
ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ
ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸಾತನೂರ ಗ್ರಾಮದಲ್ಲಿ ಜೀವನ ಜ್ಯೋತಿ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಸಾತನೂರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು. ಇದರ ನಿಮಿತ್ತವಾಗಿ ಮಾತೃಭೂಮಿ ವಂದನೆ ಕಾರ್ಯಕ್ರಮ ನಡೆದಿದೆ.
ಮಕ್ಕಳಿಗೆ ಯಾವ ರೀತಿ ಸಂಸ್ಕಾರ ಕೊಡುತ್ತೇವೋ ಅದೇ ರೀತಿ ಮಕ್ಕಳು ಬೆಳೆಯುತ್ತವೆ. ಮೊದಲಿಗೆ ಮನೆಯ ಮೊದಲ ಪಾಠಶಾಲೆ ಎರಡನೇ ಗುರು ಶಿಕ್ಷಕನಾಗಿರುತ್ತಾನೆ. ಒಂದು ಗಾದೆ ಮಾತಿದೆ ಮೂರು ವರ್ಷದ ಬುದ್ಧಿ 100 ವರ್ಷದವರಿಗೆ ಅಂತ, ಮುಂದಿನ ದಿನಮಾನಗಳಲ್ಲಿ ಮಕ್ಕಳು ನಾಗರಿಕರಾಗಿ ಮಕ್ಕಳು ರಾಜ್ಯಮಟ್ಟದಲ್ಲಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ದಾನಗಳಲ್ಲಿ ನೇತ್ರದಾನ, ರಕ್ತದಾನ, ಭೂದಾನ, ಯಾವುದೇ ದಾನಗಳಲ್ಲಿ ಅನ್ನದಾನವು ಶ್ರೇಷ್ಠ ದಾನವಾಗಿದೆ. ಸಾತನೂರು ಗ್ರಾಮದ ಜನರು ಯಾವುದೇ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಗ್ಗಟಿನಿಂದ ಪ್ರಸಾದ ವ್ಯವಸ್ಥೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಸಂಸ್ಕೃತದಲ್ಲಿ ಒಂದು ಶ್ಲೋಕ ಇದೆ ಅನ್ನದಾನಂ, ಪರಂ ಧಾನಂ, ವಿದ್ಯಾ ದಾನಂ ಪರಂ, ಮತಂ, ಪರಂ ಅನ್ಯೆನ್ಯ ಶೈಕ್ಷಣಿಕ ಕೃತಂ ಯಾವುದೇ ಜೀವಂತ ಇದೆ ಅಂದರೆ ಅದು ವಿದ್ಯೆ ಎಂಬುದು ವಿದ್ಯೆದಾನವು ಶ್ರೇಷ್ಠವಾಗಿದೆ. ಅದು ಪರಂಪರಗತವಾಗಿ ಬೆಳೆಯುತ್ತಿದೆ. ಇದನ್ನು ಶ್ರೀ ಶ್ರೀ ಶ್ರೀ ಅವಧೂತ ನಾಗಲಿಂಗ ಶರಣರು ಮುಂದುವರಿಸುತ್ತಾ ಬಂದಿದ್ದಾರೆ ಎಂಬ ಮಾತನ್ನು ಹೇಳುತ್ತಾ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ. ಶ್ರೀ ಷ. ಬ್ರ. ತಪೋಭೂಷಣ ಕ್ರಿಯೆ ಶೀಲ ಶ್ರೀ ರತ್ನ ಶ್ರೀ ಸಿದ್ದ ವೀರೇಶ್ವರ ಶಿವಾಚಾರ್ಯರು ನುಡಿದರು.
ಶಿಕ್ಷಣವು ಬಹಳ ಮುಖ್ಯವಾಗಿರುತ್ತದೆ. ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮುಂದಿನ ದಿನಮಾನಗಳಲ್ಲಿ ಏನನ್ನಾದರೂ ಸಾಧಿಸಬಹುದು. ಈ ಶಾಲೆಯು ಬಹಳ ಹೆಮ್ಮೆರವಾಗಿ ಬೆಳೆಯುತ್ತಿದೆ. ಮತ್ತು ಜ್ಞಾನಜ್ಯೋತಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ತಾಲೂಕ, ಜಿಲ್ಲಾ, ರಾಜ್ಯಮಟ್ಟದಲ್ಲಿ ಹೆಸರು ಪಡೆದು ನಮ್ಮೂರಿನ ಕೀರ್ತಿಯನ್ನು ಬೆಳೆಸುತ್ತಾರೆ. ನಮ್ಮೂರಿನ ತಂದೆ ತಾಯಿಗಳು ಪಾಲಕರು ಗ್ರಾಮದ ಜನರು ಸಹಕಾರ ಕೊಡಬೇಕು. ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ತಮ್ಮ ಅದ್ಭುತವಾದ ಮಾತನ್ನು ಶ್ರೀ ಭೀಮಣ್ಣ ಎಸ್ ಸಾಲಿ ಕಾಂಗ್ರೆಸ್‌ನ ನಾಯಕರು ಈ ಸಂದರ್ಭದಲ್ಲಿ ಹೇಳಿದರು.
ಮಕ್ಕಳು ದೇವರ ಸಮಾನ. ಮಕ್ಕಳ ಶಿಕ್ಷಣಕ್ಕೆ ತಂದೆ ತಾಯಿಗಳು ಸಹಕಾರ ನೀಡಬೇಕು. ಈ ಶಾಲೆಯು ಶಿಕ್ಷಣ ಜೊತೆಗೆ ಸಂಸ್ಕಾರವು ಕೂಡಾ ಕಲಿಸುತ್ತಾ ಇದೆ. ನನ್ನದೊಂದು ಆಸೆ ಇದೆ ನಮ್ಮೂರಿನ ಜ್ಞಾನಜ್ಯೋತಿ ಶಾಲೆಯನ್ನು ರಾಜ್ಯಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಅಭಿಲಾಷೆ ಇದೆ ಅದಕ್ಕಾಗಿ ಸಾತನೂರ್, ಹೊಸೂರ್, ಬಂಕಲಗಾ, ಡೋಣಗಾಂವ ಜನರು ಸಹಕಾರ ಕೊಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಶ್ರೀ ಬಸವರಾಜ್ ಎಸ್. ಸ್ಥಾವರಮಠ ಶಿಕ್ಷಣ ಪ್ರೇಮಿಗಳು ಮತ್ತು ಮಾರ್ಗದರ್ಶಕರು ಜ್ಞಾನಜ್ಯೋತಿ ಹಿ. ಪ್ರಾ. ಶಾಲೆ ಸಾತನೂರ್ ಅಪ್ಪ ಅವರು ಈ ಸಂದರ್ಭದಲ್ಲಿ ತಮ್ಮ ಮನಸ್ಸಿನ ಮಾತು ವ್ಯಕ್ತಪಡಿಸಿದರು.
ಈ ಜ್ಞಾನ ಜ್ಯೋತಿ ಶಾಲೆಗೆ ತನು ಮನ ಧನದಿಂದ ಹಗಲು ಇರುಳು ಎನ್ನದೆ ತಮ್ಮ ಸೇವೆಯನ್ನು ಮಾಡುತ್ತಿರುವ ಶ್ರೀ ಬಸವರಾಜ ಸ್ಥಾವರಮಠ, ಶ್ರೀ ಶಂಭುಲಿಂಗ ಆವಂಟಿ, ಶ್ರೀ ರೇವಣಸಿದ್ಧಪ್ಪಾ ದೊಡ್ಡಮನಿ , ಶ್ರೀ ಚಂದ್ರಶೇಖರ್ ಸಾಹು, ಶ್ರೀ ಶರಣಬಸಪ್ಪ ಬೊಮ್ಮಣಿ, ಮಲ್ಲಿನಾಥ ಮಾನಶೆಟ್ಟಿ, ವಿಶ್ವರಾಧ್ಯ ಪಾಟೀಲ್ ಡೋಣಗಾವ್, ಸಾತನೂರು, ಹೊಸೂರ್,ಬಂಕಲಗ ಡೊಣಗಾವ್, ಗ್ರಾಮದ ಜನರು ಸಹಕಾರ ಜೊತೆಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿಸಿದರು.
ನಮ್ಮ ಶಾಲೆಯಲ್ಲಿ ಕಲಿಕೆಯ ಜೊತೆಯಲ್ಲಿಯೇ ಕಂಪ್ಯೂಟರ್ ತರಬೇತಿ, ಸಂಗೀತ ಪಾಠಶಾಲೆ, ಮತ್ತು ಗ್ರಾಮೀಣ ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ನಮ್ಮ ಶಾಲೆಯಲ್ಲಿ ಪ್ರಾರಂಭಿಸುತ್ತೇವೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಾತನೂರು, ಬಂಕಲಗ, ಹೊಸೂರ್, ಡೋಣಗಾಂವ್ ಗ್ರಾಮದ ಪಾಲಕರು ಸಹಕಾರ ಕೊಟ್ಟರೆ 8ನೇ ರಿಂದ ಪಿಯುಸಿವರೆಗೆ, ಶಾಲೆಯನ್ನು ಪ್ರಾರಂಭಿಸುತ್ತೇವೆ. ಎಂದು ಶ್ರೀ ಶ್ರೀ ಶ್ರೀ ಅವಧೂತ ನಾಗಲಿಂಗ ಶರಣರ ಅಭಿಲಾಷೆಯದಂತೆ ಈ ಸಂಸ್ಥೆಯ ಆಡಳಿತ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ ವಿವೇಕಾನಂದ್ ಎಂ ಪೂಜಾರಿ ಅವರು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿರುವ ಶ್ರೀ ಶ್ರೀ ಶ್ರೀ ಅವಧೂತ ನಾಗಲಿಂಗ ಶರಣರು ಅಧ್ಯಕ್ಷರು ಶ್ರೀ ಸಾಧು ಸಿದ್ದಯ್ಯಪ್ಪ ಸಾಂಸ್ಕೃತಿಕ ಟ್ರಸ್ಟ್ ಕವಲಗಾ ಮತ್ತು ಶ್ರೀ ಕರಿಕಲ್ ದೇವಿ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ಇವಣಿ ಗೇಟ್, ಶ್ರೀ ಶ್ರೀ ಶ್ರೀ ಷ. ಬ್ರ. ತಪೋಭೂಷಣ ಕ್ರಿಯಾಶೀಲ ಶ್ರೀ ರತ್ನ ಶ್ರೀ ಸಿದ್ದ ವೀರೇಶ್ವರ ಶಿವಾಚಾರ್ಯರು ಪಂಚಗ್ರಹ ಹಿರೇಮಠ್ ದಿಗ್ಗಾಂವ ಈ ಶ್ರೀ ಬಸವರಾಜ ಎಸ್.ಸ್ಥಾವರಮಠ ಶಿಕ್ಷಣ ಪ್ರೇಮಿಗಳು ಮತ್ತು ಮಾರ್ಗದರ್ಶಕರು ಜ್ಞಾನಜೋತಿ ಹಿ. ಪ್ರಾ. ಶಾಲೆ ಸಾತನೂರ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಸಾಹೇಬಗೌಡ ಎಸ್. ಪೊಲೀಸ್ ಪಾಟೀಲ ಸಾತನೂರ, ಶ್ರೀ ಭೀಮಣ್ಣ ಎಸ್. ಸಾಲಿ ಕಾಂಗ್ರೇಸ್ ನಾಯಕರು ಸಾತನೂರ, ಶ್ರೀ ಮಲ್ಲಿಕಾರ್ಜುನ ಎಮ್ಮೆನೂರ್ ಬಿಜೆಪಿ ಹಿರಿಯ ಮುಖಂಡರು ಬಂಕಲಗಾ, ಶ್ರೀಮತಿ ಚಂದಮ್ಮ ಬಿ.ನಡಿಗೇರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಸಾತನೂರ, ಶ್ರೀ ಶ್ರೀಕಾಂತ್ ಚಪಾಟ್ಲಿ ಎಸ್. ಎಡಿ. ಎಮ್. ಸಿ. ಅಧ್ಯಕ್ಷರು ಸ. ಹಿ. ಪ್ರಾ. ಶಾಲೆ ಸಾತನೂರ, ಶ್ರೀ ಮಲ್ಲೇಶಪ್ಪಾ ಟಿಂಗಳಿ ಖ್ಯಾತ ಉದ್ದಿಮೆದಾರರು ಸಾತನೂ ರ, ಶ್ರೀ ಶರಣಬಸಪ್ಪ ಬೊಮ್ಮಾಣೆ ಮಾರ್ಗದರ್ಶಕರು,ಶ್ರೀ ಮಲ್ಲೇಶಪ್ಪ ಸಾಹು ಆಂವಟಿ ಮುಖಂಡರು,ಶ್ರೀ ರೇವಣಸಿದ್ದಪ್ಪ ಎನ್ ದೊಡಮನಿ ಗ್ರಾ. ಪಂ. ಸದಸ್ಯರು ಸಾತನೂರ, ಶ್ರೀ ಬಾಬುರಾಜ ಡಿ.ಕಿರಣಗಿ ಗ್ರಾ. ಪಂ. ಸದಸ್ಯರು ಸಾತನೂರ, ಶ್ರೀ ಮಹಿಬೂಬ ಎಮ್. ಗಿರಣಿ ಗ್ರಾ. ಪಂ. ಸದಸ್ಯರು ಸಾತನೂರ, ಶ್ರೀ ರಾಮಣ್ಣಗೌಡ ನೂನಿ ಹಿರಿಯರು ಡೋಣಗಾಂವ.ಶ್ರೀಮತಿ ನಾಗರತ್ನ ಎಸ್. ಅವಂಟಿ ಅಧ್ಯಕ್ಷರು ಮಾತೃಭಾರತಿ ಸಮಿತಿ ಜ್ಞಾನಜ್ಯೋತಿ ಹಿ. ಪ್ರಾ.ಶಾಲೆ ಸಾತನೂರ, ಶ್ರೀಮತಿ ಶ್ರೀದೇವಿ ಎ. ನೆನೆಕಿ ಉಪಾಧ್ಯಕ್ಷರು ಮಾತೃ ಭಾರತಿ ಸಮಿತಿ ಜ್ಞಾನಜ್ಯೋತಿ ಹಿ. ಪ್ರಾ. ಶಾಲೆ ಸಾತನೂರ, ಶ್ರೀ ವಿವೇಕಾನಂದ ಎಂ.ಪೂಜಾರಿ ಜ್ಞಾನಜ್ಯೋತಿ ಹಿ. ಪ್ರಾ. ಶಾಲೆ ಸಾತನೂರ ಆಡಳಿತ ಜವಾಬ್ದಾರಿ, ಶ್ರೀಮತಿ ಸಂಗಮ್ಮ ಆರ್ ದೊಡ್ಡಮನಿ ಮುಖ್ಯ ಗುರುಗಳು ಜ್ಞಾನಜ್ಯೋತಿ ಹಿ. ಪ್ರಾ. ಶಾಲೆ ಸಾತನೂರ, ಶ್ರೀಮತಿ ಸೌಮ್ಯ ಸಿ ಆವಂಟಿ, ಕುಮಾರಿ ವಂದನಾ ಎಸ್.ಗುತ್ತೇದಾರ್ ಶ್ರೀಮತಿ ಅಂಬಿಕಾ ಬಿ. ನೂನಿ, ಶ್ರೀಮತಿ ಸಂಗೀತ ಬಿ ದಂಡಗುಂಡ, ಶ್ರೀಮತಿ ನಾಗಮ್ಮ ಬಿ ಕೊನಾಪುರ, ಚಂದ್ರಕಾಂತ ಕಾಳಗಿ, ಶ್ರೀಮತಿ ಸೌಮ್ಯ ಸಿ ಆವಂಟಿ ನಿರೂಪಣೆ ಮಾಡಿದರು, ಶ್ರೀಮತಿ ಸಂಗಮ್ಮ ಆರ್ ದೊಡ್ಮನಿ ಮುಖ್ಯ ಗುರುಗಳು ಸ್ವಾಗತಿಸಿದರು, ಶ್ರೀ ವಿವೇಕಾನಂದ ಎಮ್ ಪೂಜಾರಿ ವಂದಿಸಿದರು. ನಂತರ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
