
ಯಾದಗಿರಿ/ಗುರುಮಠಕಲ್:
ಶ್ರೀಶೈಲ ಜಾತ್ರಾ ನಿಮಿತ್ಯ ಕ್ಷೇತ್ರಕ್ಕೆ ಬಸ್ ವ್ಯವಸ್ಥೆ ಮಾಡಲು 19-03-2025 ಶನಿವಾರ ದಂದು ವೀರಶೈವ ಲಿಂಗಾಯತ ಸಮಾಜ ಗುರುಮಠಕಲ್ ವತಿಯಿಂದ ಮನವಿ ನೀಡಲಾಗಿತ್ತು ಈ ಕುರಿತು ಕರುನಾಡ ಕಂದ ಸುದ್ದಿ ಜಾಲತಾಣದಲ್ಲಿ ವರದಿ ಪ್ರಕಟವಾಗಿತ್ತು.
ಮನವಿಗೆ ಸ್ಪಂದನೆ ನೀಡಿ ಇಂದಿನಿಂದ ಬಸ್ ಪ್ರಾರಂಭ ಮಾಡಿರುವ ಗುರುಮಠಕಲ್ ಘಟಕ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್ ಯರನಾಳ ,ಸಹಾಯಕ ಸಂಚಾರಿ ನಿರೀಕ್ಷಕರು ಶ್ರೀ ಚಂದ್ರರೆಡ್ಡಿ ಮತ್ತು ಶ್ರೀ ಪ್ರಕಾಶ ದಂತಪುರ, ಸಂಚಾರಿ ನಿಯಂತ್ರಕರಾದ ಶ್ರೀ ಶರಣಪ್ಪ ಹೂಗಾರ ಇವರಿಗೆ ಮತ್ತು ಸುದ್ದಿ ಮಾಡಿದ ಕರುನಾಡ ಕಂದ ಪತ್ರಿಕೆಯವರಿಗೆ ವೀರಶೈವ ಲಿಂಗಾಯತ ಸಮಾಜ ಗುರುಮಠಕಲ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಶ್ರೀ ನಾಗಣ್ಣ ಕಾಳಗಿ ಹಿರಿಯ ಸಮಾಜ ಮುಖಂಡರು ತಿಳಿಸಿದರು.
ವರದಿ : ಜಗದೀಶ್ ಕುಮಾರ
