ಬಳ್ಳಾರಿ / ಕಂಪ್ಲಿ : ನಟ ದಿವಂಗತ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ನಗರದ ವಾಹನ ಚಾಲಕರ ಯೂನಿಯನ್ ಸಂಘದ ವತಿಯಿಂದ ಅನ್ನ ದಾಸೋಹ ಸೇರಿದಂತೆ ಸ್ಮರಣೀಯ ಕಾರ್ಯಕ್ರಮ ಇಲ್ಲಿನ ಹಳೆ ಬಸ್ ನಿಲ್ದಾಣದ ಹತ್ತಿರ ನಡೆಯಿತು.
ಪುನೀತ್ ಅವರ ಸಾಮಾಜಿಕ ಕಾರ್ಯಗಳನ್ನು ಮೆಲುಕು ಹಾಕಲಾಯಿತು. ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಾಲ ನಟನಾಗಿ ನಟನೆಗೆ ಮೆಚ್ಚುಗೆ ಪಡೆದ ಅವರು ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಪುನೀತ್ ಅವರು 2002ರಲ್ಲಿ ತೆರೆಕಂಡ ಅಪ್ಪು ಚಿತ್ರ ಈಗ ಮತ್ತೆ ಮರೆ ಬಿಡುಗಡೆ ಆಗಿರುವುದು ಅಭಿಮಾನಿಗಳಲ್ಲಿ ಸಂತೋಷ ಹೆಚ್ಚಾಗಿದೆ.
ಚಾಲಕರ ಯೂನಿಯನ್ ಸಂಘದ ನಾಗರಾಜ, ಬಸವರಾಜ, ಮಂಜಣ್ಣ, ಕರಿಯಪ್ಪ ನಾಯಕ, ಈರಣ್ಣ, ಮಹೇಶ, ಜಿ ಸಂತೋಷ, ಚಂದ್ರಶೇಖರ ಹಾಗೂ ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್