
ಬಳ್ಳಾರಿ / ಕಂಪ್ಲಿ : ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಜೆ. ಎನ್. ಗಣೇಶ ಮಾತನಾಡಿ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದು, ಕರ್ನಾಟಕದಿಂದ ಆಯ್ಕೆಯಾದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಪ್ರತಿ ಕ್ವಿಂಟಾಲ್ಗೆ ಸೂಕ್ತ ಬೆಂಬಲ (MIS) ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಕಲ್ಯಾಣ ಕರ್ನಾಟಕ ಭಾಗವೂ ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅದರಲ್ಲೂ ಕಂಪ್ಲಿ ಕ್ಷೇತ್ರದಲ್ಲಿ ನಾನಾ ಕಡೆ ವ್ಯಾಪಕವಾಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಕೆಂಪು ಮೆಣಸಿನ ಕಾಯಿ ಪ್ರಸ್ತುತ ಮಾರುಕಟ್ಟೆ ಬೆಲೆ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ ಅನೇಕ ರೈತರನ್ನು ಸಾಲದ ಇಕ್ಕಟ್ಟಿಗೆ ಸಿಲುಕಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಆತಂಕ ಎದುರಾಗಿದೆ ಎಂದು ತಿಳಿಸಿದರು.
ನಮ್ಮ ಕ್ಷೇತ್ರದಲ್ಲಿ ಮೆಣಸಿನಕಾಯಿ ಬೆಳೆ ನಂಬಿ ನೂರಾರು ಮಂದಿ ರೈತರಿದ್ದಾರೆ. ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಕೇವಲ ಆರ್ಥಿಕ ನಷ್ಟ ಅಷ್ಟೇ ಅಲ್ಲ, ರೈತರ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಯಿ ಬೀಜ ತಯಾರು ಮಾಡುವ ಖಾಸಗಿ ಕಂಪನಿಗಳು ಸಸಿಗಳಿಗೆ ಇಂತದ್ದೇ ರೋಗ ಬರುತ್ತದೆ ಹಾಗೂ ಅದರ ಔಷಧಿಗಳ ತಯಾರಿಕೆ ಮಾಡಿರುತ್ತಾರೆ. ಇದರ ಅಕ್ರಮದ ಬಗ್ಗೆ ಹಾಗೂ ಮೆಣಸಿನ ಕಾಯಿಗೆ ಆಂಧ್ರದಲ್ಲಿ ನಿಗದಿಯಾದ 11,281 ರೂಪಾಯಿ ಬೆಂಬಲ ಬೆಲೆ ನೀಡಬೇಕು. ತೋಟಗಾರಿಕೆ ಇಲಾಖೆಯಿಂದ ಅನುದಾನ ಸಿಗುತ್ತಿಲ್ಲ ಹಾಗೂ LLC ಭಾಗದ ರೈತರ ಬೆಳೆ ಕಟಾವಿಗೆ ಬರಲು ಏಪ್ರಿಲ್ ವರೆಗೆ ನೀರಿನ ಅವಶ್ಯಕತೆ ಇದೇ ಹಾಗೂ ರೈತರ ಮೇಲಿರುವ ಕೇಸ್ ಹಿಂಪಡಿಯಬೇಕು ಅದೇ ರೀತಿ ದೊಡ್ಡ ದೊಡ್ಡ ಫ್ಯಾಕ್ಟರಿಗಳಿಗೆ ರೈತರು ನೀಡಿದಂತಹ ಭೂಮಿಗೆ ಅವರಿಗೆ ಸರಿಯಾದ ಉದ್ಯೋಗ ನೀಡದೆ ಕಾರ್ಖಾನೆಯವರು ವಂಚಿಸಿದ್ದಾರೆ ರೈತರಿಗೆ ಆದಷ್ಟು ಬೇಗನೆ ಬೆಂಬಲ ಬೆಲೆ ನಿಗದಿಯಾಗಬೇಕೆಂದು ಅಧಿವೇಶನದಲ್ಲಿ ಮಾತನಾಡಿದರು.
ವರದಿ : ಜಿಲಾನ್ ಸಾಬ್ ಬಡಿಗೇರ
