ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕು ಕಛೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಅಮರೇಶ್ ಜಿ ಕೆ ತಹಶೀಲ್ದಾರರು ಹಾಗೂ ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇವರ ಅಧ್ಯಕ್ಷತೆಯಲ್ಲಿ ದಿ. 05.04.2025 ರಂದು ಆಚರಿಸುವ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನರಾಂ ರವರ 118ನೇ ಜಯಂತಿ ಹಾಗೂ ದಿ. 14.04.2025 ರಂದು ಆಚರಿಸುವ ಸಂವಿಧಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸುವ ಬಗ್ಗೆ ಪೂರ್ವಸಿದ್ದತಾ ಸಭೆಯನ್ನು ನಡೆಸಲಾಯಿತು.
ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನರಾಂ ರವರ ಜಯಂತಿಯನ್ನು ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ 05.04.2025 ರಂದು ಸರಳವಾಗಿ ಆಚರಿಸಲು ಹಾಗೂ 14.04.2025 ರಂದು ಡಾ|| ಬಿ ಆರ್ ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀಯರ ಜಯಂತಿ ಕಾರ್ಯಕ್ರಮವನ್ನು ಎ.ಪಿ.ಎಂ.ಸಿ ಆವರಣದಲ್ಲಿ ವೇದಿಕೆ ನಿರ್ಮಾಣ ಮಾಡಿ ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ|| ಬಿ ಆನಂದ್ ಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀಮತಿ ಶಾಹಿಕಾ ಅಹ್ಮದ್ ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ಕೊಟ್ಟೂರು, ನಸರುಲ್ಲಾ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ, ಪದ್ಮನಾಭ ಕರಣಂ ಕ್ಷೇತ್ರ ಶಿಕ್ಷಣಾಧಿಕಾರಿ, ಬಿ ದುರುಗಪ್ಪ ಅಧ್ಯಕ್ಷರು ತಾಲೂಕು ಡಾ ಬಿ ಆರ್ ಅಂಬೇಡ್ಕರ್ ಸಂಘ, ಟಿ ಹನುಮಂತಪ್ಪ ಅಧ್ಯಕ್ಷರು ತಾಲೂಕು ಡಾ|| ಬಾಬು ಜಗಜೀವನರಾಂ ಸಂಘ, ಜಿಲ್ಲಾ ಡಿಎಸ್ಎಸ್ ಮುಖಂಡರಾದ ತೆಗ್ಗಿನಕೇರಿ ಕೊಟ್ರೇಶ್, ಬದ್ದಿ ಮರಿಸ್ವಾಮಿ, ಎಂ ಸಿ ಕೆಂಗರಾಜ ಜಿಲ್ಲಾ ಉಪಾಧ್ಯಕ್ಷರು ಚಲವಾದಿ ಮಹಾಸಭಾ ಹಾಗೂ ಪಪಂ ಸದಸ್ಯರು, ಶಿವಣ್ಣ ಎಪಿಎಂಸಿ ಉಪಾಧ್ಯಕ್ಷರು, ಜಿಲ್ಲಾ ಡಿಎಸ್ಎಸ್ ಸಂಘಟನಾ ಸಂಚಾಲಕರಾದ ಕಂದಗಲ್ ಪರಶುರಾಮ ಎನ್.ಎಫ್.ಐ.ಡಬ್ಲು.ಎಫ್ ರಾಜ್ಯ ಕಾರ್ಯದರ್ಶಿ ರೇಣುಕಮ್ಮ , ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಎನ್ ಭರಮಣ್ಣ, ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿ, ವಿವಿಧ ಸಂಘಟನೆಯ ಮುಖಂಡರು ಹಾಜರಿದ್ದರು.
- ಕರುನಾಡ ಕಂದ
