ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮಾಜಮುಖಿ ಚಿಂತನೆಗಳೆ ದೊರೆಸಾನಿ ಕತೆಗಳಾಗಿವೆ ಶಿವಶಂಕರ ಮುತ್ತಿಗಿ

ಬಾಗಲಕೋಟೆ/ ಹುನಗುಂದ :ಸ್ಥಳೀಯ ಹೊನ್ನ ಕುಸುಮ ಸಾಹಿತ್ಯ ವೇದಿಕೆಯಿಂದ ತಿಂಗಳು ಬೆಳಕು ಕಾರ್ಯಕ್ರಮದಡಿಯಲ್ಲಿ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಹವೇಲಿಯ ದೊರೆ ಸಾನಿ ಕಥಾ ಸಂಕಲನದ ವಿಮರ್ಶೆ ದಿ. ೧೬ ರಂದು ವಿಜಯ ಮಹಾಂತೇಶ ಪ.ಪೂ ಕಾಲೇಜಿನಲ್ಲಿ ನೆರವೇರಿತು ಅಧ್ಯಕ್ಷತೆ ವಹಿಸಿದ ಎಸ್. ಎಸ್. ಮುಡಪಲದಿನ್ನಿಯವರು ಮಾತನಾಡಿ ಈ ಭಾಗದ ಮಣ್ಣಿನ ವಾಸನೆ ಈ ಕತೆಗಳಲ್ಲಿವೆ ಓದುಗರ ಮನಸ್ಸನ್ನು ಹಿಡಿದಿಡುವಲ್ಲಿ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಯಶಸ್ವಿಯಾಗಿದ್ದಾರೆಂದು ಅಭಿಪ್ರಾಯಪಟ್ಟರು.
ಕಥಾಸಂಕಲನದ ವಿಮರ್ಶಕರಾಗಿ ಶಿವಶಂಕರ ಮುತ್ತಗಿಯವರು ಮಾತನಾಡಿ ಹವೇರಿ ದೊರೆಸಾನಿ ಕಥಾ ಸಂಕಲನದಲ್ಲಿ ೮ ಕತೆಗಳಿವೆ ಬುದ್ದನ ಅಷ್ಟಾಂಗ ಯೋಗದಂತೆ ಮಾನವನಿಗೆ ಉನ್ನತ ಸಂದೇಶಗಳನ್ನು ನೀಡುವ ಉತ್ತಮ ಕತೆಗಳಾಗಿವೆ ಸಮಾಜಮುಖಿ ಚಿಂತನೆಗಳನ್ನು ಈ ಕತೆಗಳುದ್ದಕ್ಕೂ ಕಾಣಬಹುದು ಜನಸಾಮಾನ್ಯರು ಓದಿ ಅರ್ಥೈಸಿಕೋಳ್ಳುವ ಕತೆಗಳಿರುವುದು ವಿಶೇಷ ಹವೇಲಿ ದೊರೆಸಾನಿ ಕತಾ ಕ್ಷೇತ್ರದಲ್ಲಿ ಗಮನಿಸುವಂತ ಕೃತಿಯಾಗಲು ಮಲ್ಲಿಕಾರ್ಜುನ ಶೇಲ್ಲಿಕೇರಿಯವರು ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.
ಸಿ ಎಸ್ ಚೌಡಾಪೂರವರು ಮಾತನಾಡಿ ಹವೇಲಿ ದೊರೆಸಾನಿ ಕತೆಗಳು ಮಾನವನ ಬದುಕನ್ನು ಉನ್ನತ ಮಟ್ಟಕ್ಕೆರಿಸುವ ಶಕ್ತಿಯನ್ನು ಹೊಂದಿವೆ ಇದೊಂದು ಉತ್ತಮ ಕೃತಿ ಎಂದು ವಿವರಿಸಿದರು.
ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿ ಕನ್ನಡ ಕತಾ ಪ್ರಚಾರಕ್ಕೆ ೧೨೫ ವರ್ಷಗಳಾಗಿವೆ ಕತೆಗಳನ್ನು ರಚಿಸುವ ಪ್ರಕ್ರಿಮೆಯಲ್ಲಿ ತೊಡಗಿರುವುದು ನನಗೆ ಹೆಮ್ಮೆ ಎನಿಸುತ್ತದೆ ವಾಸ್ತವಿಕತೆಯ ಜೊತೆಗೆ ಕಲ್ಪನೆಗಳು ಕತೆಗಾರರಿಗೆ ಬಹಳ ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಹುನಗುಂದದ ಹಿರಿಯ ಸಾಹಿತಿ ಜಿ ವಿ ದೇಶಪಾಂಡೆ, ಬಾಗಲಕೋಟೆಯ ಸಾಹಿತಿ ಎಸ್ ಎಸ್ ಹಳ್ಳೂರ ಶಿಕ್ಷಕಿ ಗೀತಾ ತಾರಿವಾಳ, ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡರು.
ಗೀತಾ ತಾರಿವಾಳ ಪ್ರಾರ್ಥಿಸಿದರು, ಶಿಕ್ಷಕ ಮುತ್ತು ವಡ್ಡರ ನಿರೂಪಿಸಿದರು, ಮಹಿಬೂಬ ಚಿತ್ತರಗಿ ವ೦ದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ