
ಬಳ್ಳಾರಿ / ಕಂಪ್ಲಿ : ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯ CSR ನಿಧಿಯ ಸಹಾಯದೊಂದಿಗೆ MRT ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಕೊಂಡ್ಲಹಳ್ಳಿ ಮೊಳಕಾಲ್ಮೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬಳ್ಳಾರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿ ವತಿಯಿಂದ ದಿನಾಂಕ 27 ಮಾರ್ಚ್ 25 ಗುರುವಾರಂದು ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ನೇತ್ರಾಧಿಕಾರಿ H. ಪ್ರಕಾಶ ಗೌಡ ಮಾತನಾಡಿ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಆರೈಕೆಯನ್ನು ಒದಗಿಸುವ ಪ್ರಯತ್ನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ನಮ್ಮ ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬಳ್ಳಾರಿಯ ವಿಮ್ಸ್ ಹಾಸ್ಪಿಟಲ್ ರೆಟಿನಾ ತಜ್ಞರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ|| ಎನ್. ವಿಜಯ್ ಇವರ ನೇತೃತ್ವದಲ್ಲಿ ಸುಮಾರು 91 ಜನರನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 30 ರೋಗಿಗಳಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಾಳೆ ಅಂದರೆ ಶುಕ್ರವಾರ ಬೆಳಿಗ್ಗೆ ಬಳ್ಳಾರಿಯಲ್ಲಿ ಆಪರೇಷನ್ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಂ ಆರ್ ಟಿ ಗ್ರಾಮಾಂತರ ಕಣ್ಣಿನ ಆಸ್ಪತ್ರೆಯ ನೇತ್ರ ಪರೀವೀಕ್ಷಕ ಶಿವುಕುಮಾರ್, ಸಹಾಯಕ ವಂಶಿ ಆಶಾ ಕಾರ್ಯಕರ್ತರಾದ ಬಿ. ನಾಗರತ್ನ, ಆರ್, ವಲಿಮಾ, ಬಿ. ನಾಗರತ್ನಮ್ಮ, ಯು. ಪದ್ಮಾವತಿ, ಎ. ನಾಗರತ್ನ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
