ಕಾಸರಗೋಡು: ಯಕ್ಷಗಾನದ ಪ್ರಸಿದ್ಧ ಹಿಮ್ಮೇಳ ಕಲಾವಿದ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ದಿವಾಣ ಪ್ರಶಸ್ತಿ ಹಾಗೂ ಬಣ್ಣದ ಕಲಾವಿದ ಸದಾಶಿವ ಶೆಟ್ಟಿ ಗಾರ್ ಸಿದ್ಧಕಟ್ಟೆ ಅವರಿಗೆ ದಿವಾಣ ಕಲಾಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರು ಕುಂಟಲ್ಪಾಡಿ ಪಾಂಡವರ ಕಲ್ಲು ಬಳಿಯ ಅನನ್ಯ ಫಾರ್ಮ್ಸ್ ಫುಡ್ ಸಂಸ್ಥೆಯ ಆವರಣದಲ್ಲಿ ದಿವಾಣ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಿತು.
ಸಮಾರಂಭದಲ್ಲಿ ದಿವಾಣ ತಿರುಮಲೇಶ್ವರಿ ಅಮ್ಮನವರ ಸ್ಮರಣಾರ್ಥ ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ನಮಾಜ ಸೇವೆ ಹಾಗೂ ಗೋ ಸೇವಾತಿಲಕ ಡಾ. ಉದಯಕುಮಾರ್ ನೂಜಿ ಹಾಗೂ ಡಾ. ಶಾರದಾ ದಂಪತಿಗೆ ಅನನ್ಯ ರಜತ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಿದ್ದರು.
ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಪ್ರಭಾರ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ವಹಿಸಿದ್ದರು. ವಿದ್ವಾನ್ ಹರಿನಾರಾಯಣದಾಸ ಆಸ್ರಣ್ಣ ಉದ್ಘಾಟಿಸಿದರು.
ಡಾ.ಎಂ.ಪ್ರಭಾಕರ ಜೋಷಿಯವರು ದಿವಾಣ ಭೀಮ ಭಟ್ ಅವರ ಸಂಸ್ಮರಣೆ ನಡೆಸಿದರು. ಪ್ರಶಸ್ತಿ ಪುರಸ್ಕೃತರನ್ನು ಯಕ್ಷಗಾನ ಕಲಾವಿದ ಹರೀಶ ಬೊಳಂತಿಮೊಗರು ಅಭಿನಂದಿಸಿದರು.
ಬಳಿಕ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ‘ಸಾಕೇತ ಸಾಮ್ರಾಜ್ಞೆ’ ಎಂಬ ನೂತನ ಯಕ್ಷಗಾನ ಪ್ರಸಂಗವು ಜನಮನಸೂರೆಗೊಂಡಿತು.
ಡಾ.ಹಾದಿಗಲ್ಲು ಲಕ್ಷ್ಮೀ ನಾರಾಯಣ ಅತಿಥಿಯಾಗಿ ಭಾಗವಹಿಸಿದ್ದರು.
ದಿವಾಣ ಪ್ರತಿಷ್ಠಾನದ ಸಂಚಾ ಲಕ ಹಾಗೂ ಅನನ್ಯ ಫೀಡ್ಸ್ ಮಾಲಕ ದಿವಾಣ ಗೋವಿಂದ ಭಟ್ ಹಾಗೂ ದಿವಾಣ ಅನನ್ಯ ಭಟ್ ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಷ್ರಸಾದ್, ಶಿವಮೊಗ್ಗ,
