
ದಿ. 25/03/2025ರಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಪಾಶ್ಚಾಪೂರದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಹುಕ್ಕೇರಿ, ಮಹಾದೇವಿ ಮೆಮೊರಿಯಲ್ ಆಸ್ಪತ್ರೆ ಪಾಶ್ಚಾಪೂರ ಹಾಗೂ ಎಚ್ ಬಿ ಎನ್ ಪ್ರಕಾಶನ ಇವುಗಳ ಸಂಯೋಗದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು ಪ್ರಾರಂಭದಲ್ಲಿ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ದತ್ತಾತ್ರೇಯ ಹೆಜ್ಜೆ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಾಹಿತಿಗಳು ಹನುಮಂತರಾವ್ ನಾಗಪ್ಪಗೋಳ, ಶೋಭಾ ಚಿಂಚಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ ಗಣಿ ದರ್ಗಾ ಆಗಮಿಸಿದ್ದರು. ಸುಂದರ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ತುಂಬಾ ದೊಡ್ಡದು ಅದಕ್ಕಾಗಿ ಪ್ರತಿ ಕುಟುಂಬದಲ್ಲೂ ಹೆಣ್ಣು ಮಕ್ಕಳು ಆರೋಗ್ಯವಂತರಾಗಿ ಇರಬೇಕು. ಹಲವು ಮಹಿಳೆಯರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅಂಥವರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲು ಶಿಬಿರ ಹಮ್ಮಿಕೊಂಡಿದ್ದು ಮಹಿಳಾ ದಿನಾಚರಣೆ ಕಾರ್ಯಕ್ರಮ ಸಾರ್ಥಕವಾಗಿದೆ ಎಂದು ಹನುಮಂತರಾವ್ ನಾಗಪ್ಪಗೋಳ ಸಾಹಿತಿಗಳು ಹೇಳುತ್ತಾ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಹುಕ್ಕೇರಿ ತಾಲೂಕು ಇಂತಹ ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಸ್ವಾಗತಾರ್ಹವಾಗಿದೆ. ಮಹಿಳಾ ಅತಿಥಿ ಶೋಭಾ ಚಿಂಚಿ ಮಾತನಾಡಿ ಮಹಿಳೆಯರು ತಮ್ಮ ಎಷ್ಟೋ ಗುಪ್ತ ಸಮಸ್ಯೆಗಳನ್ನು ಆಸ್ಪತ್ರೆಗೆ ತೋರಿಸದೆ ಹಾಗೆ ಮರೆಮಾಚಿ ಅನಾರೋಗ್ಯ
ಪೀಡಿತರಾಗಿ ಸಾವನ್ನು ತಂದುಕೊಳ್ಳುವುದು ದುರಂತ ಸಂಗತಿ. ಅಂಥವರಿಗೆ ಇಂದಿನ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಸಹಾಯಕವಾಗಿದೆ ಎಂದು ಹೇಳಿದರು. ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ರಾಜ್ಯ ಕಾರ್ಯದರ್ಶಿ ಜಯಶ್ರೀ ಮತ್ತಿಕೊಪ್ಪ ಮಾತನಾಡಿ ಈ ಶಿಬಿರದ ಅವಕಾಶ ಎಲ್ಲರೂ ಪಡೆದುಕೊಳ್ಳಬೇಕು ಎಂದು ಕರೆನೀಡಿದರು. ವೈದ್ಯರಾದ ಡಾ. ವಿನಾಯಕ ಡಿ ಹೆಜ್ಜೆ ಅವರು ಇಂದು ನಮ್ಮ ಆಸ್ಪತ್ರೆಗೆ ಬರುವ ಎಲ್ಲಾ ಮಹಿಳೆಯರಿಗೂ ಉಚಿತವಾಗಿ ಚಿಕಿತ್ಸೆ ಕೊಡುವುದಾಗಿ ತಿಳಿಸಿದರು. ಮುಖ್ಯ ಅತಿಥಿಗಳು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಹಿಳೆಯರು ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾಚರಣೆ ಸಂಭ್ರಮಿಸಿದರು. ಸಾಂಕೇತಿಕವಾಗಿ ವೈದ್ಯರಾದ ಡಾ. ವಿನಾಯಕ ಡಿ ಹೆಜ್ಜೆ , ಡಾ. ಸ್ಮಿತಾ ಪಾಟೀಲ್ ಅವರು ಮೊದಲು ಐದು ಜನ ಮಹಿಳೆಯರನ್ನು ತಪಾಸಣೆ ಮಾಡಿದರು ಅಧ್ಯಕ್ಷತೆ ವಹಿಸಿದ ಹೆಜ್ಜೆ ಗುರುಗಳು ಮಾತನಾಡಿ ನಮ್ಮ ಆಸ್ಪತ್ರೆಯ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಸಂತೋಷ ತಂದಿದೆ. ರೋಗಿಗಳ ಸೇವೆಯನ್ನು ಮಾಡಲು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷರು ನಮಗೊಂದು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಅವರ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು. ಈ ಸಂದರ್ಭದಲ್ಲಿ ಸದಸ್ಯರಾದ ವಿದ್ಯಾ, ಶಮ್ಮಿ ಮುಲ್ತಾನಿ, ಲಕ್ಷ್ಮೀ ವಾಳದವರ, ಡಾ.ಸ್ಮೀತಾ ಪಾಟೀಲ್ ಮತ್ತು ಮಹಾದೇವಿ ಮೆಮೊರಿಯಲ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗ,ಚಿಕಿತ್ಸೆಗೆ ಬಂದ ಮಹಿಳೆಯರು ಉಪಸ್ಥಿತರಿದ್ದರು. ಸುಮಾರು ಮೂವತ್ತರಿಂದ ನಾಲ್ವತ್ತು ಮಹಿಳೆಯರು ಭಾಗವಹಿಸಿದ್ದರು. ವಿದ್ಯಾ ನಾಗನಾಥ ಸ್ವಾಗತಿಸಿ ವಂದಿಸಿದರು. ಜಯಶ್ರೀ ಶಂಕರ್ ಮತ್ತಿಕೊಪ್ಪ ಕಾರ್ಯಕ್ರಮ ನಡೆಸಿಕೊಟ್ಟರು.
- ಕರುನಾಡ ಕಂದ
