ಬಳ್ಳಾರಿ/ ಕಂಪ್ಲಿ : ಎಮ್ಮಿಗನೂರ ಗ್ರಾಮದ ಬಳ್ಳಾಪುರ ರಸ್ತೆಯ ಪವಾಡ ಪುರುಷ ಲಿಂಗದಳ್ಳಿ ಪಕೀರಪ್ಪ ತಾತನವರ 39ನೇ ಉರುಸ್ ನಿಮಿತ್ತ ಭಾವೈಕ್ಯತೆಯ ಧರ್ಮಸಭೆ ಜರುಗಿತು.
ಈ ವೇಳೆ ಎಚ್. ವೀರಾಪುರ ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಜೆ. ಎಸ್. ತಾತನವರು ಮಾತನಾಡಿ ಪ್ರತಿಯೊಬ್ಬರು ಗುರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದರ ಜೊತೆಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಕ್ಕಳಿಗೆ ಸಂಸ್ಕಾರವನ್ನು ಸಲ್ಲಿಸಬೇಕು ಎಂದರು.
ನಂತರ ಬಸವರಾಜ ಆಚಾರ್ಯ ಮಾತನಾಡಿ ಜಾತಿ ಮತ ಪಂಥ ಧರ್ಮಗಳನ್ನು ಮೀರಿ ಫಕೀರ ಸ್ವಾಮಿ ಅವರು ಸರ್ವರಿಗೂ ಬೇಕಾದಂತಹ ಶರಣಾರಾಗಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿಯ ರಂಜಾನತಾತ, ಚಿಂತಗುಂಟ ವೀರೇಶಪ್ಪ, ಬಾದಾಮಿಯ ಹುಸೇನ್ ಸಾಬ್, ಸಾಧಕಲಿ ಸಾಬ್, ಈರಣ್ಣ ತಾತ, ಬಸಪ್ಪ ತಾತ, ಹನುಮಂತಪ್ಪ, ಅನಿಲ್ ಹೆಬ್ಬಟ್ಟದ, ಮಂಜುನಾಥ್ ಕರಿಯಣ್ಣನವರ್ , ಶಿವನೇಗೌಡ, ರಾಮಪ್ಪ, ರಾಜ ಸಾಬ್, ಹಾಗೂ ಸಾಧಕಲಿ ಸಾಬ್ ಸೇರಿದಂತೆ ಇತರರು ಇದ್ದರು ಕಾರ್ಯಕ್ರಮವನ್ನು ಶಿಕ್ಷಕ ಎಸ್ ರಾಮು ಸ್ವಾಗತಿಸಿ ವಂದಿಸಿ ನಿರ್ವಹಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ
