲಾ ಸಿಹಿ ತಿನ್ನಿಸಿ ತಾವೇ ಕಾರ್ಯಕ್ರಮ ಆಯೋಜನೆ ಮಾಡಿ ನಿರ್ವಹಿಸುತ್ತಿರುವುದು ನಮಗೆ ಅತೀವ ಸಂತಸವನ್ನುoಟು ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು 5 ನೇ ತರಗತಿ ವಿದ್ಯಾರ್ಥಿಗಳಾದ ಕು : ತನುಜಾ ಹಾಗೂ ಸಂಗಡಿಗರು, ಸ್ವಾಗತವನ್ನು ಪುಟ್ಟರಾಜ ಕೆ. ನಿರೂಪಣೆಯನ್ನು ಅರ್ಜುನ್ ಕೆ. ತೊಂಡಿಹಾಳ್ ವಂದನಾರ್ಪಣೆ ಅಮರೇಶ್ ಅಪ್ಪಾಜಿ ನೆರವೇರಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ