ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಸ್ಕಾರ ಸಂಸ್ಕೃತಿ ಉಳಿಸಿ ಬೆಳೆಸುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ : ಸಿದ್ದನಗೌಡ ಬಿಜ್ಜೂರ

ವಿಜಯಪುರ /ಮುದ್ದೇಬಿಹಾಳ :ತಾಲ್ಲೂಕಿನ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಈ ಶಾಲೆಯ 7 ನೆಯ ವರ್ಗದ ವಿದ್ಯಾರ್ಥಿ/ ನಿಯರಿಗೆ ಬೀಳ್ಕೊಡುಗೆ, ದೀಪದಾನ, ಮಕ್ಕಳಿಂದ ತಂದೆ ತಾಯಂದಿರ ಪಾದಪೂಜೆ ಹಾಗೂ ಅತಿಥಿಗಳಿಗೆ ಗೌರವ ಸನ್ಮಾನ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಿದ್ದನಗೌಡ ಬಿಜ್ಜೂರರವರು ಹಾಗೂ ಮುಖ್ಯ ಅತಿಥಿಗಳಾಗಿ ಮಡಿಕೇಶ್ವರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಸ್ ಎಸ್ ಬಾಬಣ್ಣವರ ಹಾಗೂ ಅತಿಥಿಗಳಾಗಿ ಢವಳಗಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಮ್ ಎಸ್ ಮಾಕೊಂಡ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರೀ ಈರಣ್ಣ ಹೊನ್ನಪ್ಪ ಕುಂಬಾರ ರವರು ಮತ್ತು ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ ಸಂಗಮೇಶ ನವಲಿ ಸಹಶಿಕ್ಷಕಿ ಕುಮಾರಿ, ಲಕ್ಷ್ಮೀ ದೇವೇಂದ್ರಪ್ಪ ಮನಿಕಟ್ಟಿ ಹಾಗೂ ಅತಿಥಿ ಶಿಕ್ಷಕರಾದ ಶ್ರೀಮತಿ ಎಲ್ಲಮ್ಮ ಉತಾಳೆ ಹಾಗೂ ಕಾಶಿಬಾಯಿ ಹಾದಿಮನಿ ಎಸ್ ಡಿ ಎಂ ಸಿ ಪದಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ವಾಲಿಕಾರ ಬಿಸಿಯೂಟದ ಸಿಬ್ಬಂದಿ ಹಾಗೂ ಊರಿನ ಗುರು ಹಿರಿಯರು. ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ದನಗೌಡ ಬಿಜ್ಜೂರರವರು ಮಾತನಾಡಿ ಈ ಶಾಲೆಯ ಮಕ್ಕಳು ಉತ್ತಮ ವ್ಯಕ್ತಿತ್ವವುಳ್ಳ ಉತ್ಸಾಹಭರಿತ ವಿದ್ಯಾವಂತ ನಾಗರಿಕರಾಗಿ ಶಾಲೆಗೆ ಹಾಗೂ ಊರಿನ ಮತ್ತು ನಾಡಿನ ಜೊತೆಗೆ ಕಲಿಸಿದ ಗುರುಗಳ ತಂದೆ ತಾಯಿಯವರ ಕೀರ್ತಿ ತರುವಂತಹ ಮಕ್ಕಳಾಗಿರಿ, ಒಂದೇ ಮಾತಿನಲ್ಲಿ ಹೇಳುವುದಾದರೆ ಶ್ರೀ ಸಂಗಮೇಶ ಶಾಂತಪ್ಪ ನವಲಿರವರ ಜೀವನ ತೆರೆದ ಪುಸ್ತಕವಿದ್ದಂತೆ ಶೈಕ್ಷಣಿಕ ಪ್ರಗತಿಗಾಗಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಗುಡಿಹಾಳದ ಶಿಕ್ಷಕ ಶಿಕ್ಷಕಿಯರ ಕಾರ್ಯ ವೈಖರಿ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶ್ರೀ ಎಸ್ ಎಸ್ ಬಾಬಣ್ಣವರ ಗುರುಗಳು ಮಾತನಾಡಿ ಈ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಂಗಮೇಶ ನವಲಿ ಹಾಗೂ ಶಿಕ್ಷಕ ಶಿಕ್ಷಕಿಯರು ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರ ನೀಡುವಲ್ಲಿ ಅವರ ಪ್ರಯತ್ನ ಅವಿಸ್ಮರಣೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಶ್ರೀ ಈರಣ್ಣ ಹೊನ್ನಪ್ಪ ಕುಂಬಾರ ರವರು ತಮ್ಮ ತಂದೆಯವರಾದ ನಿವೃತ್ತ ಶಿಕ್ಷಕರು ಲಿಂಗೈಕ್ಯ ಹೊನ್ನಪ್ಪ ಕುಂಬಾರರವರ ಸವಿನೆನಪಿಗಾಗಿ 7ನೆಯ ವರ್ಗದ ವಿದ್ಯಾರ್ಥಿ/ನಿಯರಿಗೆ ಕ್ಲಿಪ್ ಪ್ಯಾಡ್ ಹಾಗೂ ಕಂಪಾಸ್ ಪೆಟ್ಟಿಗೆಗಳನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರ ಅಮೃತ ಹಸ್ತದಿಂದ ವಿತರಣೆ ಮಾಡಲಾಯಿತು.
ಜೊತೆಗೆ ಅತಿಥಿಗಳಿಗೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಈರಣ್ಣ ಹೊನ್ನಪ್ಪ ಕುಂಬಾರರವರಿಗೆ ಗೌರವ ಸನ್ಮಾನ ಮಾಡಲಾಯಿತು ಹಾಗೂ 7ನೇ ವರ್ಗದ ಆದರ್ಶ ವಿದ್ಯಾರ್ಥಿಯಾಗಿ ಸಂತೋಷ ಈಶ್ವರಪ್ಪಗೌಡ ಗೌಡರೆಡ್ಡಿ ಹಾಗೂ ಆದರ್ಶ ವಿದ್ಯಾರ್ಥಿನಿಯಾಗಿ ಚೈತ್ರಾ ಮಲ್ಲಿಕಾರ್ಜುನ ವಾಲಿಕಾರ ಇವರಿಗೆ ಶ್ರೀ ಅನುಶಾಸನರವರ ಆಶೀರ್ವಾದ ಶಿಕ್ಷಣ ಸೇವಾ ಟ್ರಸ್ಟ್ (ರಿ.) ನಾಲತವಾಡ ವತಿಯಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆದ ಶ್ರೀಮತಿ ಅನುಸೂಯ ಶಾಂತಪ್ಪ ನವಲಿ ಹಾಗೂ ಶ್ರೀ ಶಾಂತಪ್ಪ ಶಿವಪ್ಪ ನವಲಿರವರು ವಿತರಿಸಿದರು. ಈ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಂಗಮೇಶ ನವಲಿ ಎಲೆಮರೆಯ ಕಾಯಿಯಂತೆ ಶ್ರದ್ದೆ ಮತ್ತು ನಿಷ್ಠೆ ಹಾಗೂ ಪ್ರಾಮಾಣಿಕತೆ ಯಿಂದ ಕರ್ತವ್ಯ ನಿರ್ವಹಣೆಯ ಜೊತೆ ಜೊತೆಗೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಸಂಸ್ಕಾರಯುತ ಜೀವನದ ಪಾಠಗಳನ್ನು ಸ್ವತಃ ತಾವೇ ತಮ್ಮ ತಂದೆ ತಾಯಂದಿರಿಗೆ ಪಾದ ಪೂಜೆ ಮಾಡುವುದರ ಮೂಲಕ ತೋರಿಸಿ ನಾಲತವಾಡದ ಶರಣ ವೀರೇಶ್ವರ ಹಾಗೂ ಗುಡಿಹಾಳದ ಸದ್ಗುರು ಗಂಗಾಧರೇಶ್ವರರ ಸಂಸ್ಕಾರ ಇಲ್ಲಿ ಬೋಧಿಸುತ್ತಿದ್ದಾರೆ ಎಂದು ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಮಲ್ಲಿಕಾರ್ಜುನ ವಾಲಿಕಾರ ಹೇಳಿದರು. ಕಾರ್ಯಕ್ರಮವನ್ನು ಏಳನೇ ತರಗತಿ ಮಕ್ಕಳೇ ನಡೆಸಿಕೊಟ್ಟರು ನಿರೂಪಣೆ ವಿದ್ಯಾರ್ಥಿನಿ ಶ್ರಾವಣಿ ಬಾಪುಗೌಡ ಚಿತ್ತಾಪುರ ಪ್ರಾರ್ಥನೆಯನ್ನು ವರ್ಷಿಣಿ ಲಕ್ಷ್ಮಣ ಚಲವಾದಿ ಹಾಗೂ ಸಂಗಡಿಗರು ನಡೆಸಿಕೊಟ್ಟರು ನೀಲಮ್ಮ ಸಂಗನಗೌಡ ಬೆಲವಂತರಕಂಠಿ ಸ್ವಾಗತಿಸಿದರು.
ಸಂತೋಷ ಈಶ್ವರಪ್ಪಗೌಡ ಗೌಡರೆಡ್ಡಿ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ