ಬೆಳಗಾವಿ/ ನೇಸರಗಿ- ರಾಜ್ಯ ಮಟ್ಟದ ರಾಣಿ ಅಬ್ಬಕ್ಕದೇವಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಅನುಸೂಯಾ ಶಂಕರೆಪ್ಪ ಮದನಭಾವಿ ಇವರಿಗೆ ಅಭಿನಂದನಾ ಸಮಾರಂಭ ದಿ. ೨೮ ರಂದು ಮಧ್ಯಾಹ್ನ ೪ ಘಂಟೆಗೆ ಸಮೀಪದ ಮೇಕಲಮರಡಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆಯಲಿದೆ.
ಸಾನಿಧ್ಯವನ್ನು ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ವಹಿಸುವರು. ಮಾಜಿ ಜಿ.ಪಂ. ಸದಸ್ಯ ನಿಂಗಪ್ಪ ಅರಕೇರಿ ಉದ್ಘಾಟಿಸುವರು. ಎಸ್ ಡಿ ಎಂ ಸಿ ಅಧ್ಯಕ್ಷ ಅಜೀತ ತುಬಾಕದ ಅಧ್ಯಕ್ಷತೆ ವಹಿಸುವರು. ಬಿಇಓ ಎ.ಎನ್.ಪ್ಯಾಟಿ, ಪ್ರಗತಿಪರ ರೈತ ಗೌಡಪ್ಪ ಯರಡಾಲ ಜ್ಯೋತಿ ಪ್ರಜ್ವಲನಗೊಳಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ಅರ್ಜುನ ಕಡೆಟ್ಟಿ, ಶಿಕ್ಷಕ ಸಾಹಿತಿ ವಾಯ್.ಬಿ.ಕಡಕೋಳ, ಸಿಪಿಐ ಗಜಾನನ ನಾಯ್, ಪಿಎಸ್ ಐ ಐ.ಎಚ್.ರಿಚಿ, ಮುಖ್ಯೋಪಾಧ್ಯಾಯ ಎಸ್.ಎಸ್.ಗಾಣಗಿ, ಶಿಕ್ಷಕ ಜಿ.ಜಿ.ಅಂಗಡಿ, ನಿವೃತ್ತ ಶಿಕ್ಷಕ ಸಿ.ಬಿ.ಶೀಗಿಹಳ್ಳಿ, ದೈಹಿಕ ಶಿಕ್ಷಕ ಎ.ಆರ್.ಸುಂಕದ, ಗ್ರಾ.ಪಂ. ಅಧ್ಯಕ್ಷೆ ಭಾರತಿ ತಿಗಡಿ, ಗ್ರಾ.ಪಂ ಉಪಾಧ್ಯಕ್ಷ ಕಾಶೀಮ ಜಮಾದಾರ, ಪಿಕೆಪಿಎಸ್ ಅಧ್ಯಕ್ಷ ಬಾಹುಬಲಿ ಟಗರಿ, ಪಿಕೆಪಿಎಸ್ ಉಪಾದ್ಯಕ್ಷ ನಿಂಗಪ್ಪ ಬುದನೂರ, ಗ್ರಾಮ ಲೆಕ್ಕಾಧಿಕಾರಿ ಈರಣ್ಣ ಕೇಂದ್ರಿ, ಹಿರಿಯ ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ, ಸ್ಪೂರ್ತಿ ಹರ್ಬಲ್ ಎಂ.ಡಿ ಸಿದ್ಧಾರ್ಥ ಮರೇದ, ಸಾಮಾಜಿಕ ಕಾರ್ಯಕರ್ತ ಸೋಮಲಿಂಗ ಮದನಭಾವಿ ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು, ಎಸ್ ಡಿ ಎಂ ಸಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.
ವರದಿ : ಭೀಮಸೇನ ಕಮ್ಮಾರ
