ಬಳ್ಳಾರಿ / ಕಂಪ್ಲಿ : ಏಪ್ರಿಲ್ ಕೊನೆತನಕ ಎಲ್.ಎಲ್.ಸಿ. ಕಾಲುವೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಆಗ್ರಹಿಸಿದರು.
ಮುನಿರಾಬಾದ್ ನ ನೀರಾವರಿ ಕೇಂದ್ರ ವಲಯದ ತುಂಗಭದ್ರ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಅಭಿಯಂತರಾದ ಎಲ್. ಬಸವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಹಿಂಗಾರು ಬೆಳೆಗಳು ರೈತರ ಕೈಸೇರಬೇಕೆಂದರೆ, ಏಪ್ರಿಲ್ ಕೊನೆ ವಾರದ ತನಕ ನೀರು ಹರಿಸಬೇಕು ಈಗ ಬೆಳೆ ಚೆನ್ನಾಗಿ ಬೆಳೆದಿದ್ದು ಕೆಳ ಭಾಗದಲ್ಲಿ ಭತ್ತ ಕಾಳು ಕಟ್ಟುವ ಹಂತದಲ್ಲಿರುವ ಕಾರಣ ಕಟಾವಿಗೆ ಬರಬೇಕಾದರೆ ಏಪ್ರಿಲ್ ಕೊನೆ ವಾರದ ತನಕ ನೀರು ಅವಶ್ಯಕತೆ ಇರುತ್ತದೆ ಒಂದು ವೇಳೆ ನೀರು ಸಮರ್ಪಕವಾಗಿ ಪೂರೈಕೆ ಆಗದಿದ್ದಲ್ಲಿ ಸುಮಾರು ನೂರಾರು ಕೋಟಿ ಹೆಚ್ಚು ಮೌಲ್ಯದ ಭತ್ತದ ಬೆಳೆ ನಷ್ಟವಾಗುವ ಸಂಭವಿದೆ. ಕಳೆದ ಬೆಳೆಯಲ್ಲಿ ಸರಿಯಾದ ಬೆಳೆ ಹಾಗೂ ಬೆಲೆ ಸಿಗದೆ ಎಕರೆಗೆ 15 ರಿಂದ 20 ಸಾವಿರ ನಷ್ಟವನ್ನು ರೈತರ ಅನುಭವಿಸಿದ್ದಾರೆ. ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಹಗಲಿರುಳು ಎನ್ನದೇ ಬೆಳೆದ ಫಸಲಿಗಾಗಿ ಕಾಯುತ್ತಾರೆ. ಆದರೆ, ರೈತರಿಗೆ ತುಂಬ ತೊಂದರೆಯಾಗುತ್ತದೆ. ಮತ್ತು ಲಕ್ಷಾಂತರ ಬೆಳೆಗಳು ನೀರಿಲ್ಲದೆ, ಫಸಲುಗಳು ಒಣಗುವ ಆತಂಕ ಎದುರಾಗುತ್ತದೆ. ಆದ್ದರಿಂದ ಕೆಳಭಾಗದ ರೈತರ ಬೆಳೆಗಳು ಕೈಸೇರಬೇಕೆಂದರೆ, ಏಪ್ರಿಲ್ ಕೊನೆತನಕ ನೀರು ಹರಿಸಬೇಕೆಂದು ಒಂದು ವೇಳೆ ಪೂರ್ಣ ಬೆಳೆಗೆ ನೀರು ಒದಗಿಸಿದೆ ಇದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಭರಮರೆಡ್ಡಿ ತಾಲೂಕು ಅಧ್ಯಕ್ಷ ವಿ.ವಿರೇಶ, ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಕೆ ಮುರಾರಿ, ರೈತ ಮುಖಂಡರಾದ ಎನ್ ಸೂಗಪ್ಪ, ಆದೋನಿ ರಂಗಪ್ಪ, ಕೆ.ಸುದರ್ಶನ, ಎ. ಸಣ್ಣ ಜಡೆಪ್ಪ, ಎಚ್.ಕೆ. ಗಾದಿಲಿಂಗಪ್ಪ, ಗುಂಡಪ್ಪ, ಸದಾಶಿವಪ್ಪ, ಆನಂದ್ ರೆಡ್ಡಿ, ರೇಣುಕಾ ಗೌಡ, ರೇಣುಕಾ ಸ್ವಾಮಿ, ರಾಜ ಹಾಗೂ ಲಿಂಗಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್
