ಚಿಕ್ಕಮಗಳೂರು : ಸರ್ಕಾರಿ ಶಾಲೆಗಳ ಉಳಿವಿಗಾಗಿ ಕೈ ಜೋಡಿಸುವ ಹಲವು ಮನಸ್ಸುಗಳಿವೆ. ನಾವು ಹುಡುಕಬೇಕು ಅಷ್ಟೇ! ಇದಕ್ಕೊಂದು ನಿದರ್ಶನ ಇಲ್ಲಿದೆ. ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಶಾಲೆಗೆ ಎರಡು ಹಸಿರು ಹಾಗೂ ಬಿಳಿ ಬಣ್ಣ ಒಳಗೊಂಡ ಬರೆಯುವ ಫಲಕ ಬೇಕು ಎಂದು ಹಂಚಿಕೊಂಡೆ. ಶರವೇಗದಲ್ಲಿ ಆ ಕಡೆಯಿಂದ ಒಂದು ಪ್ರತಿಕ್ರಿಯೆ ಬಂತು. ‘ನನ್ನ ಹಾಗೂ ನನ್ನ ಸಹೋದರಿ ಕಡೆಯಿಂದ ಒಂದು ಬರೆಯುವ ಫಲಕಕ್ಕೆ ಹಣ ನಾವು ಒದಗಿಸುತ್ತೇವೆ’ ಎಂದು ಹೇಳಿ ಕರೆ ಮುಗಿಯುವುದರೊಳಗೆ ನನ್ನ ಖಾತೆಗೆ 4000/- ಸಾವಿರ ಹಣ ಜಮಾ ಆಗಿತ್ತು. ನನ್ನ ಸಂತಸಕ್ಕೆ ವಿರಾಮವಿರಲಿಲ್ಲ. ವಿಶೇಷವೆಂದರೆ ಇವರು ನನಗೆ ಪರಿಚಯ ಇಲ್ಲ. ಮುಖತಃ ಭೇಟಿಯಾಗಿಲ್ಲ. ಆದರೂ ಇವರ ಸರ್ಕಾರಿ ಶಾಲೆಯ ಮೇಲಿನ ಪ್ರೀತಿ ಜಗತ್ತು ಮೆಚ್ಚುವಂತದ್ದು, ಇಂತಹ ಮಹಾನ್ ಕಾರ್ಯಕ್ಕೆ ಸಾಕ್ಷಿಯಾದ ಮಾನ್ಯ ಸುವರ್ಧನ್ ಯತಿರಾಜ್ ರವರಿಗೆ ಹಾಗೂ ಸಾಮಾಜಿಕ ಜಾಲತಾಣದ ವೇದಿಕೆಯನ್ನು ಕಲ್ಪಿಸಿಕೊಟ್ಟ ಶಿಕ್ಷಣ ಪ್ರೇಮಿಗಳು, ಆತ್ಮೀಯರು ಆದ ಮಾನ್ಯ ಗಿರೀಶ್ ಮೂಡಿಗೆರೆ ರವರಿಗೂ ವೈಯಕ್ತಿಕವಾಗಿ ಹಾಗೂ ನಮ್ಮ ಶಾಲೆಯ ಮಕ್ಕಳ ಮತ್ತು ಪೋಷಕರ ಪರವಾಗಿ ಅನಂತ ಭಾವಬಿಂದು ನಮನಗಳು.
- ಕರುನಾಡ ಕಂದ
