ಬಳ್ಳಾರಿ / ಕಂಪ್ಲಿ : ತಾಲೂಕಿನ ಸಣಾಪುರ ಗ್ರಾ.ಪಂ. ಯಲ್ಲಿ ಅಧ್ಯಕ್ಷ ಎ.ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಗುರುವಾರ ನಡೆಯಿತು.
ಪಿಡಿಒ ಶೇಷಗಿರಿ ಮಾತನಾಡಿ, ಬೇಸಿಗೆ ಹಿನ್ನಲೆ ಕುಡಿಯುವ ನೀರಿನ ಅವಶ್ಯಕತೆ ಮಹತ್ವದ್ದಾಗಿದೆ. ಆದ್ದರಿಂದ ಜನರು ನೀರು ವ್ಯರ್ಥ ಮಾಡದೇ, ಮಿತವಾಗಿ ಬಳಕೆ ಮಾಡುವ ಮೂಲಕ ಎಲ್ಲರಿಗೆ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ ಜವಾಬ್ದಾರಿವಹಿಸಬೇಕು.
ಏ.1ರಿಂದ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುವುದು. ತೆರಿಗೆ ವಸೂಲಾತಿಯಲ್ಲಿ ಶೇ.100% ಸಾಧಿಸುವ ಹಿನ್ನಲೆ ತೆರಿಗೆ ಕಲೆಕ್ಷನ್ ಮಾಡಬೇಕೆಂದು ಬಿಲ್‌ಕಲೆಕ್ಟರ್‌ಗೆ ಸೂಚಿಸಲಾಯಿತು. ಅರಳಿಹಳ್ಳಿ ಗ್ರಾಮದ ಪಂಪ್ ಆಪರೇಟರ್ ದಿವಂಗತ ಲಕ್ಷ್ಮಣ ಇವರು ಇತ್ತೀಚೆಗೆ ನಿಧನ ಹೊಂದಿದ ಹಿನ್ನಲೆ ಇಂದಿನ ಸಾಮಾನ್ಯ ಸಭೆಯಲ್ಲಿ ಅನುಕಂಪದ ಆಧಾರದ ಮೇಲೆ ದಿವಂಗರ ಲಕ್ಷ್ಮಣ ಇವರ ಮಗ ರಾಘವೇಂದ್ರ ಇವರನ್ನು ಪಂಪ್ ಆಪರೇಟರ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಿ, ಅನುಮೋದನೆಗಾಗಿ ತಾ.ಪಂ. ಗೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಗ್ರಾಪಂಯ ಎಲ್ಲಾ ಗ್ರಾಮದಲ್ಲಿ ಸ್ವಚ್ಚತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ನಾನಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಭೆಯಲ್ಲಿ ಉಪಾಧ್ಯಕ್ಷೆ ಸಾವಿತ್ರಮ್ಮ, ಸದಸ್ಯರಾದ ಕೆ.ಭಾಸ್ಕರ್‌ರೆಡ್ಡಿ, ವೀರನಗೌಡ, ಕುರುಗೋಡು ಬಸವರಾಜ, ನೆಟ್ಟಕಲ್ಲಪ್ಪ, ಕೆ.ಭಾರತಿ, ಹುಲಿಗೆಮ್ಮ, ನಾಗಮ್ಕ, ಜ್ಯೋತಿ, ಆರ್.ಕೆ.ಗವಿಸಿದ್ದಪ್ಪ, ವಡ್ಡರ ಈರಮ್ಮ, ಲಕ್ಷ್ಮೀ ಸೇರಿದಂತೆ ಸಿಬ್ಬಂದಿ ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
