ವಿಜಯನಗರ ಜಿಲ್ಲೆ ಕೊಟ್ಟೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಟ್ಟೂರು ಶಾಖೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವೃಂದ ಸಂಘಗಳ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಶಿವಾನಿ ಹೋಟಲ್ ಫಂಕ್ಷನ್ ಹಾಲ್ ನಲ್ಲಿ ನಡೆಸಿದರು.
ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರೇಖಾ ಬದ್ದಿ ರಮೇಶ್ ಇವರು ಜ್ಯೋತಿ ಬೆಳಗುವುದರ ಮೂಲಕ ಉದ್ಭಾಟಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಸ್ಥಾಪಕರಾದ ಶ್ರೀಮತಿ ಮೇರಿ ದೇವಾಸಿಯ ಭಾವ ಚಿತ್ರಕ್ಕೆ ಪುಪ್ಪಾರ್ಚಾನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆ ಇವರು ಸಂಘದ ಮಹಿಳೆಯರನ್ನು ಗೌರವಿಸುವುದರ ಜೊತೆಗೆ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡಬೇಕು. ವಿಶೇಷ ಸಾಧನೆ ಮಾಡಿದ ಮಹಿಳಾ ನೌಕರರನ್ನು ಸನ್ಮಾನಿಸಿ ಗುರುತಿಸುವ ಕಾರ್ಯವನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತಿದೆ, ತಾಲೂಕಿನ ವೃಂದ ಸಂಘದವರ ಸಹಕಾರದಿಂದ ತಾಲೂಕಿನಲ್ಲಿ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ದಿನ ವೃಂದ ಸಂಘದ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ನಮ್ಮ ಅವಧಿಯಲ್ಲಿ ಇದೇ ರೀತಿ ಕ್ರಿಯಾಶೀಲರಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು. ಮುಂದಿನ ದಿನಗಳಲ್ಲಿಯೂ ಸಹಾ ಇದೇ ರೀತಿ ತಾಲೂಕಿನ ಎಲ್ಲಾ ನೌಕರರ ಬೆಂಬಲವನ್ನು ಕೋರಿದರು.
ದುಡಿದ ಮಹಿಳೆಯರನ್ನು ಗೌರವಿಸಿ ಪ್ರೋತ್ಸಾಹ ನೀಡುವುದಕ್ಕೆ “ವಿಶ್ವ ಮಹಿಳಾ ದಿನವನ್ನಾಗಿ” ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಕೇವಲ 0.6 % ಇತ್ತು. ಮಹಿಳೆಯರಿಗೆ ಶಿಕ್ಷಣದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಸಾಕ್ಷರತಾ ಪ್ರಮಾಣ ಹೆಚ್ಚಿದಂತೆ ಇಂದು ಮಹಿಳೆ ಎಲ್ಲಾ ರಂಗಗಳಲ್ಲಿ ಪ್ರವೇಶಿಸಿ ಸಾಧಿಸಿ ತೋರುತ್ತಿದ್ದಾಳೆ. ಆದಾಗ್ಯೂ ಇಂದು ಪೂರ್ಣ ಪ್ರಮಾಣದಲ್ಲಿ ಮಹಿಳೆಗೆ ಸ್ಥಾನ ಮಾನ ನೀಡಲಾಗಿದೆಯೇ ಎಂದು ಅವಲೋಕನ ಮಾಡಬೇಕಾದ ಸ್ಥಿತಿಯಲ್ಲಿದ್ದೇವೆ ಎಂದು ಕೂಡ್ಲಿಗಿ ಸ.ಪ.ಪೂ ಕಾಲೇಜಿನ ಉಪನ್ಯಾಸಕಿಯಾದ ಎನ್ ಸುಮಾ ಇವರು ವಿಶೇಷ ಉಪನ್ಯಾಸವನ್ನು ನೀಡಿದರು.
ಡಾ|| ಗಂಗಾ ಆರೋಗ್ಯಾಧಿಕಾರಿಗಳು ಕೋಗಳಿ, ಉಪಾಧ್ಯಕ್ಷರಾದ ಶಶಿಕಲಾ, ಸಂಘಟನಾ ಕಾರ್ಯದರ್ಶಿ , ಬದ್ದಿಮರಿಸ್ವಾಮಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಉಪಾಧ್ಯಕ್ಷರಾದ ಡಾ.ಜಗದೀಶ್ ಚಂದ್ರಭೋಸ್, ಎ ಕೆ ವೀರಣ್ಣ, ಉಪಾಧ್ಯಕ್ಷರಾದ ಜಿ ಸಿದ್ದಪ್ಪ ಇದ್ದರು.
ತಾಲೂಕಿನ ವಿವಿಧ ವೃಂದ ಸಂಘಗಳ 12 ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ವಿವಿಧ ಇಲಾಖೆಗಳ 16 ಮಹಿಳಾ ಸಾಧಕಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಂಪಪ್ರಿಯ ನಾಟ್ಯಶಾಲೆಯ ವಿದ್ಯಾರ್ಥಿಗಳು ಸ್ವಾಗತ ನೃತ್ಯ ನಡೆಸಿಕೊಟ್ಟರೆ, ಗುರುಶಾಂತಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪಾಧ್ಯಕ್ಷ ಬಿ.ಟಿ.ಮಂಜುನಾಥ ಸ್ವಾಗತಿಸಿದರೆ, ರಾಜ್ಯ ಪರಿಷತ್ ಸದಸ್ಯರಾದ ಎಸ್.ಎಂ.ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೆ.ರಮೇಶ, ಜಂಟಿ ಕಾರ್ಯದರ್ಶಿ ಶಿವಕುಮಾರ್ ಎಂ, ಸಂಘಟನಾ ಕಾರ್ಯದರ್ಶಿ ಚನ್ನೇಶಪ್ಪ.ಎಸ್, ಎಂ.ಸೋಮಶೇಖರ ರಾಜ್, ಎ.ವಿ ಗುರುಬಸವರಾಜ, ಆಂತರಿಕ ಲೆಕ್ಕಪರಿಶೋಧಕ ರವಿ ಕುಮಾರ್ ಹಾಗೂ ನೌಕರರು ಭಾಗವಹಿಸಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
- ಕರುನಾಡ ಕಂದ
