ಚಾಮರಾಜನಗರ: ದಿ. 20.03.2025 ರಂದು ಮಧ್ಯಾಹ್ನ 12:30 ಗಂಟೆಯ ಸಮಯದಲ್ಲಿ ಗುಂಡ್ಲುಪೇಟೆಯಿಂದ ತೆರಕಣಾಂಬಿ ಕಡೆಗೆ ಬರುತ್ತಿದ್ದ KL 71 F 6233 ಸ್ಕೂಟಿಯನ್ನು ತಡೆದು ವಿಚಾರಿಸಿದಾಗ ಇವರು ಕೊಡಸೋಗೆ ಗ್ರಾಮದ ರಮೇಶ್ ಮತ್ತು ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದ ಇಮ್ರಾನ್ ಖಾನ್ ಇವರ ಸ್ಕೂಟಿಯ ಡಿಕ್ಕಿಯನ್ನು ಓಪನ್ ಮಾಡಿ ನೋಡಿದಾಗ ಇವರ ಬಳಿ 1ಕೆಜಿ 20 ಗ್ರಾಂ ಒಣ ಗಾಂಜಾ ಇರುವುದು ಕಂಡುಬಂದಿತು, ನಂತರ ಇದರ ಬಗ್ಗೆ ಹೆಚ್ಚು ವಿಚಾರಣೆ ಮಾಡಿದಾಗ ಮೈಸೂರಿನಿಂದ ತೆಗೆದುಕೊಂಡು ಚಾಮರಾಜನಗರಕ್ಕೆ ಮಾರಾಟ ಮಾಡಲು ಹೋಗುತ್ತಿದ್ದೇವೆ ಎಂದು ತಿಳಿಸಿದರು, ಸದರಿ ಆಸಾಮಿಗಳನ್ನು ಮತ್ತು ವಸ್ತುಗಳನ್ನು ಠಾಣೆಗೆ ತಂದು ಪ್ರಕರಣವನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಬಿಡಲಾಯಿತು. ಈ ಪ್ರಕರಣವನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೆರಕಣಾಂಬಿ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಕೆಎಂ ಮಹೇಶ್ ಹಾಗೂ ಸಹಾಯಕ ಆರಕ್ಷಕ ಉಪನಿರೀಕ್ಷಕರಾದ ಶ್ರೀ ನಂಜುಂಡಸ್ವಾಮಿ, ಮುಖ್ಯಪೇದೆ ಸುರೇಶ್, ಸಿದ್ದರಾಮು, ನಾಗರಾಜು, ಮತ್ತು ಪೇದೆಗಳಾದ ರಾಜು, ಕೃಷ್ಣ, ಬಂಗಾರ ನಾಯಕ ರಾಘವೇಂದ್ರ ಶೆಟ್ಟಿ,ಪ್ರದೀಪ್, ಶಿವಪ್ರಸಾದ್, ನಾಗೇಂದ್ರ ರವರು ಭಾಗವಹಿಸಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್
