ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಪಸ್ತಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗಂಜಗೇರ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುತ್ತದೆ. ಇಲ್ಲಿನ ಜನರು ಪ್ರತಿನಿತ್ಯ 2 ಕಿಲೋ. ಮೀ. ದೂರದಿಂದ ಸೈಕಲ್, ಬೈಕ್, ಎತ್ತಿನ ಬಂಡಿ ಇನ್ನೂ ಕೆಲವರು ನಡೆದುಕೊಂಡು ಹೋಗಿ ನೀರು ತರುತ್ತಿದ್ದಾರೆ. ಇಲ್ಲಿನ ಜನರು ಬಹಳ ಸಮಸ್ಯೆಯಿಂದ ಕೂಡಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಸಹ ಯಾರೊಬ್ಬ ಅಧಿಕಾರಿಗಳು ಈ ಸಮಸ್ಯೆಗೆ ಸ್ಪಂದಿಸಿಲ್ಲ. ಅದಕ್ಕಾಗಿ ಜನರ ಕಷ್ಟ, ತೊಂದರೆಗೆ ದಲಿತ ಸೇನೆ ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ. ದಲಿತ ಸೇನೆ ತಾಲೂಕು ಸಮಿತಿ ವತಿಯಿಂದ ಹಾಗೂ ಗಂಜಗೇರಾ ಗ್ರಾಮದ ವತಿಯಿಂದ ಅಂಬೇಡ್ಕರ್ ಸರ್ಕಲ್ ನಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ಮೂಲಕ ಕಾಳಗಿ ತಹಶೀಲ್ದಾರ ಅವರ ಮುಖಾಂತರ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಖತಲಪ್ಪ ಅಂಕನ, ಕಾಳಗಿ ತಾಲೂಕಿನ ದಲಿತ ಸೇನೆ ಅಧ್ಯಕ್ಷರು ನಾಗರಾಜ್ ಬೇವಿನ ಕರ್, ಅನುಸೂಯ ಹಲಚೇರಾ ದಲಿತ ಸೇನೆ ಜಿಲ್ಲಾ ಮಹಿಳಾ ಘ ಅಧ್ಯಕ್ಷರು, ಶಂಕರ್ ಚೌಕ್ ಅಧ್ಯಕ್ಷರು ಹಿಂದೂ ಜಾಗೃತಿ ಸೇನೆ ಕಾಳಗಿ, ಮಾರುತಿ ತೇಗಲ ತಿಪ್ಪಿ, ಮಲ್ಲು ಮಡಕಿ, ಅಂಕಿತಾ ಹೆಬ್ಬಾಳ, ಕಾಶಿಬಾಯಿ ಮಹಿಳಾ ಘಟಕದ ಅಧ್ಯಕ್ಷರು ಕಾಳಗಿ, ಹಣಮಂತ್ ಸಂಗನ, ಖಾಲೀದ ಪಟೇಲ್, ಮಲ್ಲಿಕಾರ್ಜುನ್ ತಳವಾರ್, ಬಸವರಾಜ್, ಸುಧಾಕರ್, ಮಲ್ಲು ಗಂಜಗೇರಾ, ಕೃಷ್ಣ, ನಗು ಮಾನಕರ, ತುಕಾರಾಮ್ ತಳವಾರ್ ಗಂಜಗೇರಾ, ರೋಹಿತ್ ನಾಗೂರ, ಬಾಬರಾವ ಕಾಳಗಿ, ಸುಭಾಷ್ ಸಾಲೋ ಳ್ಳಿ, ಆನಂದ್ ತಳವಾರ್, ಸಂಬಣ್ಣ ಗಂಜಗೇರಾ ಹಾಗೂ ಗಂಜಗೇರಾ ಗ್ರಾಮದ ಮಹಿಳೆಯರು ಮತ್ತು ಹಿರಿಯರು ಯುವಕರು ಈ ಹೋರಾಟದಲ್ಲಿ ಭಾಗವಹಿಸಿದ್ದರು.
ವರದಿ : ಚಂದ್ರಶೇಖರ್ ಆರ್ ಪಾಟೀಲ್
