ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುವಾಯೂರು ಪುಣ್ಯಕ್ಷೇತ್ರದ ಸಂಕ್ಷಿಪ್ತ ಪರಿಚಯ

ಗುರುವಾಯೂರ್ ದಕ್ಷಿಣದ ದ್ವಾರಕಾ ಎಂದು ಕರೆಯಲ್ಪಡುವ ಐತಿಹಾಸಿಕ ಶ್ರೀ ಕೃಷ್ಣ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಇದು ಕೇರಳ ಮತ್ತು ಇಡೀ ದೇಶದ ಅತ್ಯಂತ ಪೂಜ್ಯ ಮತ್ತು ಜನಪ್ರಿಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

ಗುರುವಾಯೂರು ಪುಣ್ಯಕ್ಷೇತ್ರದ ಹಿನ್ನೆಲೆ

ನಾರದ ಪುರಾಣದ “ಗುರುಪವನಪುರ ಮಹಾತ್ಮ್ಯ” ಅಧ್ಯಾಯದ ಪ್ರಕಾರ ಪರೀಕ್ಷಿತನ ಮಗ ಜನಮೇಜಯ ರಾಜನು ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ನಾಗನ ಮೇಲಿನ ಪ್ರತೀಕಾರಕ್ಕಾಗಿ, ಸರ್ಪಯಾಗ ಮಾಡಿ, ಲಕ್ಷಾಂತರ ನಿರಪರಾಧಿ ಸರ್ಪಗಳನ್ನು ಕೊಲ್ಲುತ್ತಾನೆ. ಆ ಸರ್ಪಗಳ ಶಾಪದ ಪರಿಣಾಮದಿಂದ ಅವನು ಕುಷ್ಠರೋಗಕ್ಕೆ ಬಲಿಯಾಗುತ್ತಾನೆ. ಆಗ ಸ್ವತಃ ದತ್ತಾತ್ರೇಯ ಸ್ವಾಮಿಯು ಆಗಮಿಸಿ, ರಾಜನು ತನ್ನ ಪಾಪಗಳ ಪ್ರಾಯಶ್ಚಿತ್ತಕ್ಕೆ ಗುರುವಾಯೂರು ಕೃಷ್ಣನ ಪೂಜೆಯಲ್ಲಿ ತೊಡಗಬೇಕೆಂದು ಸೂಚಿಸಿ, ಅದರ ಮಹತ್ತ್ವವನ್ನು ವಿವರಿಸುತ್ತಾನೆ.

ಈ ವಿಗ್ರಹವನ್ನು ಶ್ರೀಮನ್ನಾರಾಯಣನು, ಪದ್ಮಕಲ್ಪದ ಆರಂಭದಲ್ಲಿ ಬ್ರಹ್ಮನಿಗೆ, ಸೃಷ್ಟಿಕಾರ್ಯದ ಅನುಕೂಲಕ್ಕಾಗಿ ಕೊಟ್ಟನು. ವರಾಹಕಲ್ಪದ ಆರಂಭದಲ್ಲಿ, ಸುತಪ ಹಾಗೂ ಪೃಶ್ನಿ ಹೆಸರಿನ ದಂಪತಿ ಸಂತಾನಕ್ಕಾಗಿ ಬ್ರಹ್ಮನನ್ನು ಪ್ರಾರ್ಥಿಸಿದಾಗ, ಬ್ರಹ್ಮನು ಅವರಿಗೆ ಈ ವಿಗ್ರಹವನ್ನು ಪೂಜಿಸಲು ನೀಡಿದನು. ದಂಪತಿ ನಿಷ್ಠೆಯಿಂದ ಭಗವಂತನನ್ನು ಪೂಜಿಸಿದಾಗ, ಮಹಾವಿಷ್ಣುವು ಪ್ರತ್ಯಕ್ಷನಾಗಿ, ತಾನು ಅವರಿಗೆ ಮೂರು ಬಾರಿ ಮಗನಾಗಿ ಹುಟ್ಟುವುದಾಗಿ ವರದಾನ ನೀಡಿದನು. ಅಂತೆಯೇ ಮೊದಲ ಜನ್ಮದಲ್ಲಿ ಭಗವಂತನು ಪೃಶ್ನಿ ಗರ್ಭನಾಗಿಯೂ, ಎರಡನೆಯ ಜನ್ಮದಲ್ಲಿ, ಕಶ್ಯಪ ಅದಿತಿ ಎನಿಸಿಕೊಂಡ ಅವರಿಗೆ ವಾಮನನಾಗಿಯೂ, ಮೂರನೆಯ ಜನ್ಮದಲ್ಲಿ ವಸುದೇವ ದೇವಕಿಯರಾದ ಅವರಿಗೆ “ಶ್ರೀಕೃಷ್ಣ”ನಾಗಿಯೂ ಜನ್ಮತಾಳಿದನು. ಕೃಷ್ಣಾವತಾರದಲ್ಲಿ ಭಗವಂತನು ಈ ವಿಗ್ರಹವನ್ನು ತನ್ನ ಅರಮನೆಗೆ ತರಿಸಿ ಪ್ರತಿಷ್ಠಾಪಿಸಿದನು. ಹಾಗೂ ತಾನೇ ವಿಧಿವತ್ತಾಗಿ ಪೂಜಿಸುತ್ತಿದ್ದನು. ತನ್ನ ಅವತಾರ ಸಮಾಪ್ತಿಯ ಕಾಲದಲ್ಲಿ ಉದ್ಧವನನ್ನು ಕರೆದು, ದ್ವಾರಕೆಯು ಇನ್ನು ಕೆಲವೇ ದಿನಗಳಲ್ಲಿ ಸಮುದ್ರ ಪಾಲಾಗುವುದಾಗಿಯೂ, ಈ ವಿಗ್ರಹವನ್ನು ಬೇರೆ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕೆಂದೂ ಅಪ್ಪಣೆ ಮಾಡಿದನು. ಉದ್ಧವನು ದೇವತೆಗಳ ಗುರು ಬೃಹಸ್ಪತಿ ಹಾಗೂ ವಾಯುದೇವರ ಸಹಾಯ ಕೋರಿದನು. ಅದರಂತೆ ಇಬ್ಬರೂ ಸೂಕ್ತ ಸ್ಥಳವನ್ನು ಅರಸುತ್ತಿದ್ದಾಗ, ಶಿವನಿಂದ ನಿರ್ದೇಶಿಸಲ್ಪಟ್ಟು ಈ ಸ್ಥಳದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಇದೇ ಕಾರಣಕ್ಕಾಗಿ ಈ ಸ್ಥಳಕ್ಕೆ ಗುರುವಾಯು ಊರು ಎಂದು ಹೆಸರಾಯಿತು. ಅಂದಿನಿಂದ ಭಗವಂತನು ಅಲ್ಲಿ ವೈಭವವಾಗಿ ಪೂಜಿಸಲ್ಪಡುತ್ತಿದ್ದಾನೆ. ಪೂಂದಾನಂ, ಬಿಲ್ವಮಂಗಲ, ಠಾಕುರರಂತಹ ಮಹಾನ್‌ ಭಕ್ತರು ಈ ಸ್ಥಳದಲ್ಲಿ ಭಗವಂತನ ಸಾಕ್ಷಾತ್ಕಾರ ಪಡೆದಿದ್ದಾರೆ.

ಸಂಗ್ರಹ : ಪ್ರದೀಪ್ .ಜೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ