ಯಾದಗಿರಿ/ ಗುರುಮಠಕಲ್ :
2024-25ನೇ ಸಾಲಿನ ಸಾಲಿನ ಕಲ್ಯಾಣ ಪಥ ಯೋಜನೆಯಡಿ ಅಂದಾಜು ಮೊತ್ತ 395.70 ಲಕ್ಷಗಳಲ್ಲಿ ಸುಮಾರು 4.68 ಕಿ.ಮೀ ರಸ್ತೆಯ ಕಾಮಗಾರಿ ಅಡಿಗಲ್ಲು ಸಮಾರಂಭ, ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಎಸ್.ಎಚ್.22 ರಾಜ್ಯ ಹೆದ್ದಾರಿಯಿಂದ ಕೊಂಕಲ್ ಗ್ರಾಮದವರೆಗೆ ವಾಯಾ ಪಾಡಪಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಡಿಗಲ್ಲು ಸಮಾರಂಭವನ್ನು ಗುರುಮಠಕಲ್ ಮತಕ್ಷೇತ್ರದ ಜನಪ್ರಿಯ ಶಾಸಕರು ಸನ್ಮಾನ್ಯಶ್ರೀ ಶರಣಗೌಡ ಕಂದಕೂರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ ಚಂದ್ರ ಕಟಕಟಿ, ಹಿರಿಯ ಮುಖಂಡರಾದ ಲಕ್ಷ್ಮರೆಡ್ಡಿ ಅನಪೂರ, ದೇವರಳ್ಳಿ ಬಸಣ್ಣ ಇನ್ನಿತರ ಮುಖಂಡರು, ಕಾರ್ಯಕರ್ತರು ಹಾಗೂ ಅಧಿಕಾರಿಗಳು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್
