ಬಳ್ಳಾರಿ/ ಕಂಪ್ಲಿ : 2024-25ನೇ ಸಾಲಿನ ಪರೀಕ್ಷೆಗಳು ತಾಲೂಕಿನ 6 ಎಸ್. ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ಶಾಂತಿಯುತವಾಗಿ ಶುಕ್ರವಾರ ಜರುಗಿದವು.
ಶುಕ್ರವಾರ ಆರಂಭಗೊಂಡ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆಗಳು ಶಾಂತಿಯುತವಾಗಿ ನಡೆದವು. ಕಂಪ್ಲಿ ಪಟ್ಟಣದ ಸರ್ಕಾರಿ ಷಾಮಿಯಾಚಂದ್ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಕೇಂದ್ರದಲ್ಲಿ 266 ವಿದ್ಯಾರ್ಥಿಗಳಲ್ಲಿ 265 ವಿದ್ಯಾರ್ಥಿಗಳು ಹಾಜರಾಗಿದ್ದು, ಒಬ್ಬ ವಿದ್ಯಾರ್ಥಿ ಪರೀಕ್ಷೆಯಿಂದ ದೂರ ಉಳಿದಿರುವುದು ಕಂಡು ಬಂತು.
ಮುಖ್ಯ ಅಧೀಕ್ಷಕರಾಗಿ ಸುಜಾತ, ಕಸ್ಟೋಡಿಯನ್ ಆಗಿ ಮುದುಕಪ್ಪ ಕಾರ್ಯ ನಿರ್ವಹಿಸಿದರು. ಓದ್ಸೋ ಜಡೆಮ್ಮ ಗುರುಸಿದ್ದಯ್ಯ ಪ್ರೌಢಶಾಲಾ ಕೇಂದ್ರದಲ್ಲಿ 335 ವಿದ್ಯಾರ್ಥಿಗಳ ಪೈಕಿ 327 ವಿದ್ಯಾರ್ಥಿಗಳು ದಾಖಲಾದರೆ, ಉಳಿದ 8 ವಿದ್ಯಾರ್ಥಿಗಳು ಗೈರಾದರು. ಮುಖ್ಯ ಅಧೀಕ್ಷಕರಾಗಿ ಹೆಚ್.ಶಕುಂತಲಾದೇವಿ, ಉಪ ಅಧೀಕ್ಷಕರಾಗಿ ರಾಮಚಂದ್ರಪ್ಪ, ಕಸ್ಟೋಡಿಯನ್ ಆಗಿ ಮಲ್ಲಿಕಾರ್ಜುನ ಕರ್ತವ್ಯದಲ್ಲಿದ್ದರು. ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 376 ವಿದ್ಯಾರ್ಥಿಗಳಲ್ಲಿ 373 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 3 ವಿದ್ಯಾರ್ಥಿಗಳು ಪರೀಕ್ಷೆಗೆ ಚಕ್ಕರ್ ಹಾಕಿದರು. ಮುಖ್ಯ ಅಧೀಕ್ಷಕರಾಗಿ ಗಾಯತ್ರಿದೇವಿ, ಉಪ ಮುಖ್ಯ ಅಧೀಕ್ಷಕರಾಗಿ ನಿರ್ಮಲ, ಕಸ್ಟೋಡಿಯನ್ ಆಗಿ ಲಕ್ಕಪ್ಪ ಕೆಲಸ ನಿರ್ವಹಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು (ಬಾಲಕಿಯರ ವಿಭಾಗ) ಕೇಂದ್ರದಲ್ಲಿ ಒಟ್ಟು 289 ವಿದ್ಯಾರ್ಥಿಗಳಲ್ಲಿ 286 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಮೂವರು ವಿದ್ಯಾರ್ಥಿಗಳು ಗೈರಾದರು. ಮುಖ್ಯ ಅಧೀಕ್ಷಕರಾಗಿ ಬಸವರಾಜ ಪಾಟೀಲ್, ಕಸ್ಟೋಡಿಯನ್ ಆಗಿ ಡಾ.ಸುನೀಲ್ ಕಾರ್ಯನಿರ್ವಹಿಸಿದರು. ತಾಲೂಕು ವ್ಯಾಪ್ತಿಯ ಸುಗ್ಗೇನಹಳ್ಳಿ ವಿದ್ಯಾಭಾರತಿ ಪ್ರೌಢಶಾಲಾ ಕೇಂದ್ರದಲ್ಲಿ 363 ವಿದ್ಯಾರ್ಥಿಗಳಲ್ಲಿ 357 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 6 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು. ಮುಖ್ಯ ಅಧೀಕ್ಷಕರಾಗಿ ಹುಲುಗಪ್ಪ, ಕಸ್ಟೋಡಿಯನ್ ಆಗಿ ಶ್ರೀಕಾಂತ ಕರ್ತವ್ಯ ನಿರ್ವಹಿಸಿದರು. ಮತ್ತು ಎಮ್ಮಿಗನೂರು ಕರ್ನಾಟಕ ಪಬ್ಲಿಕ್ ಶಾಲಾ ಕೇಂದ್ರದಲ್ಲಿ 322 ವಿದ್ಯಾರ್ಥಿಗಳ ಪೈಕಿ 317 ಮಕ್ಕಳು ಹಾಜರಾದರೆ, 5 ವಿದ್ಯಾರ್ಥಿಗಳು ಗೈರಾಗಿರುವುದು ಕಂಡು ಬಂತು. ಮುಖ್ಯ ಅಧೀಕ್ಷಕರಾಗಿ ನಂದಕಿಶೋರ, ಕಸ್ಟೋಡಿಯನ್ ಆಗಿ ಡಾ.ಸುನೀಲ್ ಇವರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದರು. ಒಟ್ಟಾರೆ ಕಂಪ್ಲಿ ತಾಲೂಕಿನ 6 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1951 ವಿದ್ಯಾರ್ಥಿಗಳ ಪೈಕಿ 1925 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 26 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು. ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರಗಳಲ್ಲಿ ಸಿಸಿ ಟಿವಿ ವೆಬ್ ಕಾಸ್ಟಿಂಗ್ ಕ್ಯಾಮರ ಅಳವಡಿಸಲಾಗಿತ್ತು. ಪರೀಕ್ಷಾ ಕೇಂದ್ರದ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿತ್ತು.
ವರದಿ : ಜಿಲಾನ್ ಸಾಬ್ ಬಡಿಗೇರ
