ಬಳ್ಳಾರಿ / ಕಂಪ್ಲಿ : ಡಿಪ್ಲೋಮೋ ಕಾಲೇಜ್ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಅರಿತುಕೊಂಡ ಕಂಪ್ಲಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಿ ರಾಕೇಶ್ ಮಾತನಾಡಿ ಪ್ರತಿನಿತ್ಯ ಕಂಪ್ಲೀಯ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳು ಬಸ್ ಗಳ ಸಮಸ್ಯೆ ಮಧ್ಯೆ ವಿದ್ಯಾಭ್ಯಾಸ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಕಂಪ್ಲಿ ನಗದಿಂದ ಎರಡೂವರೆ ಕಿ.ಮೀ ಹೊರವಲಯದಲ್ಲಿರುವ ಡಿಪ್ಲೋಮೋ ಕಾಲೇಜಿಗೆ ಕಂಪ್ಲಿ ನಗರ ಎಮ್ಮಿಗನೂರು, ಮೆಟ್ರಿ ಕೋಟೆ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಆದರೆ ಇಲ್ಲಿನ ಬೈಪಾಸ್ ಮೂಲಕ ಸಾಕಷ್ಟು ಸಾರಿಗೆ ಬಸ್ಸುಗಳು ಸಂಚರಿಸುತ್ತಿದ್ದರೂ ನಿಲ್ಲಿಸದೆ ಇರುವ ಪರಿಣಾಮ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಸಮಸ್ಯೆಯಾಗುತ್ತಿದೆ. ಕಾಲೇಜು ಬಳಿಯಲ್ಲಿ ವಿದ್ಯಾರ್ಥಿಗಳಿಗೆ ನಿಲುಗಡೆಯ ಬೋರ್ಡ್ ಇದ್ದರೂ ಕೂಡ ಕಾಲೇಜು ಬಳಿಯಲ್ಲಿ ಯಾವುದೇ ಸಾರಿಗೆ ಬಸ್ಸುಗಳು ನಿಲ್ಲುತ್ತಿಲ್ಲ. ಅದರಲ್ಲೂ ಸುಡುವ ಬೇಸಿಗೆಕಾಲ ಇನ್ನು ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕಾದರೆ ವಾಲ್ಮೀಕಿ ವೃತ್ತದಲ್ಲಿ ಬರುವ ದ್ವಿಚಕ್ರ, ವಾಹನಗಳಿಗೆ ಕೈಸನ್ನೇ ಮಾಡಿ ವಾಹನಗಳನ್ನು ನಿಲ್ಲಿಸಿ ಕಾಲೇಜಿಗೆ ತೆರಳುವ ದುಸ್ಥಿತಿ ಎದುರಾಗಿದೆ, ಇನ್ನು ಕೆಲ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ದೂರದ ಕಾಲೇಜಿಗೆ ಹೋಗಬೇಕಾದ ಪರಿಸ್ಥಿತಿ ತಂದದೂಡ್ಡಿದೆ ಇನ್ನು ಕಾಲೇಜು ಬಿಟ್ಟ ನಂತರ ಮನೆಗಳಿಗೆ ಹಿಂತಿರುಗಬೇಕಾದರೆ ಈ ದಾರಿಯಲ್ಲಿ ಬರುವ ಗಾಡಿಗಳಿಗೆ ಡ್ರಾಪ್ ಕೇಳಿ ಹೋಗುತ್ತಿರುವುದು ಸಾಮಾನ್ಯವಾಗಿದೆ. ಸಿಟಿ ಬಸ್ ಗಳ ವ್ಯವಸ್ಥೆ ಹಾಗೂ ಸಾರಿಗೆ ನಿಲುಗಡೆ ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸಾಮಾಜಿಕ ಕಳಕಳಿಯ ಮನವಿ ಮಾಡಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ
