ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದಲಿತ ಸಂಘಟನೆಗಳ ಮುಖಂಡರಿಂದ ಮಂದ ಕೃಷ್ಣ ಮಾದಿಗ ರವರಿಗೆ ಮತ್ತು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ರವರ ಭಾವಚಿತ್ರಕ್ಕೆ ಹಾಲು ಅಭಿಷೇಕ ಮಾಡಿ ಅಭಿನಂದನೆ ಸಲ್ಲಿಸಿದರು.
ರಾಷ್ಟ್ರೀಯ ಮಾದಿಗ ಮೀಸಲಾತಿ ಹೋರಾಟ ಅಧ್ಯಕ್ಷರಾದ ಮಂದ ಕೃಷ್ಣ ಮಾದಿಗ ರವರು ಕಳೆದ 30 ವರ್ಷಗಳಿಂದ ಮಾದಿಗ ಸಮಾಜಕ್ಕೆ ಜನಸಂಖ್ಯೆ ಅನುಗುಣವಾಗಿ ಎ.ಬಿ.ಸಿ.ಡಿ ವರ್ಗೀಕರಣ ಮಾಡಬೇಕೆಂದು ಹೋರಾಟ ನಡೆಸುತ್ತಿದ್ದು ಅವರ ಹೋರಾಟದ ಫಲವಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ರವರು ಮಾದಿಗ ಮೀಸಲಾತಿ ವರ್ಗೀಕರಣ ಪ್ರಕ್ರಿಯೆಯನ್ನು ವಿಧಾನಸಭಾ ಅಧಿವೇಶನದಲ್ಲಿ ಕಾನೂನು ಬದ್ದ ಶಾಸನವನ್ನಾಗಿ ಅವಿರೋಧವಾಗಿ ಜಾರಿಗೆ ಬರುವಂತೆ ಶ್ರಮಿಸಿದ ರೇವಂತ್ ರೆಡ್ಡಿ ರವರಿಗೆ ಹಾಲು ಮತ್ತು ಪುಷ್ಪಾಭಿಷೇಕ ಮಾಡಿ ಅಭಿನಂದನೆ ಸಲ್ಲಿಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ದಲಿತ ಮುಖಂಡರಾದ ಟಿ. ಎನ್. ಪೇಟೆ ರಮೇಶ್ ಮಂದ ಕೃಷ್ಣ ಮಾದಿಗ ರವರ ಹೋರಾಟದ ಪ್ರತಿಫಲವಾಗಿ ಇಂದು ತೆಲಂಗಾಣ ರಾಜ್ಯದಲ್ಲಿ ಮಾದಿಗ ಮೀಸಲಾತಿ ವರ್ಗೀಕರಣ ಜಾರಿಗೆ ಮಾಡಲಾಗಿದೆ ಅದೇ ರೀತಿ ಕರ್ನಾಟಕದಲ್ಲಿ ಕೂಡಾ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೇ ಅದ್ದರಿಂದ ಸಿದ್ದರಾಮಯ್ಯ ರವರಿಗೆ ನೈತಿಕತೆ ಮತ್ತು ಬದ್ದತೆ ಇದ್ದರೆ ಕೂಡಲೇ ರಾಜ್ಯದಲ್ಲಿ ಮಾದಿಗ ಒಳಮೀಸಲಾತಿ ವರ್ಗೀಕರಣ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ನಂತರ ಮಾತನಾಡಿದ ದಲಿತ ಮುಖಂಡರಾದ ರಾಮಾಂಜಿನಪ್ಪನವರು ರೇವಂತ್ ರೆಡ್ಡಿ ರವರಿಗೆ ಅಭಿನಂದನೆ ಸಲ್ಲಿಸಿ ಕರ್ನಾಟಕ ಸರ್ಕಾರ ಏನಾದರೂ ಒಳಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಮಾಡಿದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಾದಿಗರು ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಸಿದ್ದರಾಮಯ್ಯ ರವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಮತ್ತು ಅನಿವಾರ್ಯವಾದರೆ ರಾಜ್ಯಾದಂತ ಹೋರಾಟದ ತೀವ್ರತೆ ಮಾಡಲಾಗುತ್ತದೆ ಮತ್ತು ದಂಗೆ ಏಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ವಳ್ಳುರು ನಾಗೇಶ್, ನರಸಿಂಹಪ್ಪ, ನರಸಪ್ಪ, ಬಿ. ಹೊಸಹಳ್ಳಿ ಮಲ್ಲಿಕಾರ್ಜುನ, ಮಂಗಳವಾಡ ಮಂಜಣ್ಣ, ಕೆ ಪಿ ಲಿಂಗಣ್ಣ ಬಿ ಎಸ್ ಪಿ ಮಂಜು ರಾಮಾಂಜಿನೇಯ (ಬಂಗಾರಪ್ಪ) ರಾಮಾಂಜಿ ವೈ ಎನ್ ಎಚ್ ರಾಮಕೃಷ್ಣ ಇನ್ನು ಅನೇಕ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ ಪೃಥ್ವಿರಾಜು .ಜಿ.ವಿ
