ಬೀದರ್: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಬೀದರನಲ್ಲಿ ಸೋಮವಾರ ಏರ್ಪಡಿಸಿದ್ದ ಕರ್ನಾಟಕ ಯುವ ರತ್ನ ಡಾ.ಪುನೀತ್ ರಾಜಕುಮಾರ್ 50ನೇ ಜನ್ಮದಿನದ ಪ್ರಯುಕ್ತ ಯುವ ರತ್ನ ಪುನೀತ್ ರಾಜಕುಮಾರ್ ಉತ್ಸವ ಸಮಾರಂಭದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಹವಾ ಮಲ್ಲಿನಾಥ ಅಪ್ಪಾಜಿ ರವರು ದಿವ್ಯ ಸಾನಿಧ್ಯ ವಹಿಸಿ ರಮೇಶ್ ಮರ್ಜಾಪೂರ ರವರಿಗೆ ಉತ್ತಮ ಸಮಾಜ ಸೇವಾ ಪ್ರಶಸ್ತಿ ನೀಡಿ ಪರಮ ಪೂಜ್ಯರು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀ ಎಚ್.ಸುರೇಶ ರಾಜ್ಯಾಧ್ಯಕ್ಷರು ,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಬೀದರ್ ಅಧ್ಯಕ್ಷರಾದ ಅಮೃತರಾವ ಚೀಮಕೊಡೆ , ಶ್ರೀ ಸಲ್ಮಾನ್ ಖಾನ್ ರೂಹಿ ಗ್ರೂಪ್ ಶಿಕ್ಷಣ ಸಂಸ್ಥೆ ಬೀದರ್, ಪಪ್ಪು ಪಾಟೀಲ್ ಖಾನಾಪೂರ,ಅವಿನಾಶ್ ಬೂದರಕರ್, ಶ್ರೀ ಅಭಿ ಕಾಳೆ, ಸುಬ್ಬಣ್ಣ ಕರಕನಳ್ಳಿ, ರಘುಪ್ರಿಯಾ, ಹಣ್ಮುಪಾಜಿ, ನರಸಪ್ಪ ಯಾಕತಪೂರ,ಡಾ.ರಮೇಶ ವರ್ಮಾ, ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.
ವರದಿ: ರೋಹನ್ ವಾಘಮಾರೆ



















