ಎತ್ತ ನೋಡಿದರತ್ತ ಕಾಣುತಿದೆ
ಕೋಮು -ದ್ವೇಷ,
ಸ್ವಾರ್ಥಕೆ ಬಲಿಯಾಗಬೇಕೆ
ಈ ಭಾರತ ದೇಶ,
ಯಾಕೆ ಹೀಗಾಗುತಿದೆ,
ಈ ದೇಶದಲ್ಲಿ?!
ಹೊತ್ತಿ ಉರಿಯುತಿದೆ,
ಕೋಮು ದಳ್ಳುರಿಯಲಿ,!
ಈ ದೇಶದಲ್ಲೀಗ,
ಮಾತೆತ್ತಿದರೆ ಮುಷ್ಕರ,
ತಲೆ ಎತ್ತಿದೆ, ಭ್ರಷ್ಟಾಚಾರ!
ನಡೆಸಿಹರು ಸ್ವ ಉದ್ಧಾರಕೆ ಇವರು ಏನೆಲ್ಲಾ ಹುನ್ನಾರ,
ನಮ್ಮಲ್ಲಿಲ್ಲ ಒಕ್ಕಟ್ಟು,
ಉಂಟಾಗಿದೆ ಬಿಕ್ಕಟ್ಟು,!
ಸೌಲಭ್ಯ ಪಡೆವ ನೆಪದಲಿ,
ಸಂವಿಧಾನ ಶಿಲ್ಪಿಗೆ ಸ್ವಜನರಿಂದಲೇ,
ಅಪಮಾನದ ಸಂಕೋಲೆ,
ನಡೆದಿದೆ ಹಾಡುಹಗಲೆ,
ಅಮಾಯಕರ ಕಗ್ಗೊಲೆ,!
ಮಾನವೀಯತೆಗಿಲ್ಲ ಬೆಲೆ,
ಕಳೆದುಕೊಂಡಿದೆ ಅದು ನೆಲೆ,
ಎತ್ತ ನೋಡಿದರತ್ತ ಕಾಣುತಿದೆ
ಕೋಮು -ದ್ವೇಷ, ಹೀಗಾದರೆ
ಆಗದಿರುವುದೇ ದೇಶ,ನಾಶ?
ಬನ್ನಿ ಸೋದರರೇ ನಾವೆಲ್ಲ
ಒಂದೆನ್ನಿ, ಸಾಮರಸ್ಯದ ಸೂತ್ರ,
ಜಾರಿಗೆ ತನ್ನಿ, ಭಾವೈಕ್ಯತೆಯ ಮಂತ್ರ,ನಮ್ಮದೆನ್ನಿ, ಭಾರತಾಂಬೆ, ಕನ್ನಡಾಂಬೆಗೆ
ಕೀರ್ತಿ ತನ್ನಿ…
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು. ಕೊಪ್ಪಳ.
ಪಿನ್ ಕೋಡ್ ೫೮೩೨೩೧.
ತಾ.ಜಿ.ಕೊಪ್ಪಳ.
ಮೊ :೭೯೯೬೭೯೦೧೮೯.