ಬಳ್ಳಾರಿ/ ಕಂಪ್ಲಿ : ಪಟ್ಟಣದ ಕಲ್ಯಾಣಚೌಕಿ ಮಠದ ಕೆ.ಎಂ.ಬಸವರಾಜ ಶಾಸ್ತಿ ಮತ್ತು ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ದಲಿಂಗಯ್ಯ ತಾತನವರ ಮಾರ್ಗದರ್ಶನದಲ್ಲಿ ಮತ್ತು ವೀರಶೈವ ಸಮಾಜದ ಯುವ ಮುಖಂಡರಾದ ಪುಟ್ಟಿ ಸಚಿನ್ ನೇತೃತ್ವದಲ್ಲಿ ಪಟ್ಟಣದ ಐವತ್ತಕ್ಕೂ ಅಧಿಕ ಭಕ್ತರು ಬುಧವಾರ ಶ್ರೀಶೈಲ ಭ್ರಮರಾಂಭದೇವಿ ಮಲ್ಲಿಕಾರ್ಜುನಸ್ವಾಮಿ ದರ್ಶನಕ್ಕೆ ಪಾದಯಾತ್ರೆಯಲ್ಲಿ ತೆರಳಿದರು.
ಬೆಳಗಿನ ಜಾವ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಮತ್ತು ಶ್ರೀ ಕಲ್ಯಾಣಚೌಕಿ ಮಠದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಪಾದಯಾತ್ರೆಗೆ ಕಲ್ಯಾಣಚೌಕಿ ಮಠದ ಕೆ.ಎಂ.ಬಸವರಾಜ ಶಾಸ್ತ್ರಿ ಮತ್ತು ಹೊಸಪೇಟೆ ಮರುಳ ಸಿದ್ಧಾಶ್ರಮದ ಸಿದ್ಧಯ್ಯ ತಾತನವರು ಚಾಲನೆ ನೀಡಿದರು. ಮಾರ್ಗ ಮಧ್ಯೆ ಸಿಗುವ ಬಳ್ಳಾರಿ ಕನಕದುರ್ಗಮ್ಮದೇವಿ ಪೂಜೆ ಸಲ್ಲಿಸಿ ಯಾತ್ರೆಯನ್ನು ಮುಂದುವರೆಸಿದರು.
ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದರ್ಶನಕ್ಕೆ ಪಾದಯಾತ್ರೆ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ಸಾವಿರಾರು ಸದ್ಭಕ್ತರು ಪಾದಯಾತ್ರೆಯಲ್ಲಿ ತೆರಳುತ್ತಿರುವುದು ಕಂಡು ಬಂತು. ರಸ್ತೆಯುದ್ದಗಲಕ್ಕೂ ಮಹಿಳೆಯರು, ಮಕ್ಕಳು ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು. ಪಾದಯಾತ್ರಿಗಳಿಗೆ ಬಳ್ಳಾರಿಯಿಂದ ಆಂದ್ರಪ್ರದೇಶದ ಜೊಪ್ಪಡ ಬಂಗ್ಲೆ ಗ್ರಾಮದವರೆಗೂ ಅಲ್ಲಲ್ಲಿ ಉಚಿತವಾಗಿ ಉಪಹಾರ ಊಟದ ವ್ಯವಸ್ಥೆಯನ್ನು ಮಾಡಿದ್ದರೆಂದು ಹಾಗೂ ಜೊಪ್ಪಡಬಂಗ್ಲೆ ಗ್ರಾಮದಲ್ಲಿ ಸಿರುಗಪ್ಪ ತಾಲ್ಲೂಕು ಗಜಗಿನಹಾಳು ಗ್ರಾಮದ ವೀರೇಶಗೌಡ ಮತ್ತು ಕುಟುಂಬದವರು ಶಿವರಾತ್ರಿಯಲ್ಲಿ 10 ದಿನಗಳ ಕಾಲ ಮತ್ತು ಈಗ 12ದಿನಗಳ ಕಾಲ ಅಂದರೆ ಯುಗಾದಿ ಹಬ್ಬದವರೆಗೂ ಪಾದಯಾತ್ರೆ ಬರುವ ಸಕಲ ಸದ್ಭಕ್ತರಿಗೂ ಬೆಳಗಿನ ಉಪಹಾರ, ಎರಡು ಸಮಯ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆಂದು ಕೆ. ಎಂ. ಬಸವರಾಜಶಾಸ್ತಿ ತಿಳಿಸಿದರು.
ಪಾದಯಾತ್ರೆ ಮಾಡುವುದರಿಂದ ದೈಹಿಕ ಆರೋಗ್ಯ, ಮಾನಸಿಕ ಶಾಂತಿ ನೆಮ್ಮದಿ ದೊರಕಲಿದ್ದು, ದೈಹಿಕವಾಗಿ ಸದೃಢಿರುವವರು ವರ್ಷಕ್ಕೊಮ್ಮೆಯಾದರೂ ಶ್ರೀಶೈಲ ಭ್ರಮರಾಂಭದೇವಿ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಮಾಡಬೇಕೆಂದು ಹೊಸಪೇಟೆ ಮರುಳಸಿದ್ಧಾಶ್ರಮದ ಸಿದ್ದಲಿಂಗಯ್ಯ ತಾತ ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಸಂಘ ಹಾಗೂ ಸಮಾಜದವರು ಸದ್ಭಕ್ತದಿಗಳು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ
