ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪನವರ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನಲೆ ಗ್ರಾಪಂ ಸದಸ್ಯ ಹೆಚ್.ಕುಮಾರಸ್ವಾಮಿ, ಶಿಕ್ಷಣ ಪ್ರೇಮಿಗಳಾದ ಸುರೇಶ, ಮೌನೇಶ ಇವರು ಇಲ್ಲಿನ 95 ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕಾರಗಳಾದ ಪ್ಯಾಡ್ ಮತ್ತು ಪೆನ್ ವಿತರಿಸಿದರು.
ನಂತರ ಗ್ರಾ.ಪಂ ಸದಸ್ಯ ಹೆಚ್. ಕುಮಾರಸ್ವಾಮಿ ಮಾತನಾಡಿ, ಎಸ್ ಎಸ್ ಎಲ್ ಸಿ ಮಕ್ಕಳು ಪರೀಕ್ಷೆ ಭಯ ಇಟ್ಟುಕೊಳ್ಳದೆ, ನಿರ್ಭಯವಾಗಿ ಎದುರಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರ ಪಾಠ, ಪ್ರವಚನ ಸರಿಯಾಲಿ ಆಲಿಸಿ, ಒಂದೆರಡು ಬಾರಿ ನೆನಪು ಮಾಡಿಕೊಳ್ಳಬೇಕು, ಗುರಿ ಜತೆಗೆ ಛಲ ಹೊಂದಿದಾಗ ಮಾತ್ರ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ, ಈ ನಿಟ್ಟಿನಲ್ಲಿ ಮಕ್ಕಳು ಉತ್ಸವದಿಂದ ಪರೀಕ್ಷೆ ಬರೆಯಬೇಕು, ಪ್ರತಿ ವರ್ಷದಂತೆ ಈ ಬಾರಿ 95 ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳಾದ ಪ್ಯಾಡ್ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಿಸಿದ್ದು, ಇದರ ಸದುಪಯೋಗದೊಂದಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ನೆಣಕಿ ಗಿರೀಶ್, ಮುಖ್ಯಶಿಕ್ಷಕಿ ನಿರ್ಮಲಾ, ಮುಖಂಡ ಚೌಡಪ್ಪ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ
