ಬಳ್ಳಾರಿ/ ಕಂಪ್ಲಿ : ಕಂಪ್ಲಿ ತಾಲೂಕಿನ ಎಮ್ಮಿ ಗನೂರು ಸಮೀಪದ ಹೊಸ ನೆಲ್ಲುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಕೆ ಡಿ ಆರ್ ಡಿ ಪಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಂಡಿದ್ದ ಮೂರು ತಿಂಗಳ ವಿಶೇಷ ಮನೆ ತರಗತಿ ತರಬೇತಿ ಸಮಾರೋಪ ಜರಗಿತು.
ಈ ವೇಳೆ ಶಿಕ್ಷಕ ಟಿ. ಪರಶುರಾಮ್ ಮಾತನಾಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತರಬೇತಿ ಆರಂಭಿಸಿದ್ದು ಸಂತಸ ತಂದಿದೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಕ್ಟೋಬರ್ ತಿಂಗಳಿಂದಲೇ ತರಬೇತಿಯನ್ನು ಆರಂಭಿಸುವ ಮೂಲಕ ಮಕ್ಕಳ ಕಲಿಕೆಗೆ ಇನ್ನಷ್ಟು ಉತ್ತೇಜನ ನೀಡಬೇಕು ಎಂದರು.
ನಂತರ ಸಮನ್ವಯಾಧಿಕಾರಿ ರೇಖಾ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಸ್ಥೆಯು ತರಬೇತಿಯನ್ನು ನಡೆದಿದ್ದು ಪ್ರತಿಯೊಂದು ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕ ಮಂಜುನಾಥ್ ಶಿಕ್ಷಕರಾದ ಸುಖರಾಜ್ ಹನುಮಂತರೆಡ್ಡಿ ಶಿವನೇಗೌಡ ರಾಮಪ್ಪ ಶಿವ ನಾಗಪ್ಪ ಗಂಗಪ್ಪ ಕೆಎಂ ಸರಳ ಒಕ್ಕೂಟದ ಅಧ್ಯಕ್ಷ ಸರೋಜಾ ಸೇವಾ ಪ್ರತಿನಿಧಿ ರೇಣುಕಾ ಇದ್ದರು ಕಾರ್ಯಕ್ರಮವನ್ನು ಶಿಕ್ಷಕ ಎಸ್ ರಾಮು ಸ್ವಾಗತಿಸಿ, ವಂದಿಸಿ ನಿರ್ವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್
