ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಪ್ರವಾಸ ಮಂದಿರದಲ್ಲಿ ಆಯೋಜಿಸಿದ ಭಾರತ ರತ್ನ ಡಾll ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜಯಂತೋತ್ಸವ ಅಂಗವಾಗಿ ಕಾಳಗಿ ತಾಲೂಕಿನಲ್ಲಿ ಪೂರ್ವಭಾವಿ ಸಭೆ ಮತ್ತು ದಿನಾಂಕ ನಿಗದಿಗಾಗಿ ಪತ್ರಿಕಾ ಗೋಷ್ಠಿ ಕರೆಯಲಾಯಿತು.
ಡಾll ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಕಾಳಗಿ ತಾಲೂಕಿನ ಎಲ್ಲಾ ಗ್ರಾಮದ ದಲಿತ ಮುಖಂಡರು, ಪ್ರಗತಿಪರ ಚಿಂತಕರು, ಅಂಬೇಡ್ಕರ ರವರ ಹಿತೈಷಿಗಳು, ದಲಿತ ಪರ ಸಂಘಟನಾಕಾರರು, ಇವರೆಲ್ಲರಿಗೂ 133 ನೇಯ ಜಯಂತೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾದ ರೋಹಿತ್ ಎಂ. ನಾಗೂರ ಹಾಗೂ ಸಮಿತಿಯ ಸದಸ್ಯರೊಂದಿಗೆ ದಿ. 17.03.2025 ರಂದು ಕಾಳಗಿ ಪ್ರವಾಸ ಮಂದಿರದಲ್ಲಿ 14ನೇ ಏಪ್ರಿಲ್ ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವದ ಪ್ರಯುಕ್ತ ಪುನರ್ ಹೊಸ ಸಮಿತಿ ರಚನೆ ಮಾಡಲು ಸಮಿತಿಯ ವಿಚಾರಣೆಯೊಂದಿಗೆ ದಿ.26. 3.2025 ರಂದು ಮುಂಜಾನೆ 11:00 ಗಂಟೆಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮುದಾಯ ಭವನ ಕಾಳಗಿಯಲ್ಲಿ ಸಭೆ ಕರೆಯಲಿದ್ದು ಈ ಕಾರ್ಯಕ್ರಮಕ್ಕೆ ಅತಿ ಉತ್ಸಾಹದಿಂದ ದಲಿತ ಬಾಂಧವರು, ಅಂಬೇಡ್ಕರ್ ರವರ ಅಭಿಮಾನಿಗಳು, ದಲಿತ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಭಾಗವಹಿಸಿ ಸಮಿತಿಯ ರಚನೆಗೆ ಸಹಕರಿಸಬೇಕೆಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇ ಜಯಂತೋತ್ಸವ ಸಮಿತಿಯ ಗೌರವ ಅಧ್ಯಕ್ಷರು ಮಹೇಂದ್ರ ಕೊಳ್ಳಿ ಕಾಳಗಿ ಅವರು ತಿಳಿಸಿದರು.
ಈ 134 ನೇ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಹೇಂದ್ರ ಕೊಳ್ಳಿ ಗೌರವ ಅಧ್ಯಕ್ಷರು 133 ನೇ ಜಯಂತೋತ್ಸವ ಸಮಿತಿ ಕಾಳಗಿ, ಮಹೇಂದ್ರ ಕೊಳ್ಳಿ ಗೌರವ ಅಧ್ಯಕ್ಷರು 133 ನೇ ಜಯಂತೋತ್ಸವ ಸಮಿತಿ ಕಾಳಗಿ, ಬಸವರಾಜ ಹೊಸಮನಿ ಯುವ ದಲಿತ ಮುಖಂಡರು ಕಾಳಗಿ, ನಾಗರಾಜ ಎಂ. ಬೇವಿನಕರ ಅಧ್ಯಕ್ಷರು ದಲಿತ ಸೇನೆ ತಾಲೂಕ ಸಮಿತಿ ಕಾಳಗಿ, ಬಾಬುರಾವ ಸಿ.ಡೊಣ್ಣರ್ ಮಾಜಿ ಜಯಂತೋತ್ಸವ ಸಮಿತಿ ಅಧ್ಯಕ್ಷರು ಕಾಳಗಿ, ಗೌತಮ ಶಂಕರ್ ವಾಡಿ ದಲಿತ ಯುವ ಮುಖಂಡರು ಕಾಳಗಿ, ಅನಿಲ ಗಂಜಿಗೇರಿ ತಾಲೂಕ ಸಂ. ಸಂಚಾಲಕರು ಕೆ. ಆರ್. ಡಿ. ಎಸ್. ಎಸ್. ಕಾಳಗಿ, ಸೂರ್ಯಕಾಂತ ಮಂತಾ ತಾಲೂಕ ಸಂ. ಸಂಚಾಲಕರು ಡಿ.ಎಸ್.ಎಸ್ ಅಂಬೇಡ್ಕರ್ ವಾದ ಕಾಳಗಿ, ಖತಲಪ್ಪ ಅಂಕನ ಜಿಲ್ಲಾ ಸಂ. ಕಾರ್ಯದರ್ಶಿ ದಲಿತ ಸೇನೆ ಕಲ್ಬುರ್ಗಿ ಈ ಸಭೆಯಲ್ಲಿ ಭಾಗವಹಿಸಿದ್ದರು.
ವರದಿ: ಚಂದ್ರಶೇಖರ ಆರ್ ಪಾಟೀಲ್