ಬೆಂಗಳೂರು: ದಿಗ್ವಿಜಯ ಭಾರತ ಪಕ್ಷ ಈ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅರವಿಂದ್ ರಾಜೀವ ಇವರು 11.3.2025. ಇವರಿಂದ ಬೆಂಗಳೂರು ಕಚೇರಿಯಲ್ಲಿ ಆದೇಶ ಪತ್ರ ನೀಡಿ ಮೈಬೂಬಬಾಷ ಮನಗೂಳಿ ಇವರನ್ನು ವಿಜಯಪುರ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಲ್ಲಾ ಜವಾಬ್ದಾರಿಗಳನ್ನು ನೀಡಿ ಪ್ರತಿಯೊಂದು ಕೆಲಸಗಳನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸಗಳನ್ನು ಮಾಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ಆದೇಶ ಪತ್ರ ನೀಡಿದರು. ಮೈಬೂಬಬಾಷ.ಮನಗೂಳಿ ಇವರಿಗೆ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪ್ರತಿಯೊಬ್ಬ ಬಡವರ ಸೇವೆಯನ್ನು ಮಾಡಿ ಎಲ್ಲೇ ಅನ್ಯಾಯ ಆದರೂ ನ್ಯಾಯ ದೊರಕಿಸಿ ಕೊಡುವುದು ಆದ್ಯ ಕರ್ತವ್ಯ ಸೇವೆ ಮಾಡಲು ಜನ ಚಿಂತನೆ ಊರಿನ ಚಿಂತನೆ ಮತ್ತು ಪ್ರತಿಯೊಂದು ಶಾಲಾ ಕಾಲೇಜುಗಳ ಬಗ್ಗೆ ಒಳ್ಳೆಯ ವಿಚಾರಗಳನ್ನು ತಮ್ಮ ಕೈಯಿಂದ ಎಷ್ಟು ಸಾಧ್ಯತೆ ಅಷ್ಟು ಕೆಲಸಗಳನ್ನು ನಮ್ಮದು ಎನ್ನುವುದು ನಮ್ಮ ಊರಿನ ಕೆಲಸ ಎಂದು ಹೆಮ್ಮೆಯಿಂದ ಆ ಕೆಲಸಗಳನ್ನು ಅನೇಕ ಈಗಾಗಲೇ ಮಾಡಿದ್ದಾರೆ ಎಲ್ಲಿ ಅನ್ಯಾಯ ನಡಿತದೋ ಅಲ್ಲಿ ಇವರು ಕಾಣಿಸುತ್ತಾರೆ ಯಾವುದೇ ಕೆಲಸ ಇರಲಿ ಅದು ನಿಷ್ಠೆಯಿಂದ ಆ ಕೆಲಸಗಳನ್ನು ಮಾಡಿ ಯಶಸ್ವಿ ಗೊಳಿಸುವಂತಹ ವ್ಯಕ್ತಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆದಂತಹ ಮೈಬೂಬಬಾಷ ಮನಗೂಳಿ ಇವರು ಇವರಲ್ಲಿ ಜಾತಿ ಮತ ಎನ್ನುವುದು ಭೇದ ಭಾವನೆ ಇಲ್ಲ ಎಂದು ಯಾರದೇ ಕೆಲಸ ಇರಲಿ ಯಾವುದೇ ಇರಲಿ ಅಧಿಕಾರಿಗಳ ಜೊತೆ ಮಾತನಾಡಿ ಆ ಕೆಲಸಗಳನ್ನು ಮಾಡುತ್ತಾರೆ ಜನರ ಸೇವೆ ಮಾಡಲು ಇವರ ಒಂದು ಕೈ ಮೇಲು ಎಂದು ತಿಳಿಸಿದರು. ದಿಗ್ವಿಜಯ ಭಾರತ ಪಕ್ಷ ಜಿಲ್ಲಾ ಅಧ್ಯಕ್ಷರಾದ ಮೈಬೂಬಬಾಷ ಮನಗೂಳಿ ಇವರು ನಾನು ಬಡವರ ಸೇವೆ ಮಾಡುವುದು ನನ್ನ ಕರ್ತವ್ಯ ಈ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಾ ಈ ಪಕ್ಷ ಉನ್ನತ ಮಟ್ಟಕ್ಕೆ ನಾನು ಕೊಂಡೊಯ್ಯುತ್ತೇನೆ ಎಂದು ನಮ್ಮ ಜಿಲ್ಲೆಯಲ್ಲಿ ಎಲ್ಲಿ ಅನ್ಯಾಯ ನಡಿತಾ ಇದ್ರೂ ಅದನ್ನು ಸರಿ ಪಡಿಸುವ ಜವಾಬ್ದಾರಿ ನನ್ನದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ವರದಿಗಾರರು : ನಜೀರ್ ಅಹ್ಮದ್ ಚೋರಗಸ್ತಿ, ತಾಳಿಕೋಟೆ