ರಾಯಚೂರು/ ಸಿಂಧನೂರು :
ಇಂದಿನಿಂದ ಆರಂಭವಾಗಿರುವ ಪ್ರಸ್ತುತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭವಾಗಿದ್ದು ಇಂದು ನಡೆದ ಪ್ರಥಮ ಭಾಷೆಗಳ ಪರೀಕ್ಷೆಯಲ್ಲಿ ಶೇ,97ರಷ್ಟು ವಿದ್ಯಾರ್ಥಿಗಳ ಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ರಾಜು ತಿಳಿಸಿದ್ದಾರೆ.
ತಾಲೂಕಿನಾದ್ಯಂತ ನಗರದಲ್ಲಿ 5 ಪರೀಕ್ಷಾ ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶದಲ್ಲಿ 14 ಸೇರಿ ಒಟ್ಟು 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಈ ದಿನದ ಪರೀಕ್ಷೆಗೆ 5696 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 5499 ವಿದ್ಯಾರ್ಥಿಗಳು ಹಾಜರಾದರೆ, 197 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿ ಅಳವಡಿಸಿದ 269ಕ್ಕೂ ಸಿಸಿ ಕ್ಯಾಮೆರಾಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮೂಲಕ ಜಿಲ್ಲಾ ಕೇಂದ್ರದ ಕಂಟ್ರೋಲ್ ರೂಮ್‌ನಲ್ಲಿ ನೇರವಾಗಿ ನಿಯೋಜಿತ ತಂಡಗಳು ವೀಕ್ಷಣೆ ಮಾಡುತ್ತಿವೆ.
ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪರೀಕ್ಷೆಯ ಚಲನ-ವಲನಕ್ಕೆ ನೇಮಕಗೊಂಡ 5-ಜಿಲ್ಲಾ ಜಾಗೃತದಳಗಳು, 3-ತಾಲೂಕಾ ಜಾಗೃತದಳ, 19-ಸ್ಥಾನಿಕ ಅಧಿಕಾರಿಗಳು, 19-ಮೊಬೈಲ್ ಸ್ವಾಧೀನ ಅಧಿಕಾರಿಗಳು, ಮುಖ್ಯ ಅಧೀಕ್ಷಕರು, ಉಪ ಅಧೀಕ್ಷಕರರು ಕಸ್ಟೋಡಿಯನ್ ಸೇರಿದಂತೆ 45 ಸಿಬ್ಬಂದಿಗಳು ಇಂದು ಕಾರ್ಯನಿರ್ವಹಿಸಿದರು ಎಂದು ಎಸ್.ಎಸ್.ಎಲ್.ಸಿ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕರಾದ ಅಮರೇಶ ತಿಳಿಸಿದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತನ್ನು ವದಗಿಸಲಾಗಿತ್ತು. ಇಂದು ಶಾಂತಿ-ಸುವ್ಯವಸ್ಥೆಯಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ನಡೆದವು.
- ಕರುನಾಡ ಕಂದ
