ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನಿ ಡಬ್ಲಿಂಗ್ ದಂಧೆಕೋರರನ್ನು ಅಟ್ಟಾಡಿಸಿ ಸೆರೆ ಹಿಡಿದು ಜೈಲಿಗೆ ಅಟ್ಟಿದ ಪೊಲೀಸರು

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ
ಮಹದೇಶ್ವರ ಬೆಟ್ಟ, ಇಲ್ಲಿ ನೆಲೆಸಿರುವ ಮಾಯ್ಕಾರ ಮಾದಪ್ಪ ಎಂತೆಂತ ಜನ ಜನರಿಗೆ ಆಶ್ರಯ ಕೊಟ್ಟಿದ್ದಾನೋ ಗೊತ್ತಿಲ್ಲ.ಅಮಾವಾಸ್ಯೆ, ಜಾತ್ರೆಗಳಲ್ಲಿ ಹಣ ಕಬಳಿಸುವ ಪ್ರಾಧಿಕಾರದ ಸಿಬ್ಬಂದಿಗಳು ತನ್ನದೆ ಆದ ದಂಧೆಗೆ ಇಳಿದು ವಿಶೇಷ ದರ್ಶನದ ತನಕ ಎಲ್ಲವೂ ಸಹ ದಂಧೆಯನ್ನ ಶುರುವಿಟ್ಟುಕೊಳ್ಳುತ್ತಾರೆ. ವಿಶೇಷ ದರ್ಶನದಲ್ಲಿ ಒಬ್ಬ ₹500 ಕೊಟ್ಟು ಟಿಕೆಟ್ ಖರೀದಿಸಿ ಮುಂದೆ ನಿಂತಿದ್ದ ಸರ್ಪಗಾವಲಿನ ಸಿಬ್ಬಂದಿಗೆ ₹500 ಎಸೆದರೆ ಸಾಕು ಮನೆ ಮಂದಿಯನ್ನೆಲ್ಲಾ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾನೆ. ಇಲ್ಲಿ ಯಾವುದೇ ಪ್ರಾಧಿಕಾರದ ಕಾನೂನುಗಳು ಇಲ್ಲಿ ಸದ್ಬಳಕೆ ಆಗುವುದೇ ಇಲ್ಲ. ಇಲ್ಲಿನ ಪ್ರಾಧಿಕಾರದ ನೌಕರರ ಆಸ್ತಿ ಘೋಷಣೆ ಮಾಡಿಕೊಂಡರೆ ಸಾಕು ಅವರು ಯಾವ ರೀತಿ ಮಾದಪ್ಪನ ಸನ್ನಿಧಿಯನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ. ಬೆಟ್ಟದ ಪೋಲೀಸರು ಎಷ್ಟು ತಪಾಸಣೆ ನಡೆಸಿದರೂ ಸಹ ಅಲ್ಲಲ್ಲಿ ಮದ್ಯದ ಪೌಚ್ ಗಳು ಬಂದು ಬೀಳುತ್ತಿರುತ್ತವೆ ಇಲ್ಲಿನ ಪೋಲೀಸರು ಮದ್ಯದ ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮಗೊಂಡರೂ ಲಿಕ್ಕರ್ ಮಾಫಿಯಾದ ಜನ ರಂಗೋಲೆ ಕೆಳಗೆ ನುಸುಳಿ ಬಿಡುತ್ತಿದ್ದಾರೆ. ಆದರೂ ಸಹ ಅಲ್ಲಲ್ಲಿ ಧಾಳಿ ನಡೆಸಿ ಪೊಲೀಸರು ಮಾದಪ್ಪ ಸನ್ನಿಧಿಯನ್ನು ಪರಿಶುದ್ಧತೆಗೆ ಆದ್ಯತೆ ನೀಡುತ್ತಿದ್ದಾರೆ ಅದರಂತೆ ಇಂದು ಸಂಜೆ ಮನಿ ಡಬ್ಲಿಂಗ್ ದಾಡಲು ತಮಿಳು ನಾಡು ಕಡೆಗೆ ತೆರಳುತ್ತಿದ್ದ ದಂಧೆಕೋರರನ್ನು ಇಲ್ಲಿ PI ಜಗದೀಶ್ ನೇತೃತ್ವದ ತಂದ ಅಡ್ಡ ಹಾಕಿ ಪರ ದಾಳಿಗೆ ಇಳಿದು ಹೊಸ ಪ್ರಕರಣವನ್ನು ಪತ್ತೆ ಹಚ್ಚಿದೆ.
ಮಾಹಿತಿ ಕಲೆಹಾಕಿದ ಬೆಟ್ಟದ P.I ಜಗದೀಶ್ ನೇತೃತ್ವದ ತಂಡ ಕಾವಲು ಕಾದು ಮನಿ ಡಬ್ಬಿಂಗ್ ಹೆಸರಲ್ಲಿ ನಡೆಯುತ್ತಿರುವ ಹಣದಾಸೆಯ ಜನರನ್ನು ವಂಚಿಸಲು ಇಳಿದಿದ್ದ ಆ ಜಾಲವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ತಮಿಳುನಾಡಿನಲ್ಲಿ ಅತಿ ಹೆಚ್ಚು ಮನಿ ಡಬ್ಬಿಂಗ್ ದಂಧೆಯ ಜಾಲಗಳು ಸಕ್ರಿಯವಾಗಿದ್ದೂ ಇದು ವ್ಯಾಪಾರಸ್ಥರನ್ನು ಕೂಲೆ ಕಾರ್ಮಿಕರನ್ನು, ಜೂಜು ಕೋರರನ್ನು , ಮಧ್ಯಮವರ್ಗದ ನೋವುಂಡವರನ್ನು ಬಲೆಗೆ ಕೆಡವಿ ಹಾಕುತ್ತಿದೆ. ಇಲ್ಲಿ ಕೊಟ್ಟ ಹಣಕ್ಕೆ ಎರಡು ಪಟ್ಟು ಹಣ ನೀಡುವ ಭರವಸೆ ನೀಡಿ ಮೊದ ಮೊದಲು ಕೊಟ್ಟ ಹಣಕ್ಕೆ ಅಸಲಿ ಹಣ ನೀಡಿ ವ್ಯವಹಾರ ಕುದುರಿಸುತ್ತಾರೆ. ನಂತರ ಅತಿ ಹೆಚ್ಚು ಹಣ ತಂದಾಗ ಡಬ್ಲಿಂಗ್ ದಂಧೆಕೋರರು ದಾಳಿ ನಡೆಸಿ ಮೇಲೆ ಕೆಳಗೆ ಅಸಲಿ ನೋಟು ಇಟ್ಟು ಮಧ್ಯ ಬಿಳಿ ಹಾಳೆಗಳನ್ನು ಜೋಡಿಸಿ ಓಡಲು ಹೇಳುತ್ತಾರೆ. ಆದರೆ ಮನೆಗೆ ಬಂದ ಹಣದಾಸೆಯ ವ್ಯಕ್ತಿ ಬಿಚ್ಚಿ ನೋಡಿದಾಗಲೇ ಗೊತ್ತಾಗುವುದು ಅಸಲಿ ದಂಧೆಯ ಗುಟ್ಟು ಇದೆ ರೀತಿ ಇಂದು ಸಂಜೆ ಬೆಟ್ಟದ ವ್ಯಾಪ್ತಿಯಲ್ಲಿ ಡಬ್ಲಿಂಗ್ ದಂಧೆಯ ಜಾಲ ಬೆಟ್ಟದ ಹಾಸು ಪಾಸು ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ಕಲೆಹಾಕಿದ P.I ಜಗದೀಶರ ತಂಡ ಹೊಂಚು ಹಾಕಿ ದಂಧೆಕೋರರ ಸಂಚನ್ನು ಬಯಲಿಗೆ ಎಳೆದಿದೆ. ಕಾರಿನಲ್ಲಿ ವಂಚನೆಗೆ ಇಳಿದಿದ್ದ ರಾಮಾಪುರದ ದಂಟಳ್ಳಿಯ ಶೇಖರ್, ಸಂತೆಮರಹಳ್ಳಿಯ ಸುಖೇಶ್ ಎಂಬುವವರು ಜನರನ್ನು ಯಾಮಾರಿಸಲು ಹೋಗಿ ಚಾಲಕನಾಗಿದ್ದ ಸಂತೆಮರಹಳ್ಳಿಯ ಸುಖೇಶ್ ಪರಾರಿಯಾಗಿದ್ದು ದಂಟಳ್ಳಿದ ಶೇಖರನನ್ನು ಬಂಧಿಸಿದ್ದಾರೆ. ಇವರ ಬಳಿ ಇದ್ದ 500 ರೂ ಹೋಲಿಕೆ 100 ಹಾಳೆಗಳಿದ್ದ 370 ಕಟ್ಟು ಬಿಳಿ ಹಾಳೆಗಳನ್ನು ಹಾಗೇ ಅವರ ಬಳಿ ಇದ್ದ ₹1. 11500 ಅಸಲಿ ನೋಟನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸೆರೆ ಸಿಕ್ಕ ಶೇಖರ್ ಎಂಬಾತನನ್ನು ಜೈಲಿಗಟ್ಟಿದ್ದಾರೆ. ಇದರ ಹಿಂದೆ ದೊಡ್ಡ ಗ್ಯಾಂಗ್ ಸಕ್ರಿಯವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ