ಬಳ್ಳಾರಿ/ ಕಂಪ್ಲಿ : ಸಂಸ್ಕಾರ ಮತ್ತು ನೆಮ್ಮದಿಗಾಗಿ ಪುರಾಣ, ಪ್ರವಚನ ಆಲಿಸಬೇಕು ಎಂದು ಹಿರೇಮಲ್ಲೂರ್ ಶಾಸ್ತ್ರಿಗಳು ನಿಜಗುಣ ಗವಾಯಿ ಹೇಳಿದರು.
ತಾಲೂಕಿನ ಎಮ್ಮಿಗನೂರು ಬಳಿಯ ಹೆಚ್.ವೀರಾಪುರ ಗ್ರಾಮದಲ್ಲಿ 49ನೇ ವರ್ಷದ ಶ್ರೀ ಶರಣಬಸವೇಶ್ವರ ಪ್ರರಾಣ ಪ್ರವಚನದ ಮಂಗಲ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ನಾವೆಲ್ಲರೂ ಜಗತ್ತು ನೋಡಲು ಬಂದವರು. ಈ ಜಗತ್ತನ್ನು ಆನಂದದಿಂದ ನೋಡಬೇಕು. ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಸಾರ್ಥಕ ಜೀವನಕ್ಕೆ ಪುರಾಣ ಪ್ರವಚನಗಳು ಪೂರಕವಾಗಿವೆ’ ಪ್ರತಿಯೊಬ್ಬರೂ ಜೀವನದಲ್ಲಿ ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಹಿರೇಮಠದ ಶಿವಮೂರ್ತಿ ಶಾಸ್ತ್ರಿ ಇವರು ಪುರಾಣ ಪ್ರವಚನ ನಡೆಸಿಕೊಟ್ಟರು. ನಿಜಗುಣೇಶ ಇವರು ಸಂಗೀತ ನುಡಿಸಿದರು. ರಾಮಲಿಂಗಪ್ಪ ಹೂಗಾರ ಇವರು ತಬಲಕ್ಕೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಹಿರೇಮಠದ ಮಂಜುನಾಥ್ ಸ್ವಾಮಿ, ಕಿರಣ ಶಾಸ್ತ್ರಿ, ಬಸವರಾಜ್ ಸ್ವಾಮಿ, ಮುಖಂಡರಾದ ಬೈರಾಪುರ ಕೋಮಾರಿ, ಸಿ.ಶಾಂತಕುಮಾರ್, ಗೋಡೆ ವೀರೇಶ್, ಹಳೆಗೌಡ್ರು ಮಲ್ಲಿಕಾರ್ಜುನ್, ಜಿನ್ನದ ವಿರೇಶ, ಎಂ. ನಾಗಲಿಂಗಸ್ವಾಮಿ, ಎಸ್.ಶಿವಾರೆಡ್ಡಿ, ಹೆಚ್.ಎರೆಪ್ಪಗೌಡ, ಭೀಮನಗೌಡ, ಗೋಡೆ ವೀರಭದ್ರಪ್ಪ, ಹೆಚ್.ಮಲ್ಲಿಕಾರ್ಜುನ, ಸಿ.ಶರಣಬಸವ, ಗೋಡೆ ವೀರೇಶ್, ಈಶ್ವರಗೌಡ, ಬೆನಕಲ್ ಬಸವರಾಜ, ಚಂದ್ರಯ್ಯಸ್ವಾಮಿ ಸೇರಿದಂತೆ ಹೆಚ್.ವೀರಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮದ ಸಕಲ ಸದ್ಭಕ್ತರು ಪಾಳ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
