ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒನ್ ನೆಷನ್ ಒನ್ ಸಬ್ಸಿಕ್ರಿಪ್ಷನ್ ಒಂದು ಉತ್ತಮ ಯೋಜನೆ : ಡಾ. ಮಲ್ಲಿಕಾರ್ಜುನ್ ಕಪ್ಪಿ

ಕೊಪ್ಪಳ : ಮಾರ್ಚ್ 21: ಒನ್ ನೆಷನ್ ಒನ್ ಸಬ್ಸಿಕ್ರಿಪ್ಷನ್ ಒಂದು ಉತ್ತಮವಾದ ಯೋಜನೆ ಎಂದು ಹೊಸಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಕಪ್ಪಿ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರದಂದು ಕಾಲೇಜಿನ ಗ್ರಂಥಾಲಯ ವಿಭಾಗ ಮತ್ತು ಐ ಕ್ಯೂ ಎ ಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದೇಶ ಒಂದು ಚಂದಾರಿಕೆ (ONOS) ಎಂಬ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ ನಮ್ಮ ದೇಶದಲ್ಲಿ ಮುಂದೆ ವಿಕಸಿತ ಭಾರತ 2047 ರಷ್ಟು ರೊಳಗೆ ಇನ್ನೂ ಉತ್ತಮ ಸಂಶೋಧನೆ ಮಟ್ಟ ಹೆಚ್ಚಾಗಬಹುದು. ಇದಕ್ಕಾಗಿ ಒಂದು ದೇಶ ಒಂದು ಚಂದಾರಿಕೆ (ONOS ) ಯನ್ನು ಕೇಂದ್ರ ಸರಕಾರ ಪ್ರಾರಂಭ ಮಾಡಿದೆ. ಇದರಲ್ಲಿ ಪ್ರಪಂಚದ ಪ್ರಸಿದ್ದ ಪ್ರಕಾಶಕರ ಪುಸ್ತಕಗಳು ಲಭ್ಯವಿದೆ. ಈ ವೆಬ್ ಸೈಟ್ ನಿಂದ ನಮ್ಮ ದೇಶದ ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ಮತ್ತು ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲರಿಗೂ ಸುಲಭವಾಗಿ ಪುಸ್ತಕಗಳು ದೊರೆಯುವಂತೆ ಮಾಡುವುದು ಇದರ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಸಿಲಾಬಸ್ ಬಿಟ್ಟು ಬೇರೆ ಪುಸ್ತಕಗಳನ್ನು ಓದಬೇಕು. ಪ್ರತಿಯೊಬ್ಬರೂ ಸಂಶೋಧನೆ ಯಲ್ಲಿ ಭಾಗವಸಿಬೇಕು. ಜಗತ್ತಿನ ಇತರೆ ಸಂಶೋಧನೆಗಳ ಕುರಿತು ಅಧ್ಯಯನ ಮಾಡಬೇಕು. ಹೊಸ ಹೊಸ ಅನ್ವೇಷಣೆಗಳ ಕೂರಿತು ತಿಳಿದುಕೊಳ್ಳಬೇಕು, ಸಂಶೋಧನೆಗಳನ್ನು ಮೌಲ್ಯ ಮಾಪನ ಮಾಡಬೇಕು. ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚು ಹಣ ಖರ್ಚು ಮಾಡಬೇಕು ಎಂದು ತಿಳಿಸಿದರು.

ಒನ್ ನೇಷನ್ ಒನ್ ಸಬ್ಸ್ಕ್ರಿಪ್ಷನ್ (ONOS) ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ, ಇದು ದೇಶದ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಜರ್ನಲ್ ಗಳಿಗೆ ಸುಲಭವಾಗಿ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು 1 ಜನವರಿ 2025 ರಿಂದ ಜಾರಿಗೆ ಬಂದಿದೆ ಮತ್ತು INFLIBNET ನ್ಯಾಷನಲ್ ಸಬ್ಸ್ಕ್ರಿಪ್ಷನ್ ಮೂಲಕ ಸಂಶೋಧನಾ ಸಂಪನ್ಮೂಲಗಳನ್ನು ಒದಗಿಸುತ್ತದೆ. ONOS ಯೋಜನೆಯು ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ@2047 ದೃಷ್ಟಿಯೊಂದಿಗೆ ಹೊಂದಿಕೆಯಾಗಿದೆ, ಇದು ಸಂಶೋಧನೆ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮೇಲೆ ತರುವ ಗುರಿಯನ್ನು ಹೊಂದಿದೆ.

ಉದಾಹರಣೆ:
ಒಂದು ಸಣ್ಣ ಪಟ್ಟಣದಲ್ಲಿರುವ ಕಾಲೇಜಿನ ವಿದ್ಯಾರ್ಥಿ ಅಥವಾ ಸಂಶೋಧಕರು ಹಿಂದೆ ಅಂತರರಾಷ್ಟ್ರೀಯ ಜರ್ನಲ್ಗಳಿಗೆ ಪ್ರವೇಶಿಸಲು ಹಣಕಾಸಿನ ಅಡಚಣೆಗಳನ್ನು ಎದುರಿಸಬೇಕಾಗಿತ್ತು. ಈಗ, ONOS ಯೋಜನೆಯ ಮೂಲಕ, ಅವರು https://www.onos.gov.in ವೆಬ್ಸೈಟ್ ಮೂಲಕ 13,000 ಕ್ಕೂ ಹೆಚ್ಚು ಜರ್ನಲ್ ಗಳಿಗೆ ಪ್ರವೇಶ ಪಡೆಯಬಹುದು. ಇದರಿಂದ ಅವರು ತಮ್ಮ ಸಂಶೋಧನೆಗೆ ಅಗತ್ಯವಾದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು ಮತ್ತು ಜಾಗತಿಕ ಸಂಶೋಧನಾ ಸಮುದಾಯದೊಂದಿಗೆ ಸಂಪರ್ಕ ಹೊಂದಬಹುದು.

ONOS ಯೋಜನೆಯ ಉದ್ದೇಶಗಳು:

  1. ಸಂಶೋಧನಾ ಜ್ಞಾನದ ಪ್ರವೇಶ: ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರು ಹೆಚ್ಚಿನ ಗುಣಮಟ್ಟದ ಸಂಶೋಧನಾ ಜರ್ನಲ್ಗಳಿಗೆ ಪ್ರವೇಶ ಪಡೆಯುವುದು.
  2. ಸಮಾನ ಅವಕಾಶ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಸಂಸ್ಥೆಗಳಿಗೆ ಸಮಾನ ಪ್ರವೇಶ ಒದಗಿಸುವುದು.
  3. ಜಾಗತಿಕ ಸಂಶೋಧನೆಯಲ್ಲಿ ಭಾಗವಹಿಸುವುದು: ಭಾರತವನ್ನು ಜಾಗತಿಕ ಸಂಶೋಧನೆಯಲ್ಲಿ ಪ್ರಮುಖ ಪಾತ್ರವಹಿಸುವ ದೇಶವಾಗಿ ಮಾಡುವುದು.

ಈ ಯೋಜನೆಯು ಭಾರತದ ಸಂಶೋಧನಾ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದೆ, ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಸಂಶೋಧನೆಗಳನ್ನು ಮುಂದುವರಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಪಡೆಯಬಹುದು. ಇದು ಭಾರತದ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಾಪಾಲಕರಾದ ಡಾ. ಮಲ್ಲಿಕಾರ್ಜುನ್ ಬಿ, ಶ್ರೀ ಮತಿ ನಾಗರತ್ನ ತಮ್ಮಿನಾಳ, ಡಾ. ಅಶೋಕ ಕುಮಾರ, ಕಾಲೇಜಿನ ದೈಹಿಕ ಶಿಕ್ಷಣ ಭೋದಕ ಡಾ. ಪ್ರದೇಪ್ ಕುಮಾರ, ಡಾ.ನರಸಿಂಹ, ಮಲ್ಲಿಕಾರ್ಜುನ್ ಮತ್ತು ಅಲ್ಲಾಬಕ್ಷಿ ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ