ಅಳಿದು ಹೋಗುತ್ತಿದೆ ಭಾವನೆಗಳ ಬಂಧ
ಮಾಯವು ಕೂಡು ಕುಟುಂಬ ಸಂಬಂಧ
ಕೊಳೆತು ನಾರುತ್ತಿದೆ ಸ್ನೇಹ ಅನುಬಂಧ
ಗಟ್ಟಿ ಇಲ್ಲದ ಸಂಸಾರ ಋಣಾನುಬಂಧ.
ಯಾರಿಗೂ ಬೇಕಿಲ್ಲ ಅವಿಭಕ್ತ ಕುಟುಂಬ
ಸ್ವಾರ್ಥತನವೇ ಅಂಟಿದೆ ಮನದ ತುಂಬ
ಕಾಣದಿದ್ದರೂ ಅವರಿಂದಿನ ಬೆನ್ನ ಬಿಂಬ
ಹೊತ್ತು ಸಾಗುವರು ದುರಾಸೆಯ ಜಂಬ.
ಸುತ್ತೆಲ್ಲವೂ ರಂಜಿಸಿ ನಟಿಸುತ್ತಿದೆ ಕಪಟತನ
ಕಾಣದಾಗಿದೆ ಮನ ಒಪ್ಪುವ ಶುದ್ಧ ಗೆಳೆತನ
ಬಯಸದಾಗಿಹರು ನೆಮ್ಮದಿಯ ಬಡತನ
ಎಲ್ಲರಿಗೂ ಬೇಕಾಗಿದೆ ಅಲ್ಪಾವಧಿ ಸಿರಿತನ.
ಈಗೀಗ ಏಕೋ ಮನುಜ ಮೊದಲಿನಂತಿಲ್ಲ
ಸತ್ಯದ ದಾರಿಯು ಕೊಚ್ಚಿ ಹೋಗಿದೆಯಲ್ಲ
ಮಿಥ್ಯ ತುಂಬಿದ ಜೀವನ ನಗುತಿದೆಯಲ್ಲ
ಅಧರ್ಮ ಜಯದ ಹಾದಿ ಹಿಡಿದಿದೆಯಲ್ಲ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.