
ಬಳ್ಳಾರಿ /ಕಂಪ್ಲಿ : ಬಿಸಿಲಿಗೆ ಬಸವಳಿದ ನಗರದ ಜನತೆಯ ದಾಹ ತಣಿಸುವಲ್ಲಿ ಜೆಸಿಐ ಕಂಪ್ಲಿ ಸೋನದ ಶುದ್ಧ ಕುಡಿಯುವ ನೀರಿನ ಅರವಟಿಗೆ ಉತ್ತಮ ಸೇವಾ ಕಾರ್ಯವಾಗಿದೆ ಎಂದು ಕಾನೂನು ಸುವ್ಯವಸ್ಥೆಯ ಪಿಎಸ್ಐ ಅವಿನಾಶ ಕಾಂಬಳೆ ಹೇಳಿದರು. ಅವರು ಇಲ್ಲಿನ ಪುರಸಭೆ ಮುಂಭಾಗದಲ್ಲಿ ಜೆಸಿಐ ಕಂಪ್ಲಿ ಸೋನಾ ಟೀಮ್ ಉತ್ಕರ್ಷ 2025 ತಂಡದಿಂದ ಆರಂಭಿಸಿದ ನೀರಿನ ಅರವಟ್ಟಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ದಿನೇದಿನೇ ಬಿಸಿಲ ತಾಪ ಹೆಚ್ಚುತ್ತಿದೆ, ನಗರ ಪ್ರದೇಶದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ನಾನಾ ಕೆಲಸಗಳಿಗೆ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಈ ಅರವಟಿಗೆ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ನಾನಾ ಕಚೇರಿಗಳಿಗೆ ಕಾರ‍್ಯ ನಿಮಿತ್ತ ನಗರಕ್ಕೆ ಬರುವ ಸಾರ್ವಜನಿಕರು, ಕೂಲಿಕಾರರು, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ ಎಂದು ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಜೆಸಿ ಬಿ. ರಸೂಲ್ ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್, ಜೆಸಿಐ ಕಂಪ್ಲಿ ಸೋನಾದ ಉಪಾಧ್ಯಕ್ಷ ಜೆಸಿ ಯು. ಜಿಲಾನ್, ಜೆಸಿಐ 24ರ ವಲಯಧಿಕಾರಿ ಜೆಸಿ ದರೋಜಿ ಮಂಜೇಶ, ಜೆಸಿಐ ಕಂಪ್ಲಿ ಸೋನಾದ ಪೂರ್ವಧ್ಯಕ್ಷರಾದ ಜೆಎಫ್ಎಂ ರಾಕೇಶ ಬಾಗ್ರೇಚ, ಹಿರಿಯ ಜೆಸಿ ಶಾಂತಿಲಾಲ್ ಬಾಲರ್, ಪುರಸಭೆಯ ಸಿಬ್ಬಂದಿಗಳಾದ ಅರ್. ಮಹಮದ್ ಗೌಸ್, ಮೇಘನಾ, ಜಿ. ನಾಗರಾಜ, ಮುಖಂಡರಾದ ರಾಮಸಾಗರ ಮೌಲಸಾಬ್, ಜಿ. ಸುಧಾಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
