
ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಗೆ ಜಿಲ್ಲಾ ಪರಿವೀಕ್ಷಣ ಮತ್ತು ಕಾಲರಾ ನಿಯಂತ್ರಣ ಘಟಕದ ಅಧಿಕಾರಿಗಳು ಭೇಟಿ ನೀಡಿ ಶುದ್ಧ ಕುಡಿಯುವ ನೀರು ಮತ್ತು ಮಧ್ಯಾಹ್ನದ ಬಿಸಿ ಊಟ ಪರಿಶೀಲನೆ ನಡೆಸಿದರು.
ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್ ಮಾತನಾಡಿ ಬೇಸಿಗೆ ಕಾಲ ವಾಗಿರುವುದರಿಂದ ಪ್ರತಿಯೊಬ್ಬರು ಶುದ್ಧವಾದ ನೀರು ಮತ್ತು ಸ್ವಚ್ಛವಾಗಿರತಕ್ಕಂತ ಆಹಾರವನ್ನು ಸೇವನೆ ಮಾಡಬೇಕು. ಒಂದು ವೇಳೆ ಅಶುದ್ಧವಾಗಿರುವ ನೀರು, ಆಹಾರವನ್ನು ತೆಗೆದುಕೊಂಡರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನೀರು ಮತ್ತು ಆಹಾರಕ್ಕೆ ಹೆಚ್ಚಿನ ಒತ್ತುಕೊಟ್ಟು ಆರೋಗ್ಯ ಕಾಪಾಡಿಕೊಳ್ಳಬೇಕೆ ಎಂದರು.
ಈ ವೇಳೆ ಸಿ. ಆರ್. ಪಿ. ಸ್ವಯಂಪ್ರಭ ಮಾತನಾಡಿ ಈಗಾಗಲೇ ಇಲಾಖೆ ವತಿಯಿಂದ ಎಲ್ಲಾ ಶಾಲೆಗಳಿಗೆ ಶುದ್ಧವಾದ ಕುಡಿಯುವ ನೀರನ್ನು ಮಕ್ಕಳಿಗೆ ಒದಗಿಸಲು ಹಾಗೂ ಆಹಾರವನ್ನು ಪರಿಶೀಲಿಸಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಗುರು ಬಿಎಸ್ ಸದ್ದು ಜಾತಪ್ಪ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಉಮಾಮಹೇಶ್ವರಿ ಆರೋಗ್ಯ ನಿರಕ್ಷಣಾಧಿಕಾರಿಗಳಾದ ಕಾಸಿಮ್ ವಲಿ ಎಂ ಬಸನಗೌಡ ಕೃಷ್ಣಮೂರ್ತಿ ಶಿಕ್ಷಕರಾದ ಎಸ್ ರಾಮಪ್ಪ ಶೇಖಣ್ಣ ಸೇರಿದಂತೆ ಇತರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ
