ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು.
ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ನೇತಾರ ಹಾಗೂ ಜನಪ್ರಿಯ ಜನನಾಯಕರಾದ ಇವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಸಂಸದಿಯ ಪಟುವಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ.
ಸರಳತೆ, ಸಭ್ಯತೆ, ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿತ್ವ ಹೊಂದಿರುವ ಇವರು ತಮ್ಮ ನಡೆ ನುಡಿಗಳಿಂದ ಜನಪ್ರಿಯ ವ್ಯಕ್ತಿಯಾಗಿದ್ದರು.
ವೃತ್ತಿಯಲ್ಲಿ ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ, ಹಾಗು ವೀರ ಅರ್ಜುನ, ಮುಂತಾದ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಸೆರೆಮನೆಯಲ್ಲಿರುವಾಗ ಮೇರಿ ಇಕ್ಯಾವನ್ ಕವಿತಾಯೆ, ಸಂಕಲ್ಪ ಕಾಲ ಖೈದಿ, ಕವಿರಾಜ ಕೆ ಕುಂಡಲಿಯಾ ಸೇರಿದಂತೆ ಹಲವು ಕವನ ಸಂಕಲನಗಳು, ಜನಸಂಘ ಔರ್ ಮುಸಲ್ಮಾನ, ಸಂಸದ ಮೇ ತೀನ ಶತಕ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ವಾಜಪೇಯಿಯವರು ಪ್ರಧಾನಿಯಾಗಿರುವ ಸಂಧರ್ಭದಲ್ಲಿ ಕಾರ್ಗಿಲ್ ವಿಜಯ ಪತಾಕೆಯನ್ನು ಹಾರಿಸಿದ್ದು, ಭಾರತ-ಪಾಕಿಸ್ತಾನ ನಡುವೆ ಸೌಹಾರ್ದತೆಯನ್ನು ವೃದ್ದಿಸಲು ಬಸ್ ಸಂಚಾರ (೧೯೯೯) ಆರಂಭಿಸಿರುವುದು ಅಂದಿನ ದಿನ ಭಾರತ ಮತ್ತು ಪಾಕ್ ನಡುವೆ ಶಾಂತಿ, ನೆಲೆಸುವ ಆಶಾದಾಯಕ ಪ್ರಯತ್ನವಾಗಿದ್ದು ಅಸ್ಮರಣಿಯ ಬೆಳವಣಿಗೆಯಾಗಿತ್ತು.
ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ಆರ್ಥಿಕ ಅಭಿವೃದ್ಧಿಗೆ ಒತ್ತು ಕೊಟ್ಟರು. ಬಡ ಜನರ ಆರ್ಥಿಕ ಸಬಲೀಕರಣದ ಮಹತ್ವದ ಉದ್ದೇಶವನ್ನು ಹೊಂದಿದ್ದ ಇವರು ಗ್ರಾಮೀಣ ಅಭಿವೃದ್ಧಿಯಾಗುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡು ಅದನ್ನು
ಸಾಕಾರಗೊಳಿಸಿದರು.
ವಿಶ್ವ ಸಂಸ್ಥೆಯಲ್ಲಿ ಹಿಂದಿ ಮಾತನಾಡುವ ಮೂಲಕ ಇತಿಹಾಸ ನಿರ್ಮಿಸಿದರು.
ಜಗತ್ತಿನ ಹಲವಾರು ದೇಶಗಳ ವಿರೋಧದ ನಡುವೆ ಫೋಕ್ರಾನ ಅಣ್ವಸ್ತ್ರ ಪರೀಕ್ಷೆ ಮಾಡಿ ಇಡೀ ಜಗತ್ತಿಗೆ ಭಾರತದ ಸಾಮರ್ಥ್ಯ ತೋರಿಸಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಣ ಅಭಿಯಾನ ಮುಂತಾದ ಹಲವು ಯೋಜನೆಗಳನ್ನು ರೂಪಿಸಿ ಭಾರತದ ಮಾದರಿ ಪ್ರಧಾನಿ ಎನಿಸಿಕೊಂಡರು.
೨೦೧೫ ರಲ್ಲಿಅತ್ಯಂತ ಗೌರವಯುತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಸೇರಿದಂತೆ ಪದ್ಮವಿಭೂಷಣ , ಲೋಕಮಾನ್ಯ ತಿಲಕ್,ಮತ್ತು ಬಾಂಗ್ಲಾ ವಿಮೋಚನಾ ಯುದ್ದ ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡ ಅಜಾತ ಶತ್ರು ವಾಜಪೇಯಿಯವರು.
ಇವರ ಸಾಧನೆಯ ಸವಿ ನೆನಪು ಹಾಗು ಜನ್ಮ ಶತಮಾನೋತ್ಸವದ ನಿಮಿತ್ಯ ಬೀದರ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಡಾ. ಶ್ರೇಯ ಮಹೇಂದ್ರಕರ ಮತ್ತು ಸ್ವರೂಪರಾಣಿ ನಾಗೂರೆ ಸಂಪಾದಕತ್ವದಲ್ಲಿ ಅಟಲ್ ವಿರಾಸಾತ (ಸುಮಾರು ೫೦ಕವಿಗಳ ಕವಿತೆಗಳು ಒಳಗೊಂಡಿರುವ) ಕವನ ಸಂಕಲನವನ್ನು ಪಕ್ಷದ ಮುಖಂಡರಾದ ಶ್ರೀ ಬಾಬುವಾಲಿಯವರು ಪ್ರಕಾಶಿಸಿದ್ದಾರೆ.
ಅಟಲ ವಿರಾಸಾತ್ ಕವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಠಿಯನ್ನು ಇದೇ ತಿಂಗಳ ೧೨ರಂದು ಮಾನ್ಯ ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆಯವರು ಪುಸ್ತಕ ಬಿಡುಗಡೆ ಮತ್ತು ಉದ್ಘಾಟನೆ ಮಾಡಿ ಮಾತನಾಡಿದರು. ಈ ಸಂಧರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಶ್ರೀ ಸುರೇಶ ಚೆನ್ನಶೆಟ್ಟಿ, ಶಿವ ಕುಮಾರ ಕಟ್ಟೆ, ಶಿವಶಂಕರ ಟೋಕರೇ, ಸಂಗಮೇಶ ಜಾoತೆ ಸೇರಿದಂತೆ ಹಲವಾರು ಪಕ್ಷದ ಮುಖಂಡರು ಸಾಹಿತಿಗಳು ಭಾಗವಹಿಸಿದರು. ಈ ಸಂಧರ್ಭದಲ್ಲಿ ಓಂಕಾರ ಪಾಟೀಲ, ಎಂ. ಜಿ. ದೇಶಪಾಂಡೆ, ಜಯದೇವಿ ಯದಲಾಪುರೆ, ನಿರಹಂಕಾರ ಬಂಡಿ, ರಮೇಶ ಬಿರಾದಾರ, ಅರವಿಂದ ಕುಲಕರ್ಣಿ ವೀರಭದ್ರಪ್ಪ ಉಪ್ಪಿನ ಮುಂತಾದವರು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ. ಶ್ರೇಯಾ ನಡೆಸಿಕೊಟ್ಟರು.
ಲೇಖನ : ಓಂಕಾರ ಪಾಟೀಲ
ಕಾರ್ಯದರ್ಶಿ: ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ್.
ಮೊ : ೬೩೬೦೪೧೩೯೩೩