
ಬೆಂಗಳೂರು: ಈಗಾಗಲೇ ಮೆಟ್ರೋ, ಸಾರಿಗೆ ಬಸ್ ಪ್ರಯಾಣದ ದರ ಹೆಚ್ಚಳದಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯದೆ ಜನತೆಗೆ
ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಬಿಸಿ ಮುಟ್ಟಿಸುವುದನ್ನು ಮುಂದುವರೆಸಿದೆ.
ಜನತೆಗೆ ಸರ್ಕಾರ ಬಿಸಿಲಿನ ಶಾಖದ ಜೊತೆ ಬೆಲೆ ಏರಿಕೆಯ ಶಾಕ್ ನೀಡಿದ್ದು, ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂ. ಏರಿಕೆ ಮಾಡಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದ್ದು ನಾಳೆಯಿಂದಲೇ ನೂತನ ದರ ಜಾರಿಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಲೀಟರ್ ಗೆ 4 ರೂ. ಏರಿಕೆಗೆ ಅನುಮೋದನೆ ದೊರಕಿದ್ದು, ರಾಜ್ಯದ ಜನರ ಪಾಲಿಗೆ ಯುಗಾದಿಯ ಕಹಿ ಹೆಚ್ಚಿಸಿದೆ. ಇದರೊಟ್ಟಿಗೆ ವಿಧ್ಯುತ್ ಬೆಲೆ ಏರಿಕೆಯ ಮುನ್ಸೂಚನೆಯೂ ಸಹ ದೊರೆತಿರುವುದು ರಾಜ್ಯದ ಜನರ ಪಾಲಿಗೆ ಯುಗಾದಿ ಹಾಗೂ ರಂಜಾನ್ ಸಂಭ್ರಮಕ್ಕೆ ಕರಾಳತೆ ಮೂಡಿಸಿದೆ.
ವರದಿ : ಕೆ ಆರ್ ಶಂಕರ್ ಭದ್ರಾವತಿ
