ಬಳ್ಳಾರಿ / ಕಂಪ್ಲಿ : ನಾಳೆ ನಡೆಯುವ SSLC ಪರೀಕ್ಷೆ ಕೇಂದ್ರ ಸುಗ್ಗಿನಹಳ್ಳಿ ಗ್ರಾಮದ ವಿದ್ಯಾ ಭಾರತಿ ಶಾಲೆಗೆ KSRTC ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ ಇರುವುದರಿಂದ ಈ ಶಾಲೆಗೆ ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಾರಹಳ್ಳಿ ಚಿನ್ನಾಪುರ ಮತ್ತು ಮೆಟ್ರಿ ಗ್ರಾಮದ 10ನೇ ತರಗತಿ ಮಕ್ಕಳಿಗೆ ಪರೀಕ್ಷೆ ಕೇಂದ್ರಕ್ಕೆ ತೆರಳಲು ಕುರುಗೋಡು ಮತ್ತು ಕಂಪ್ಲಿ KSRTC ವ್ಯವಸ್ಥಾಪಕರಿಗೆ ಮನವಿ ಮಾಡಲಾಯಿತು.
ವ್ಯವಸ್ಥಾಪಕರು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬಸ್ ಸಂಚಾರ ಒದಗಿಸಿಕೊಡುವ ಭರವಸೆ ನೀಡಿದರು.
ಇದೆ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಗುಂಡಮ್ಮ ಅವರ ಪತಿ ಚೌಡಪ್ಪ ಉಪಾಧ್ಯಕ್ಷರಾದ ಗಿರಿ ಗ್ರಾಮಪಂಚಾಯಿತಿ ಸದಸ್ಯರಾದ ಹೆಚ್. ಕುಮಾರಸ್ವಾಮಿ ಮತ್ತು ಉಪ್ಪಾರಹಳ್ಳಿ ನಾಗರಾಜ ಹಾಗೂ ಶಿಕ್ಷಣ ಪ್ರೇಮಿ ಚೇತನ್ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ
