ಬಳ್ಳಾರಿ / ಕಂಪ್ಲಿ : ಬಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಹೊಸಪೇಟೆಗೆ ಭೇಟಿ ನೀಡಿ ಶಿಕ್ಷಕರ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಬದಲಾವಣೆ ಮಾಡುವಂತೆ ಮನವಿಯನ್ನು ನೀಡಲಾಯಿತು. ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ ಇವರೊಂದಿಗೆ ಸುಧೀರ್ಘವಾಗಿ ಚರ್ಚೆಯನ್ನು ಮಾಡಲಾಯಿತು.
ಅಪಘಾತ ವಿಮೆ, ಲಾಕರ್ ವ್ಯವಸ್ಥೆ,
ಸಾಲಗಳ ಮೇಲಿನ ಬಡ್ಡಿದರ ಕಡಿಮೆ ಮಾಡುವುದು, ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೀಡುವುದು,
ಸೇವಾ ಶುಲ್ಕದ ದರವನ್ನು ಕಡಿಮೆ ಮಾಡುವುದು, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಯಾವುದೇ ಷರತ್ತು ಇಲ್ಲದೆ ಒದಗಿಸುವುದು, ವೈಯಕ್ತಿಕವಾಗಿ ಪಡೆಯುವ ಸಾಲಕ್ಕೆ ಜಾಮೀನುದಾರರು ಇಲ್ಲದೆ ಇನ್ಶೂರೆನ್ಸ್ ಕಟ್ಟಿಸಿಕೊಳ್ಳುವ ಪದ್ಧತಿ ಜಾರಿಗೆ ತರುವುದು,
ಶಿಕ್ಷಕರ ವೇತನಕ್ಕೆ ಅನುಗುಣವಾಗಿ 25 ಲಕ್ಷದವರೆಗೆ ಸಾಲವನ್ನು ನೀಡುವುದು, ಶಿಕ್ಷಕರ ವೇತನ ವಿಳಂಬವಾದಲ್ಲಿ ಶಿಕ್ಷಕರ ಉಳಿತಾಯ ಖಾತೆಗೆ ಬಡ್ಡಿ ರಹಿತವಾಗಿ 10,000 ಮಂಗಡವಾಗಿ ನೀಡುವುದು, ನಿವೃತ್ತ ಶಿಕ್ಷಕರಿಗೆ ಸರಳ ಮತ್ತು ಅರ್ಥಪೂರ್ಣವಾದ ಸನ್ಮಾನ ಕಾರ್ಯಕ್ರಮವನ್ನು ವರ್ಷಕ್ಕೊಮ್ಮೆ ಏರ್ಪಡಿಸುವುದು,
ಇತರ ವಿಷಯಗಳನ್ನು ಚರ್ಚಿಸಲಾಗಿ
ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ ನಾಳೆ ಬ್ಯಾಂಕಿನ ಸಭೆ ಇದ್ದು ಐದು ದಿನದ ಒಳಗಾಗಿ ನಿಮ್ಮ ಸ್ಯಾಲರಿ ಅಕೌಂಟ್/ ವೇತನ ಉಳಿತಾಯ ಖಾತೆ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘ ಕಂಪ್ಲಿಯ ಅಧ್ಯಕ್ಷರಾದ ಶ್ರೀ ದೊಡ್ಡಬಸಪ್ಪ ಜಿ ಪಿ ಟಿ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ ಶಿಕ್ಷಕರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಸಿ.ಕೆ ರಾಮಚಂದ್ರಪ್ಪ ಶಿಕ್ಷಕರ ಸಂಘದ ಕಾರ್ಯದರ್ಶಿ ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಸುನಿತಾ ಪೂಜಾರ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಗಂಗಮ್ಮ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಆದ ಶ್ರೀ ಹೆಚ್. ಜಡೆಪ್ಪ ಸಿಆರ್‌ಪಿಗಳಾದ ಭೂಮೇಶ
ಮೆಟ್ರಿ ಶಾಲೆಯ ಮುಖ್ಯಗುರು ಜಿಲ್ಲಾ ಶಿಕ್ಷಕರ ಸಂಘದ ನಾಮ ನಿರ್ದೇಶಕ ಸದಸ್ಯರಾದ ಶ್ರೀ ಮೂರ್ತಿ ಅವರು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
