ಮೈಸೂರು :ರಾವಂದೂರು ತಾಲೂಕು ಕೊಪ್ಪ ಗ್ರಾಮದ ಶ್ರೀಮತಿ ಅನುಪಮಾ ಎಲ್ ರವರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಬಿ ಮಲ್ಲೇಶ್ ಕೋಟೆ ರವರು ನೇಮಕ ಮಾಡಿದ್ದಾರೆ.
ದಿ. 18 .03.2025 ರಂದು ಅನುಪಮಾ ಎಲ್ ಅವರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಸಿ ನಾರಾಯಣಸ್ವಾಮಿ ಅನುಮೋದನೆಯೊಂದಿಗೆ ಮತ್ತು ಸಚಿವರಾದ ಕೆ ವೆಂಕಟೇಶ್ ರವರ ಶಿಫಾರಸ್ಸಿನ ಮೇರೆಗೆ ಇವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅನುಪಮಾ ಎಲ್. ಅವರು ನನ್ನನ್ನು ಜಿಲ್ಲಾ ಸಮಿತಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳೋದಕ್ಕೆ ಸಂತಸ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಬದ್ಧಳಾಗಿ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು ಮತ್ತು ನನ್ನ ನೇಮಕಕ್ಕೆ ಕಾರಣರಾದ ಪಿರಿಯಾಪಟ್ಟಣ ಶಾಸಕರು ಮತ್ತು ಸಚಿವರಾದ ಶ್ರೀ ಧಕ್ಕೆ ವೆಂಕಟೇಶ್ ಸಾಹೇಬರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣ ಸ್ವಾಮಿ ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಡಾ. ಬಿ ಜೆ ವಿಜಯ್ ಕುಮಾರ್ ರವರು ಮತ್ತು ಜಿಲ್ಲಾಧ್ಯಕ್ಷರಾದ ಬಿ ಮಲ್ಲೇಶ್ ಕೋಟೆ ರವರಿಗೆ ಅಭಿನಂದನೆಗಳನ್ನು ತಿಳಿಸಿ, ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ರವರು ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯರವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸಿದರು.
ವರದಿ ಶಂಕರ್ ಹೆಚ್.ಆರ್
