ನೆನಪಿದೆ ನನಗೆ ಅದೊಂದು ಹೇಳಿದ ಮಾತೊಂದು
ಅರಿತಿರುವೆ ಇಂದಿಗೂ ನೀ ಹೇಳಿದ ಮಾತು ವೇದ ವಾಕ್ಯಂದು
ನೆನಪುಗಳ ಮೆಲುಕು ಹಾಕುವೆ
ಬದುಕಿನ ಜೊತೆಗೆ ಸಾಗುವೆ
ಸಾಗುವ ದಾರಿಯಲ್ಲಿ ನಿನ್ನಯ ಮಾರ್ಗದಲ್ಲಿ ಜಯಗೊಳಿಸಲಿ ಆಶೀರ್ವಾದ ತೀರ್ಪಿನಲ್ಲಿ
ಅಮ್ಮನ ಗರ್ಭದಲ್ಲಿ ಅಪ್ಪನ ಪ್ರೀತಿ ಕಂಡಿದ್ದೆ
ಆ ಪ್ರೀತಿ ಚಿಗುರಲ್ಲೇ ಹೆಮ್ಮರವಾಗಿ ಬೆಳೆದಿದ್ದೆ
ಜೊತೆಯಾಗಿ ಸಂತಸ ಸಂಭ್ರಮದಿಂದ ನಡೆದಿದ್ದೇ
ಹಲವಾರು ನೀತಿ ಪಾಠಗಳನ್ನು ಕಲಿತಿದ್ದೆ
ಅಪ್ಪ ನೀನೊಂದು ಅರಿಯಲಾಗದ ಚಿಲುಮೆ
ಭರವಸೆಯ ಬದುಕಿಗೆ ಬೆಳಕಾದ ಒಲುಮೆ
ನೀ ಎಂದೆಂದಿಗೂ ನನ್ನ ಗೌರವದ ಹಿರಿಮೆ
ಉತ್ಸಾಹ ಉಲ್ಲಾಸ ತುಂಬಿದ ಹೆಮ್ಮೆಯ ಗರಿಮೆ
ನೆನಪೊಂದು ಕೊನೆಯಾಗದು ಹೃದಯದಲ್ಲಿಹಸಿರಾಗಿರುವುದು
ನೆನಪೊಂದು ಮರೆತಾಗ ಉಸಿರೆ ನಿಲ್ಲುವುದು ನಿಶ್ಚಿತ
ಹೃದಯವಿರುವರೆಗೂ ಹೃದಯವಂತನ ನೆನಪು ಶಾಶ್ವತ
ನೆನಪಿನ ಸಾಗರದಲ್ಲಿ ಅಮೃತ ದೋಣಿ ಸಾಗಲಿ
ಸುಂದರ ಬದುಕಿನಂಗಳಕ್ಕೆ ಪರಮಾತ್ಮನ ದಯೆ ಸದಾ ಇರಲಿ.
- ಕುಮಾರಿ ಅನುರಾಧ ಡಿ ಸನ್ನಿ